Thursday, July 23, 2026
Thursday, July 23, 2026

ಎಸ್‌ಎಲ್‌ಆರ್‌ಎಂ ಘಟಕದ ಸ್ವಚ್ಛತಾ ತಂಡಕ್ಕೆ ಸಮವಸ್ತ್ರ ವಿತರಣೆ

ಎಸ್‌ಎಲ್‌ಆರ್‌ಎಂ ಘಟಕದ ಸ್ವಚ್ಛತಾ ತಂಡಕ್ಕೆ ಸಮವಸ್ತ್ರ ವಿತರಣೆ

Date:

ಕೋಟ, ಮೇ 4: ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್, ಕೋಟ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಮಳೆಗಾಲದ ಮುಂಗಾರು ಪೂರ್ವ ತಯಾರಿ ಅಂಗವಾಗಿ ಸ್ವಚ್ಛತಾ ಮಾಸಾಚರಣೆ ಪ್ರಯುಕ್ತ ಎಸ್.ಎಲ್.ಆರ್.ಎಮ್. ಘಟಕ, ಕೋಟ ಪಂಚವರ್ಣ ಸಂಘಟನೆ ಕೋಟ, ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಕೋಟ, ಸಾರ್ವಜನಿಕರ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಶ್ರಮದಾನ ಮತ್ತು ಸ್ವಚ್ಛತಾ ತಂಡಕ್ಕೆ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು. ಬ್ರಹ್ಮಾವರ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್ ವಿ ಇಬ್ರಾಹಿಂಪುರ ಹಾಗೂ ಜಿಲ್ಲಾ ಸ್ವಚ್ಛ ಭಾರತ್ ಮಿಷನ್ ಸಂಯೋಜಕ ರಘುನಾಥ್ ಕೋಟದ ಈಸ್ಟ್-ವೆಸ್ಟ್ ನರ್ಸರಿ ಇವರು ಎಸ್‌ಎಲ್‌ಆರ್‌ಎಂ ಘಟಕಕ್ಕೆ ನೀಡಿದ ಟೀ ಶಟ್೯ ಅನಾವರಣಗೊಳಿಸಿದರು.

ಕೋಟದ ಈಸ್ಟ್-ವೆಸ್ಟ್ ನರ್ಸರಿ ಮಾಲಕ ಎಂ.ಎ. ಮೂಸ ಟೀ ಶಟ್೯ ಪಂಚಾಯತ್ ಗೆ ಹಸ್ತಾಂತರಿಸಿದರು. ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ಮಾಲತಿ ಶೇಖರ್, ಪಂಚವರ್ಣ ಸಂಘಟನೆಯ ಪರವಾಗಿ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕೋಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್, ಲೆಕ್ಕಾಧಿಕಾರಿ ಶೇಖರ್ ಮರವಂತೆ, ಎಸ್ ಎಲ್ ಆರ್ ಎಂ ಘಟಕದ ಮುಖ್ಯಸ್ಥೆ ಭವ್ಯ ಮುಂತಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬೊಮ್ಮರಬೆಟ್ಟು: ಗ್ರಾಮಸ್ಥರ ಅಹವಾಲು ಸ್ವೀಕಾರ

ಕಾಪು, ಜು.21: ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರ ಅಹವಾಲು ಸ್ವೀಕಾರ...

ರಿಕ್ಷಾ ಚಾಲಕರ ಅಗತ್ಯ ಬೇಡಿಕೆಗಳ ಈಡೇರಿಕೆಗೆ ವಿಶೇಷ ಆದ್ಯತೆ: ಯಶ್ಪಾಲ್ ಸುವರ್ಣ

ಬ್ರಹ್ಮಾವರ, ಜು.21: ಸಾರ್ವಜನಿಕರ ಸಾರಿಗೆ ವ್ಯವಸ್ಥೆಯಲ್ಲಿ ವಿಶೇಷ ಪಾತ್ರವಹಿಸುವ ರಿಕ್ಷಾ ಚಾಲಕರ...

ಬಡಾ ಗ್ರಾಮ ಪಂಚಾಯತ್: ವಿವಿಧ ಸವಲತ್ತು ವಿತರಣೆ

ಕಾಪು, ಜು.21: ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರ ಅಹವಾಲು ಸ್ವೀಕಾರ...

ಕ್ರೀಡಾ ದಾಖಲೆಗಳ ಮಾಹಿತಿ ಹಾಗೂ ತರಬೇತಿ ಸಾಧನೆಗೆ ಸ್ಪೂರ್ತಿ: ಡಾ.ಸುಧಾಕರ ಶೆಟ್ಟಿ

ಮಣಿಪಾಲ, ಜು.21: ಕ್ರೀಡಾ ದಾಖಲೆಗಳ ಮಾಹಿತಿ ಹಾಗೂ ತರಬೇತಿ ವಿದ್ಯಾರ್ಥಿಗಳ ಸಾಧನೆಗೆ...
error: Content is protected !!