Sunday, July 5, 2026
Sunday, July 5, 2026

ಮಾನಸಿಕ ಆರೋಗ್ಯದಂತಹ ಕಾರ್ಯಕ್ರಮಗಳು ಯುವಜನತೆಗೆ ಅಗತ್ಯ: ಡಾ. ಪಿ.ವಿ ಭಂಡಾರಿ

ಮಾನಸಿಕ ಆರೋಗ್ಯದಂತಹ ಕಾರ್ಯಕ್ರಮಗಳು ಯುವಜನತೆಗೆ ಅಗತ್ಯ: ಡಾ. ಪಿ.ವಿ ಭಂಡಾರಿ

Date:

ತೆಂಕನಿಡಿಯೂರು, ಮೇ 21: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ , ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ, ಇವರ ಸಹಯೋಗದಲ್ಲಿ ಯುವಜನತೆಯಲ್ಲಿ ಮಾನಸಿಕ ಆರೋಗ್ಯ ಎಂಬ ಮಾಹಿತಿ ಕಾರ್ಯಕ್ರಮ ನಡೆಯಿತು. ಡಾ ಎ.ವಿ.ಬಾಳಿಗ ಆಸ್ಪತ್ರೆಯ ಮನೋವೈದ್ಯರಾದ ಡಾ. ಪಿ.ವಿ ಭಂಡಾರಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡುತ್ತಾ, ಶಾಲಾ ಕಾಲೇಜುಗಳಲ್ಲಿ ಮಾನಸಿಕ ಆರೋಗ್ಯದಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ. ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಎರಡೂ ಕೂಡಾ ಪ್ರಾಮುಖ್ಯತೆ ಪಡೆದಿದೆ. ಒತ್ತಡ, ಆತಂಕ ಮತ್ತು ಶೈಕ್ಷಣಿಕ ಒತ್ತಡವನ್ನು ಸರಿಯಾಗಿ ನಿಭಾಯಿಸಲು ವ್ಯಾಯಾಮ, ಕ್ರೀಡೆ ಮತ್ತು ಆರೋಗ್ಯಕರ ಚಟುವಟಿಕೆಗಳನ್ನು ಮಾಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಾಗರಾಜ್ ಮೂರ್ತಿ ಇವರು ವಿವಿಧ ರೀತಿಯ ವರ್ತನಾ ವ್ಯಸನಗಳ ಬಗ್ಗೆ ಮಾತನಾಡುತ್ತಾ, ಕೇವಲ ಮಾದಕ ವ್ಯಸನಗಳಲ್ಲದೆ, ಕೆಲವು ವರ್ತನೆಗಳೂ ವ್ಯಸನಗಳಾಗುತ್ತವೆ. ಮೊಬೈಲ್‌ ಫೋನ್‌, ಸಾಮಾಜಿಕ ಜಾಲತಾಣಗಳು, ಆನ್‌ ಲೈನ್‌ ಗೇಮಿಂಗ್‌, ಜೂಜಾಟ, ಶಾಪಿಂಗ್, ಅಶ್ಲೀಲ ವಿಷಯ ವೀಕ್ಷಣೆ ಮತ್ತು ಇಂಟರ್‌ ನೆಟ್‌ ಬಳಕೆ ಇವುಗಳು ಮಿತಿ ಮೀರಿದಾಗ ವ್ಯಸನ ಉಂಟಾಗಬಹುದು ಇವುಗಳಿಂದ ಓದು, ಕೆಲಸ, ಕುಟುಂಬ ಜೀವನದ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು. ಇವುಗಳಿಂದ ಹೊರಬರಲು ಕ್ರೀಡೆ, ಪುಸ್ತಕ ಓದು ಹಾಗೂ ಹವ್ಯಾಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಮೊಬೈಲ್‌ ಮತ್ತು ಇಂಟರ್ನೆಟ್‌ ಬಳಕೆಗೆ ಸಮಯ ಮಿತಿಯನ್ನು ನಾವೇ ಹಾಕಿಕೊಳ್ಳಬೇಕು, ಅಗತ್ಯವಿದ್ದರೆ ಮನೋವೈದ್ಯರ ಸಲಹೆ ಪಡೆಯಿರಿ” ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ನಿತ್ಯಾನಂದ ವಿ ಗಾಂವಕರ ಇವರು ವಹಿಸಿದ್ದು, ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ. ವಿಷ್ಣುಮೂರ್ತಿ ಪ್ರಭು, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಸುಷ್ಮಾ ಟಿ., ವಿದ್ಯಾರ್ಥಿಗಳ ಕ್ಷೇತ್ರಕಾರ್ಯ ಮಾರ್ಗದರ್ಶಕರಾದ ಉಷಾ, ರಾಜೇಂದ್ರ ಎಮ್, ರವಿ ಎಸ್‌., ಸಮಾಜಕಾರ್ಯ ಉಪನ್ಯಾಸಕರಾದ ಡಾ. ಗಣೇಶ ಪ್ರಸಾದ್‌ ಜಿ ನಾಯಕ್‌ ಮತ್ತು ಪ್ರಭಾಕರ ಆಚಾರ್ಯ ಉಪಸ್ಥಿತರಿದ್ದರು. ದ್ವಿತೀಯ ವರ್ಷದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿನಿ ಶ್ರೀನಿಧಿ ಬಿ.ಎಸ್ ನಿರೂಪಿಸಿದರು. ಮೊಹಮ್ಮದ್ ಸಹಾದ್ ಸ್ವಾಗತಿಸಿ, ಅಕ್ಷಯ್ ಬಿ.ಆರ್ ವಂದಿಸಿದರು. ಮತ್ತು ಆಯೋಜಕರಾದ ಗೌತಮಿ ಜಿ.ಎಸ್.‌, ಶಾಂತಿಪ್ರಿಯ ಡಿಕೋಸ್ತ, ಅಂಕಿತ, ಪ್ರಿಯ ಆರ್.ಎಲ್‌., ಧೃತಿ ಕೆ.ವಿ. ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಿದ್ಧಾಪುರ ಏತ ನೀರಾವರಿ ಯೋಜನೆ ಪುನರಾರಂಭಗೊಳಿಸಿ- ಸಚಿವರಿಗೆ ಸಂಸದ ಬಿ.ವೈ. ರಾಘವೇಂದ್ರ ಮನವಿ

