Monday, October 5, 2026
Monday, October 5, 2026

ಕೊಡವೂರು: ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಮಹಾರುದ್ರಯಾಗ

ಕೊಡವೂರು: ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಮಹಾರುದ್ರಯಾಗ

Date:

ಕೊಡವೂರು, ಏ.19: ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ ನಾಡಿನ ಜನರ ಸುಭಿಕ್ಷೆಗಾಗಿ ಮಹಾರುದ್ರ ಯಾಗ ಹಮ್ಮಿಕೊಳ್ಳಲಾಗಿದೆ. ಮೇ 14 ರಿಂದ ಮೇ19 ರವರೆಗೆ ಕೊಡವೂರಿನಲ್ಲಿ ವಿವಿಧ ಧಾರ್ಮಿಕ, ಮನರಂಜನೆ, ಕ್ರೀಡೋತ್ಸವ, ಅರೋಗ್ಯ ಶಿಬಿರ, ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳಲಾಗಿದೆ. ಮೇ 10 ರಿಂದ ಮೇ 20 ರವರೆಗೆ ಸರ್ವರ ಮನೋರಂಜನೆಗಾಗಿ ಜಾಯಿಂಟ್ ವಿಲ್, ಮೋಜು ಮಸ್ತಿಗಳು, ಆಟಿಕೆಗಳು, ಆಟೋಟ ಪರಿಕರಗಳು, ಬೃಹತ್ ವಸ್ತು ಪ್ರದರ್ಶನ ಮಾರಾಟ ಮಳಿಗೆಗಳು ಮನರಂಜಿಸಲಿವೆ. ಮೇ 14 ರಂದು ಮಹಾರುದ್ರಾ ಯಾಗ ಪೂರ್ವಭಾವಿಯಾಗಿ ಮಲ್ಪೆಯಿಂದ ಕೊಡವೂರು ಮಹತೋಭಾರ ಶಂಕರನಾರಯಣ ದೇವಸ್ಥಾನದವರೆಗೆ ಭವ್ಯ ಹೊರೆಕಾಣಿಕೆ ಮೆರವಣಿಗೆ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿರುವುದು. ಮೇ 15 ರಂದು ಮಹಾರುದ್ರ ಯಾಗ, ಗಣಯಾಗ ಧಾರ್ಮಿಕ ವಿಧಿವಿಧಾನಗಳು ಅರಂಭಗೊಳ್ಳಲಿರುವುದು. ಅದೇ ಸಂಜೆ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಮೇ 1‍6 ರಂದು ಸರ್ವರಿಗೂ ಆರೋಗ್ಯ ಭಾಗ್ಯದ ಪರಿಕಲ್ಪನೆಯಲ್ಲಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ.

ಮೇ 17 ರಂದು ಮಲ್ಪೆ ಬೀಚ್ ನಲ್ಲಿ ವಿವಿಧ ಸಂಪ್ರದಾಯಿಕ ಕ್ರೀಡಾಕೂಟ ಸ್ಪರ್ಧೆಗಳು ನಡೆಯಲಿದೆ. ಅಂದು ಸಂಜೆ 6 ಗಂಟೆಗೆ ಮಲ್ಪೆ ಕಡಲ ತೀರದಲ್ಲಿ ವಾರಣಾಸಿಯ ಪುರೋಹಿತರಿಂದ ಗಂಗಾರತಿ ನಡೆಯಲಿದೆ. ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಭಾಗವಹಿಸಲಿದ್ದಾರೆ. ರಾತ್ರಿ 8:00ಗೆ ದಕ್ಷಿಣ ಭಾರತದ ಪ್ರಖ್ಯಾತ ಕಲಾವಿದೆ ಮಂಗ್ಲಿ ಅವರು ತಮ್ಮ ಅದ್ಭುತ ಶಿವಗಾನಮೃತದಿಂದ ಕಲಾಭಿಮಾನಿಗಳ ಗಳನ್ನು, ಭಕ್ತ ಜನತೆಯನ್ನು ಭಕ್ತಿ ಸಾಗರದಲ್ಲಿ ಪುನೀತಗೊಳಿಸಲಿದ್ದಾರೆ. ಮೇ 18 ರಂದು ನಡೆಯಲಿರುವ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, ದೇಶದ ಮೂಲೆ ಮೂಲೆಗಳಿಂದ ವಿವಿಧ ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ನಾಡಿನ ಯುವ ಉದ್ಯೋಗಕಾಂಕ್ಷಿಗಳು ಭಾಗವಹಿಸಲಿದ್ದಾರೆ. ಮೇ 19 ರಂದು ಮಹಾರುದ್ರಯಾಗದ ಕೊನೆಯ ದಿನದಂದು ಪೂರ್ಣಾಹುತಿ, ಸ್ಥಳೀಯ ಕಲಾವಿದರುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಸ್ತು ಪ್ರದರ್ಶನ ನಡೆಯುವ ವೇದಿಕೆಯಲ್ಲಿ ‘ಪ್ರತಿಭೆ ನಿಮ್ಮದು ವೇದಿಕೆ ನಮ್ಮದು’ ಎನ್ನುವ ಕಾರ್ಯಕ್ರಮ ಅಯೋಜಿಸಲಾಗಿದೆ. ಕಾರ್ಯಕ್ರಮ ಪ್ರತಿದಿನ 5 ರಿಂದ 8 ರವರೆಗೆ ನಡೆಯಲಿದೆ. ಅಸಕ್ತರು ಮಹಾರುದ್ರಯಾಗ ಸಮಿತಿ ಕಚೇರಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ.

