Tuesday, October 20, 2026
Tuesday, October 20, 2026

ಕಾರ್ಕಳ: ಚಿಲಿಪಿಲಿ-2026 ಮಕ್ಕಳ ಬೇಸಿಗೆ ರಜಾ ಶಿಬಿರ

ಕಾರ್ಕಳ: ಚಿಲಿಪಿಲಿ-2026 ಮಕ್ಕಳ ಬೇಸಿಗೆ ರಜಾ ಶಿಬಿರ

Date:

ಕಾರ್ಕಳ, ಮಾ.31: ಪ್ರಸ್ತುತ ದಿನಮಾನದಲ್ಲಿ ರಜಾ ಸಮಯವನ್ನು ಮಕ್ಕಳು ಕೇವಲ ಮೊಬೈಲ್ ಗೆ ದಾಸರಾಗಿ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೆ ತಮ್ಮ ಅಮೂಲ್ಯ ಬಾಲ್ಯದ ಕ್ಷಣಗಳನ್ನು ವ್ಯರ್ಥವಾಗಿ ಕಳೆಯುತ್ತಿದ್ದಾರೆ. ಇದು ಪ್ರಸ್ತುತ ಹೆತ್ತ ತಂದೆ ತಾಯಿಯರಿಗೂ ಮಕ್ಕಳ ಈ ವರ್ತನೆ ನುಂಗಲಾರದ, ಅರಗಿಸಿಕೊಳ್ಳಲಾಗದ ನೋವಿನ ಕ್ಷಣಗಳು ಹೌದು. ಈ ನಿಟ್ಟಿನಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆರಂಭಗೊಳ್ಳಲಿರುವ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ನಲ್ಲಿ ಮಕ್ಕಳು ತಮ್ಮ ರಜಾ ದಿನಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂಬ ಧ್ಯೇಯವನ್ನು ಇಟ್ಟುಕೊಂಡು ಇದೇ ಬರುವ ಏಪ್ರಿಲ್ 2,3,4 2026 ರಂದು ಮಕ್ಕಳ ವಿಶೇಷ ಶಿಬಿರ ಚಿಲಿಪಿಲಿ-2026 ನಡೆಯಲಿದೆ.

ಇಂದಿನ ಸ್ಕ್ರೀನ್ ಟೈಮ್ ಯುಗದಲ್ಲಿ ಮಕ್ಕಳು ತಮ್ಮ ಬಾಲ್ಯವನ್ನು ವ್ಯರ್ಥ ಮಾಡಿಕೊಳ್ಳುತ್ತಿರುವಾಗ ಈ ಶಿಬಿರವು ನೆನಪುಗಳನ್ನು ಸೃಷ್ಟಿಸಲು, ಸೃಜನಶೀಲತೆಯನ್ನು ಹೆಚ್ಚಿಸಲು, ಸ್ನೇಹಿತರನ್ನು ಮಾಡಿಕೊಳ್ಳಲು , ಹೊಸ ಆಸಕ್ತಿಗಳನ್ನು ಕಂಡುಕೊಳ್ಳಲು ಒಟ್ಟಾರೆಯಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ಶಿಬಿರವು ಮಕ್ಕಳಿಗೆ ಅತ್ಯಂತ ಮಹತ್ವವುಳ್ಳದ್ದಾಗಿದೆ. ಮಾತ್ರವಲ್ಲದೆ 90 ರ ದಶಕದ ಜೀವನ ಕೌಶಲ್ಯ ಚಟುವಟಿಕೆಗಳು ಮಕ್ಕಳಿಗೆ ಅಂಕಗಳ ಭಯವಿಲ್ಲದೆ ಹೊಸ ವಿಷಯಗಳನ್ನು ಪ್ರಯತ್ನಿಸಲು ಅವಕಾಶ ನೀಡುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಈ ಶಿಬಿರಕ್ಕೆ ನೋಂದಾಯಿಸಲು ಕೋರಲಾಗಿದೆ. ಇದು ಕೇವಲ ಶಿಬಿರವಲ್ಲ ಮುಗ್ಧ ಮನಸುಗಳ ಸೃಜನಶೀಲತೆಯನ್ನು ಬೆಳೆಸುವ ಸುಂದರ ತೋಟ; ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +919036854942

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಉಡುಪಿ, ಅ.20: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ...

ಅ. 20: ಉಡುಪಿ ನಗರ ವ್ಯಾಪ್ತಿಯ ಮನೆ ಮನೆ ಕಸ ಸಂಗ್ರಹಣೆಯಲ್ಲಿ ವ್ಯತ್ಯಯ

ಉಡುಪಿ, ಅ. 20: ನವರಾತ್ರಿ ಆಯುಧ ಪೂಜೆಯ ಪ್ರಯುಕ್ತ ಅಕ್ಟೋಬರ್ 20...

ಉಚ್ಚಿಲ ದಸರಾ ಶೋಭಾಯಾತ್ರೆ: ವಾಹನ ಸಂಚಾರಕ್ಕೆ ಬದಲಿ ಮಾರ್ಗ

ಉಡುಪಿ, ಅ.20: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆಯೋಜಿಸಿರುವ ಉಡುಪಿ-ಉಚ್ಚಿಲ ದಸರಾ...

ನವರಾತ್ರಿ ಮಹೋತ್ಸವ

ಪೀಠಿಕೆ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಶರತ್ಕಾಲದ ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ...
error: Content is protected !!