Sunday, October 18, 2026
Sunday, October 18, 2026

ಕಾಪು: 94/C ಹಾಗೂ 94/CC ಅಡಿಯಲ್ಲಿ ಮಂಜೂರಾದ ಖಾಯಂ ನಿವೇಶನ ಹಕ್ಕುಪತ್ರಗಳ ವಿತರಣೆ

ಕಾಪು: 94/C ಹಾಗೂ 94/CC ಅಡಿಯಲ್ಲಿ ಮಂಜೂರಾದ ಖಾಯಂ ನಿವೇಶನ ಹಕ್ಕುಪತ್ರಗಳ ವಿತರಣೆ

Date:

ಕಾಪು, ಮಾ.31: ಕಾಪು ತಾಲ್ಲೂಕು ವ್ಯಾಪ್ತಿಯ ಫಲಾನುಭವಿಗಳಿಗೆ 94/C ಹಾಗೂ 94/CC ಅಡಿಯಲ್ಲಿ ಮಂಜೂರಾದ ಖಾಯಂ ನಿವೇಶನ ಹಕ್ಕುಪತ್ರಗಳನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿತರಿಸಿದರು. ಸುಮಾರು 20ಕ್ಕೂ ಅಧಿಕ ವರ್ಷಗಳಿಂದ ವಾಸವಾಗಿರುವ ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಣಗುಡ್ಡೆ ನಿವಾಸಿ ಮಂಜುಳಾ ರಾಣಿ, ವಿಮಲಾ ಅಮೀನ್, ಮೂಡಬೆಟ್ಟು ಗ್ರಾಮದ ಇಂದಿರಾ ಆಚಾರ್ಯ, ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಭವಿತಾ, ಪಾದೆಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರಿಜ ಸೇರಿದಂತೆ ಒಟ್ಟು 5 ಫಲಾನುಭವಿಗಳು ಹಕ್ಕುಪತ್ರ ಪಡೆದರು.

ಉಪನಿರ್ದೇಶಕರು ಗ್ರಾಮಾಂತರ ಕೈಗಾರಿಕೆ ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲಕರ್ಮಿಗಳಿಗೆ ಗರಿಷ್ಠ 8000 ವರೆಗೆ ಟೈಲರಿಂಗ್, ಮರಗೆಲಸ, ಗಾರೆಕೆಲಸ, ಎಲೆಕ್ಟ್ರೀಶೀಯನ್, ಬ್ಯೂಟಿಪಾರ್ಲರ್, ಕ್ಷೌರಿಕ ವೃತ್ತಿಯವರಿಗೆ ಸೇರಿದಂತೆ ಒಟ್ಟು 81 ಫಲಾನುಭವಿಗಳಿಗೆ ಉಚಿತ ಸುಧಾರಿತ ಉಪಕರಣಗಳನ್ನು ವಿತರಿಸಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಚ್‌ಐವಿ /ಏಡ್ಸ್ ಅರಿವು ಮೂಡಿಸಲು ಜಿಲ್ಲಾಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್

ಉಡುಪಿ, ಅ.17: ಹೆಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ...

ಪೊಲೀಸರಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

ಉಡುಪಿ, ಅ.17: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್...

ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.17: ಸರಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ...
error: Content is protected !!