ಈ ಐದು ದಿನಗಳ ಕಾಲ ಮಹಾರುದ್ರಯಾಗ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಡಿನ ಪ್ರಖ್ಯಾತ ಕಲಾವಿದರುಗಳಿಂದ ಪ್ರತಿನಿತ್ಯ ನಡೆಯಲಿದೆ. ಅಷ್ಟೇ ಅಲ್ಲದೇ ಪರಮ ಶಿವನ ಮಹಾಯಾಗದ ಪುಣ್ಯೋದಯಕ್ಕೆ ಅಗಮಿಸುವ ಭಕ್ತರಿಗೆ ಪ್ರತಿದಿನ ಅನ್ನಪ್ರಸಾದದ ವೆವಸ್ಥೆಯನ್ನು ಕೂಡ ಮಾಡಲಾಗಿದೆ. ವಿಶೇಷವಾಗಿ ಐದು ಸಾವಿರ ಮಹಿಳೆಯರಿಗೆ ಮಹಾರುದ್ರಯಾಗ ಸಂಕಲ್ಪದೊಂದಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಅಸಕ್ತರು ಮಹಾರುದ್ರ ಯಾಗ ಸಮಿತಿ ಕಚೇರಿಯಲ್ಲಿ ತಮ್ಮ‌ ಹೆಸರನ್ನು ನೊಂದಾಯಿಸಿಕೊಳ್ಳಬಹುದು ಎಂದು ಪ್ರಕಾಶ್ ಕೊಡವೂರು ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು, ಪ್ರಸಾದರಾಜ್ ಕಾಂಚನ್  ಕಾರ್ಯಧ್ಯಕ್ಷರು ಮಹಾರುದ್ರಯಾಗ ಸಮಿತಿ ಹಾಗೂ ಸೇವಾಕರ್ತರು ಸರ್ವ ಸದಸ್ಯರು, ಗೌರವಾಧ್ಯಕ್ಷರು, ಅಧ್ಯಕ್ಷರು‌ ಸಂಚಾಲಕರು, ಹಾಗೂ ಸಮಿತಿ‌ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಜಾನಕಿ ನಮನ’

ಉಡುಪಿ, ಅ.4: ಉಡುಪಿಯ ಕೋಸ್ಟಲ್‌ ಸ್ಟಾರ್‌ ಮ್ಯೂಸಿಕ್‌ ಕ್ಲಬ್‌ ಆಶ್ರಯದಲ್ಲಿ ಕರ್ಣಾಟಕ...

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ. ನಿಖಿಲ್ ಗುಪ್ತ ಭೇಟಿ

ಕಾಪು, ಅ.4: ಮಹಾರಾಷ್ಟ್ರದ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ...

ಕುಪ್ಮಾ ಉತ್ತಮ ಉಪನ್ಯಾಸಕ ಪ್ರಶಸ್ತಿ ಪ್ರದಾನ

ಮಣಿಪಾಲ, ಅ.4: ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ...
error: Content is protected !!