Saturday, June 13, 2026
Saturday, June 13, 2026

ಎಂಜಿಎಂ ಸಂಧ್ಯಾ ಕಾಲೇಜು: ಬಿಯಾಂಡ್ ದಿ ಸ್ಕ್ರೋಲ್

ಎಂಜಿಎಂ ಸಂಧ್ಯಾ ಕಾಲೇಜು: ಬಿಯಾಂಡ್ ದಿ ಸ್ಕ್ರೋಲ್

Date:

ಉಡುಪಿ, ಮಾ.31: ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜು, ಉಡುಪಿ ವತಿಯಿಂದ ಆಯೋಜಿಸಲಾದ “Beyond the Scroll – Rewriting the Social Narrative” ಅಂತರ್ ಕಾಲೇಜು ಉತ್ಸವವು ಸಂಜೆ ಭವ್ಯ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು. ಆಟೋಮೊಬೈಲ್ ಅಭಿಮಾನಿ ನಿರೀಕ್ಷಿತ್ ಹೆಬ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ವೇದಿಕೆಗಳು ಅತ್ಯಂತ ಅಗತ್ಯವಾಗಿವೆ ಎಂದು ಹೇಳಿದರು. ಇಂದಿನ ಯುವಜನತೆ ಸೃಜನಾತ್ಮಕ ಚಿಂತನೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯಕ್ ವಹಿಸಿಕೊಂಡು, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಇಂತಹ ಉತ್ಸವಗಳಲ್ಲಿ ಭಾಗವಹಿಸುವುದರಿಂದ ಅವರ ಸಮಗ್ರ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದು ಹೇಳಿದರು. ಗೌರವ ಅತಿಥಿಗಳಾಗಿ ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತಾ ಮೈಯ್ಯ, ಎಂ.ಜಿ.ಎಂ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಎಂ. ವಿಶ್ವನಾಥ್ ಪೈ ಹಾಗೂ ಬಿಕಾಂ/ಬಿಬಿಎ ಸಂಯೋಜಕರಾದ ಡಾ. ಮಲ್ಲಿಕಾ ಎ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾದ ಯಾಸಿನ್ ಮನ್ನಾ ಉಪನ್ಯಾಸಕರು ಇಂಗ್ಲಿಷ್ ವಿಭಾಗ, ಎಂಜಿಎಂ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯ ಪ್ರತಿನಿಧಿಯಾದ ನಂದನ್ ಕುಂದರ್ ಹಾಗೂ ಎಂ.ಜಿ.ಎಂ ಸಂಧ್ಯಾ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಪ್ರತಿನಿಧಿಯಾದ ಧೀರಜ್ ಉಪಸ್ಥಿತರಿದ್ದರು.

ದಿನವಿಡೀ ನಡೆದ ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಮೆರೆದರು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸೇಂಟ್ ಮೇರೀಸ್ ಸಿರಿಯನ್ ಕಾಲೇಜು,ಬ್ರಹ್ಮಾವರ ಅವರು ಒಟ್ಟು ಚಾಂಪಿಯನ್ ಆಗಿ ಟ್ರೋಫಿ ಹಾಗೂ ರೂ. 10,000 ನಗದು ಬಹುಮಾನವನ್ನು ಪಡೆದರು. ಶ್ರೀ ಜಗದ್ಗುರು ಚಂದ್ರಶೇಖರ ಭಾರತಿ ಮೆಮೋರಿಯಲ್ ಕಾಲೇಜು, ಶೃಂಗೇರಿ ಅವರು ರನ್ನರ್-ಅಪ್ ಆಗಿ ಟ್ರೋಫಿ ಹಾಗೂ ರೂ. 5,000 ನಗದು ಬಹುಮಾನವನ್ನು ಪಡೆದರು. ಪ್ರತ್ಯೇಕ ಸ್ಪರ್ಧೆಗಳ ವಿಜೇತರಿಗೆ ಟ್ರೋಫಿ ಹಾಗೂ ರೂ.1,000 ನಗದು ಬಹುಮಾನವನ್ನು ನೀಡಲಾಗಿದ್ದು, ರನ್ನರ್-ಅಪ್‌ಗಳಿಗೆ ಟ್ರೋಫಿ ಹಾಗೂ ರೂ. 500 ನಗದು ಬಹುಮಾನವನ್ನು ನೀಡಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಭೇಟಿ

ಕೊಲ್ಲೂರು, ಜೂ.12: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಶುಕ್ರವಾರ ಕೊಲ್ಲೂರು...

‘ಯಶೋ ಮಾಧ್ಯಮ-2026’ ಪ್ರಶಸ್ತಿಗೆ ಸುಬ್ರಹ್ಮಣ್ಯ ಜಿ ಕುರ್ಯ ಆಯ್ಕೆ

ಉಡುಪಿ, ಜೂ.12: ರಾಜಾಜಿನಗರದ ಸ್ಪಂದನ ಸೇವಾ ಸಂಸ್ಥೆ ವತಿಯಿಂದ ಪ್ರತಿ ವರ್ಷದಂತೆ...

ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮತ್ತು ಭಾರತೀಯ ಶೂಟಿಂಗ್ ತರಬೇತುದಾರ ಜಸ್ಪಾಲ್ ರಾಣಾ ಇನ್ನು ನೆನಪು ಮಾತ್ರ

ನವದೆಹಲಿ, ಜೂ.12: ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಹಲವಾರು...

ಕೋಡಿಯಲ್ಲಿ ಹಸಿರು ಹೆಜ್ಜೆ ಅಭಿಯಾನಕ್ಕೆ ಚಾಲನೆ

ಕೋಟ, ಜೂ.12: ದೇಶದೆಲ್ಲೆಡೆ ತಾಪಮಾನ ಹೆಚ್ಚುತ್ತಿದೆ. ಕಾಡೆಲ್ಲ ನಾಡಾಗಿ ಪರಿವರ್ತನೆಗೊಂಡಿದ್ದು ಇದರಿಂದ...
error: Content is protected !!