Sunday, July 5, 2026
Sunday, July 5, 2026

ಕೃಷಿ ಭೂಮಿ ಹಡಿಲು ಬಿಡಬೇಡಿ: ಜಯರಾಮ ಶೆಟ್ಟಿ

ಕೃಷಿ ಭೂಮಿ ಹಡಿಲು ಬಿಡಬೇಡಿ: ಜಯರಾಮ ಶೆಟ್ಟಿ

Date:

ಕೋಟ, ಮೇ 24: ಕೃಷಿ ಭೂಮಿ ಹಡಿಲು ಬೀಳಲು ಬಿಡಬೇಡಿ ಎಂದು ಕೋಟ ರೈತಧ್ವನಿ ಸಂಘಟನೆಯ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ರೈತ ಸಮುದಾಯಕ್ಕೆ ಕರೆ ನೀಡಿದರು. ಶನಿವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಗೆಳೆಯರ ಬಳಗ ಕಾರ್ಕಡ, ರೈತಧ್ವನಿ ಸಂಘ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಸ್ನೇಹಕೂಟ ಮಣೂರು ಇವರುಗಳ ಸಹಯೋಗದೊಂದಿಗೆ ೫೪ನೇ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವ ಕೃಷಿಕ ಮಣೂರು ಬಾಳೆಬೆಟ್ಟು ಚಂದ್ರಕಾಂತ್ ಮಧ್ಯಸ್ಥರಿಗೆ ಪಂಚವರ್ಣ ರೈತ ಪುರಸ್ಕಾರ ನೀಡಿ ಗೌರವಿಸಲಾಯಿತು. ಪರಿಸರಸ್ನೇಹಿ ಪಾರಿಜಾತ ಗಿಡ ನೆಟ್ಟು ಗೋ ಪೂಜೆ ನೆರವೇರಿಸಲಾಯಿತು.

ಸಭಾಧ್ಯಕ್ಷತೆಯನ್ನು ಪಂಚವರ್ಣ ಸಂಘಟನೆಯ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಎಂ.ಎನ್ ಮಧ್ಯಸ್ಥ ಅಭಿನಂದನಾ ನುಡಿಗಳನ್ನಾಡಿದರು. ಮಣೂರು ಮಹಾಲಿಂಗೇಶ್ವರ ಸಭಾಂಗಣದ ಮುಖ್ಯಸ್ಥ ರಾಜೇಂದ್ರ ಉರಾಳ ಸನ್ಮಾನಿತರ ಪರವಾಗಿ ಮಾತನಾಡಿದರು. ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಉದ್ಘಾಟನೆ ನೆರವೇರಿಸಿದರು.

ಮುಖ್ಯ ಅಭ್ಯಾಗತರಾಗಿ ಸ್ನೇಹಕೂಟದ ನಿರ್ದೇಶಕ ವಿಷ್ಣುಮೂರ್ತಿ ಮಯ್ಯ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಸ್ನೇಹಕೂಟದ ಅಧ್ಯಕ್ಷೆ ಭಾರತಿ ವಿ ಮಯ್ಯ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಸನ್ಮಾನ ಪತ್ರವನ್ನು ಸ್ನೇಹಕೂಟದ ವಿನಯ ಉಡುಪ ವಾಚಿಸಿದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿ ವಂದಿಸಿದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಿದ್ಧಾಪುರ ಏತ ನೀರಾವರಿ ಯೋಜನೆ ಪುನರಾರಂಭಗೊಳಿಸಿ- ಸಚಿವರಿಗೆ ಸಂಸದ ಬಿ.ವೈ. ರಾಘವೇಂದ್ರ ಮನವಿ

ಬೈಂದೂರು, ಜು.4: ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ...

‘ಸ್ಮರಣ ಪಾಕ್ಷಿಕ’ ಉದ್ಘಾಟನೆ

ಉಡುಪಿ, ಜು.4: ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ 125ನೇ ಜಯಂತ್ಯುತ್ಸವದ ಅಂಗವಾಗಿ...

ಕುತೂಹಲ ಮೂಡಿಸಿದ ಹಾಲಿ ಮಾಜಿ ಸಿಎಂ ಭೇಟಿ

ಬೆಂಗಳೂರು, ಜು.4: ಮುಖ್ಯಮಂತ್ರಿಯಾಗಿ ಒಂದು ತಿಂಗಳ ಸೇವೆಯನ್ನು ಪೂರ್ಣಗೊಳಿಸಿದ ಮುಖ್ಯಮಂತ್ರಿ ಡಿ.ಕೆ....

ಸಂತರು ನಡೆದ ದಾರಿಯೇ ಸಮಾಜದ ಉದ್ಧಾರದ ದಾರಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು, ಜು.4: ಕನಕಪುರದ ಶ್ರೀ ದೇಗುಲ ಮಠದ ಲಿಂಗೈಕ್ಯ ಪರಮಪೂಜ್ಯ ನಿ.ಪ್ರ.ಸ್ವ...
error: Content is protected !!