Sunday, June 14, 2026
Sunday, June 14, 2026

ಶೈಕ್ಷಣಿಕ ಸೇವೆಗೆ ಸಂಘ ಸಂಸ್ಥೆಗಳ ಆದ್ಯತೆ ಶ್ಲಾಘನೀಯ: ಸಂಪತ್ ಕುಮಾರ್ ಶೆಟ್ಟಿ

ಶೈಕ್ಷಣಿಕ ಸೇವೆಗೆ ಸಂಘ ಸಂಸ್ಥೆಗಳ ಆದ್ಯತೆ ಶ್ಲಾಘನೀಯ: ಸಂಪತ್ ಕುಮಾರ್ ಶೆಟ್ಟಿ

Date:

ಕೋಟ, ಮೇ 23: ಸಂಘ ಸಂಸ್ಥೆಗಳು ಶೈಕ್ಷಣಿಕ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಅತ್ಯಂತ ಪ್ರಶಂಸನೀಯ ಕಾರ್ಯ ಎಂದು ಉದ್ಯಮಿ ಸಂಪತ್ ಕುಮಾರ್ ಶೆಟ್ಟಿ ಹೇಳಿದರು. ಶುಕ್ರವಾರ ಮೂಡುಗಿಳಿಯಾರಿನಲ್ಲಿ ಗಿಳಿಯಾರು ಯುವಕ ಮಂಡಲ ಇದರ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸತತ ಹತ್ತು ವರ್ಷ ಸೇವೆ ಸಲ್ಲಿಸಿದ ಏಳು ಸೇವಾಧ್ಯಕ್ಷರಿಗೆ ಗೌರವಿಸಲಾಯಿತು. ಗಿಳಿಯಾರು ಯುವಕ ಮಂಡಲದ ದಶಮ ಸಂಭ್ರಮದ ಪುರಸ್ಕಾರವನ್ನು ಸಮಾಜ ಸೇವಕ ರವಿ ಕಟಪಾಡಿ ಇವರಿಗೆ ನೀಡಲಾಯಿತು.

ಸಭಾಧ್ಯಕ್ಷತೆಯನ್ನು ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ಸುಭಾಷ್ ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ನ್ಯೂ ಕರ್ನಾಟಕ ಬಿಲ್ಡರ್ಸ್ ಮಾಲಿಕ ಚೇತನ್ ಕುಮಾರ್ ಶೆಟ್ಟಿ, ಹೊನ್ನಾರಿ ಬೊಬ್ಬರ್ಯ ದೈವಸ್ಥಾನದ ಮೊಕ್ತೇಸರ ಮಹಾಬಲ ಹೇರ್ಳೆ, ಬೆಂಗಳೂರಿನ ಉದ್ಯಮಿ ಪುಣ್ಯ ಗೋಪಾಲ್ ಜಿ ಉಪಸ್ಥಿತರಿದ್ದರು. ಯುವಕ ಮಂಡಲದ ಮಾಜಿ ಅಧ್ಯಕ್ಷ ಯೋಗಾನಂದ ಆರ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಪ್ರದೀಪ್ ಪುತ್ರನ್ ನಿರೂಪಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸೌಕೂರು ಮೇಳದ ವತಿಯಿಂದ ಪಂಜರ ಪಕ್ಷಿ ಯಕ್ಷಗಾನ ಪ್ರದರ್ಶನಗೊಂಡಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶ್ರೀ ಕೃಷ್ಣ ಮಠಕ್ಕೆ ಭೇಟಿ

ಉಡುಪಿ, ಜೂ.13: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶ್ರೀ ಕೃಷ್ಣ...

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಭೇಟಿ

ಕೊಲ್ಲೂರು, ಜೂ.12: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಶುಕ್ರವಾರ ಕೊಲ್ಲೂರು...

‘ಯಶೋ ಮಾಧ್ಯಮ-2026’ ಪ್ರಶಸ್ತಿಗೆ ಸುಬ್ರಹ್ಮಣ್ಯ ಜಿ ಕುರ್ಯ ಆಯ್ಕೆ

ಉಡುಪಿ, ಜೂ.12: ರಾಜಾಜಿನಗರದ ಸ್ಪಂದನ ಸೇವಾ ಸಂಸ್ಥೆ ವತಿಯಿಂದ ಪ್ರತಿ ವರ್ಷದಂತೆ...
error: Content is protected !!