Friday, September 4, 2026
Friday, September 4, 2026

ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನ: ಸಾಮೂಹಿಕ ಲಕ್ಷ ಪ್ರದಕ್ಷಿಣಾ ನಮಸ್ಕಾರ

ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನ: ಸಾಮೂಹಿಕ ಲಕ್ಷ ಪ್ರದಕ್ಷಿಣಾ ನಮಸ್ಕಾರ

Date:

ಉಡುಪಿ, ಮೇ 17: ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನದಲ್ಲಿ ಅಧಿಕ ಜೇಷ್ಠ ಮಾಸ ಪ್ರಯುಕ್ತ ಆಯೋಜಿಸಲಾದ ಸಾಮೂಹಿಕ ಲಕ್ಷ ಪ್ರದಕ್ಷಿಣಾ ನಮಸ್ಕಾರ ಸೇವೆಯ ಉದ್ಘಾಟನೆಯನ್ನು ಆಡಳಿತ ಮೊಕ್ತೇಸರರು ಹಾಗೂ ಮಾಜಿ ಶಾಸಕರಾದ ಕೆ. ರಘುಪತಿ ಭಟ್ ನೆರವೇರಿಸಿದರು.

ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿ ನಡೆದ ಋಕ್ ಸಂಹಿತಾ ಯಾಗ, ಶ್ರೀಮದ್ಭಾಗವತ ಸಪ್ತಾಹ ಹಾಗೂ 5 ಲಕ್ಷ ಸುತ್ತು ಪ್ರದಕ್ಷಿಣಾ ಕಾರ್ಯಕ್ರಮಗಳು ತಮ್ಮೆಲ್ಲರ ಸಹಕಾರದಿಂದ ಅತ್ಯಂತ ವಿಜೃಂಭಣೆಯಿಂದ ಯಶಸ್ವಿಯಾಗಿ ಜರುಗಿದುದನ್ನು ಸ್ಮರಿಸಿಕೊಂಡ ಅವರು, ಊರ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸೇವೆಯನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.

ಅರ್ಚಕರಾದ ಕೆ. ದಿವಾಕರ ಐತಾಳ್, ರಮೇಶ್ ಬಾರೀತ್ತಾಯ, ಜಯಶ್ರೀ ಬಾರೀತ್ತಾಯ, ಶಿಲ್ಪಾ ಆರ್. ಭಟ್, ಶ್ರೀನಿವಾಸ ಆಚಾರ್ಯ, ರಾಜೇಶ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿಗೆ ಅವಳಿ ಪ್ರಶಸ್ತಿ

ಉಡುಪಿ, ಸೆ.4: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮತ್ತು ಸರಕಾರಿ...

ರಥಬೀದಿ ಕಾಲೇಜು: ಸಂಸ್ಕೃತ ದಿನಾಚರಣೆ

ಮಂಗಳೂರು, ಸೆ.3: ರಥಬೀದಿ ಕಾಲೇಜಿನಲ್ಲಿ ಸಂಸ್ಕೃತ ದಿನಾಚರಣೆ ಕಾರ್ಯಕ್ರಮ ಮಂಗಳೂರು ರಥಬೀದಿಯ...

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕಾಗಿ ಸಹಾಯಧನ: ಅರ್ಜಿ ಆಹ್ವಾನ

ಉಡುಪಿ, ಸೆ.4: ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕುಗಳಿಗೆ ಸಂಬಂಧಿಸಿದಂತೆ ಅಡಿಕೆ...

ಪಡುಕರೆ: ಮುದ್ದುಕೃಷ್ಣ ವೇಷ ಸ್ಪರ್ಧೆ ಸಂಪನ್ನ

ಪಡುಕರೆ, ಸೆ.4: ಶ್ರೀ ಕೃಷ್ಣ ಮಾರುತಿ ವ್ಯಾಯಾಮ ಶಾಲೆ, ಕಡೆಕಾರು ಪಡುಕರೆ...
error: Content is protected !!