Tuesday, September 15, 2026
Tuesday, September 15, 2026

ಅಜ್ಜರಕಾಡು: ಬಡ ರೋಗಿಗಳಿಗೆ ಆಹಾರ ಪಧಾರ್ಥಗಳ ಕಿಟ್ ಹಾಗೂ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

ಅಜ್ಜರಕಾಡು: ಬಡ ರೋಗಿಗಳಿಗೆ ಆಹಾರ ಪಧಾರ್ಥಗಳ ಕಿಟ್ ಹಾಗೂ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

Date:

ಉಡುಪಿ, ಮಾ.26: ನಗರದ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ಎಂ.ಸಿ.ಕೆ.ಎಸ್ ಫುಡ್ ಫಾರ್ ದಿ ಹಂಗ್ರೀ ಫೌಂಡೇಶನ್ ವತಿಯಿಂದ 65 ಬಡ ರೋಗಿಗಳಿಗೆ ಆಹಾರ ಪಧಾರ್ಥಗಳ ಕಿಟ್ ಹಾಗೂ ಮಕ್ಕಳಿಗೆ ನೋಟ್ ಪುಸ್ತಕವನ್ನು ವಿತರಿಸಲಾಯಿತು. ಜಿಲ್ಲಾ ಸರ್ಜನ್ ಡಾ.ಹೆಚ್ ಅಶೋಕ್ ಮಾತನಾಡಿ, ಈ ತರಹದ ಕಾರ್ಯಕ್ರಮಗಳಿಂದ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಬಹಳಷ್ಟು ಉಪಯೋಗವಾಗಲಿದೆ. ದಾನಗಳಲ್ಲಿ ಶ್ರೇಷ್ಠದಾನ ಎಂದರೆ ರಕ್ತದಾನ ಎಂದು ಹೇಳಲಾಗುತ್ತದೆ. ಅದೇ ರೀತಿ ಒಬ್ಬರಿಗೆ ಆಹಾರ ನೀಡುವುದು ಸಹ ಅತ್ಯಂತ ಮಹಾದಾನ ಎಂದರು.

ಎಂ.ಸಿ.ಕೆ.ಎಸ್ ಸಂಚಾಲಕಿ ನಿಧಿ ಮಾತನಾಡಿ, ಈ ಹಿಂದೆ ಸಂಸ್ಥೆಯ ವತಿಯಿಂದ ಕ್ಯಾನ್ಸರ್ ಹಾಗೂ ಕ್ಷಯರೋಗಿಗಳಿಗೆ ಆಹಾರ ಕಿಟ್ ವಿತರಿಸದ್ದು, ಅದೇ ರೀತಿ ಫೌಂಡೇಶನ್‌ನ ಸಂಸ್ಥಾಪಕರಾದ ಗ್ರ‍್ಯಾಂಡ್ ಮಾಸ್ಟರ್ ಚೋವಾ ಕೋಕ್ ಸುಯಿ ಇವರ ಸವಿನೆನಪಿಗಾಗಿ ಇಂದು ಬಡ ರೋಗಿಗಳಿಗೆ ಆಹಾರ ಕಿಟ್ ವಿತರಿಸಲಾಗಿದೆ ಎಂದರು. ಜಿಲ್ಲಾ ಆಸ್ಪತ್ರೆ ಎ.ಆರ್.ಟಿ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀನಾಥ್, ಎ.ಆರ್.ಟಿ ಕೇಂದ್ರದ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಆಸ್ಪತ್ರೆ ಆಪ್ತ ಸಮಾಲೋಚಕ ಮನು ಎಸ್.ಬಿ ನಿರೂಪಿಸಿ, ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜೀವದ ಹಂಗು ತೊರೆದು ಅರಣ್ಯವನ್ನು ಕಾಪಾಡಿದ ವೀರರ ತ್ಯಾಗ ಚಿರಸ್ಮರಣೀಯ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು, ಸೆ.14: ಬೆಂಗಳೂರಿನ ಅರಣ್ಯ ಭವನದಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ವತಿಯಿಂದ...

ಬಿಜೆಪಿ ಮಾಜಿ ಶಾಸಕ ನೆ. ಲ. ನರೇಂದ್ರ ಬಾಬು ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು, ಸೆ.14: ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಕಾಪು: ಚೆಸ್ ಪಂದ್ಯಾಟ ಉದ್ಘಾಟನೆ

ಕಾಪು, ಸೆ.14: ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ...

ಬಿ.ಬಿ. ಹೆಗ್ಡೆ ಕಾಲೇಜು: ಎನ್.ಎಸ್.ಎಸ್. ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.10: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...
error: Content is protected !!