ಬೈಂದೂರು, ಜು.4: ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ...

‘ಸ್ಮರಣ ಪಾಕ್ಷಿಕ’ ಉದ್ಘಾಟನೆ

ಉಡುಪಿ, ಜು.4: ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ 125ನೇ ಜಯಂತ್ಯುತ್ಸವದ ಅಂಗವಾಗಿ...

ಕುತೂಹಲ ಮೂಡಿಸಿದ ಹಾಲಿ ಮಾಜಿ ಸಿಎಂ ಭೇಟಿ

ಬೆಂಗಳೂರು, ಜು.4: ಮುಖ್ಯಮಂತ್ರಿಯಾಗಿ ಒಂದು ತಿಂಗಳ ಸೇವೆಯನ್ನು ಪೂರ್ಣಗೊಳಿಸಿದ ಮುಖ್ಯಮಂತ್ರಿ ಡಿ.ಕೆ....

ಸಂತರು ನಡೆದ ದಾರಿಯೇ ಸಮಾಜದ ಉದ್ಧಾರದ ದಾರಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು, ಜು.4: ಕನಕಪುರದ ಶ್ರೀ ದೇಗುಲ ಮಠದ ಲಿಂಗೈಕ್ಯ ಪರಮಪೂಜ್ಯ ನಿ.ಪ್ರ.ಸ್ವ...
error: Content is protected !!