Friday, June 5, 2026
Friday, June 5, 2026

ಆಸ್ಟ್ರೋ ಮೋಹನ್ ಅವರಿಗೆ ಅಂತರರಾಷ್ಟ್ರೀಯ ಗೌರವ

ಆಸ್ಟ್ರೋ ಮೋಹನ್ ಅವರಿಗೆ ಅಂತರರಾಷ್ಟ್ರೀಯ ಗೌರವ

Date:

ಉಡುಪಿ, ಮಾ.23: ಅಂತರರಾಷ್ಟ್ರೀಯ ಖ್ಯಾತಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕರು ಹಾಗೂ ಕ್ಯಾನನ್

ಇಓಎಸ್ ಮಾಸ್ಟ್ರೋ ಆಗಿರುವ ಉಡುಪಿಯ ಆಸ್ಟ್ರೋ ಮೋಹನ್ ಅವರು ಮತ್ತೊಮ್ಮೆ ಅಂತರರಾಷ್ಟ್ರೀಯ ಛಾಯಾಚಿತ್ರ ವೇದಿಕೆಯಲ್ಲಿ ಮಹತ್ತರ ಸಾಧನೆ ಮಾಡಿದ್ದು, ರೋಸ್ ಅಂತರರಾಷ್ಟ್ರೀಯ ಫೋಟೋಗ್ರಫಿ ಸರ್ಕ್ಯೂಟ್ ನಲ್ಲಿ 3 ಪಿ ಎಸ್ ಎ ಗೋಲ್ಡ್ ಪದಕಗಳು, ಜಡ್ಜಸ್ಚಾಯ್ಸ್ ಪ್ರಶಸ್ತಿ, ಜಿ ಎನ್ ಜಿ (GNG) ಗೋಲ್ಡ್ ಪದಕ ಹಾಗೂ ಹಾನರೇಬಲ್ ಮೆನ್ಷನ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ Photographic Society of America ಫೋಟೋಗ್ರಪಿ ಸೊಸೈಟಿ ಆಫ್ ಅಮೆರಿಕ (PSA), ಇಂಡಿಯಾ ಇಂಟರ್ನ್ಯಾಷನಲ್ ಗ್ರೂಪ್ India International Group (IIG) ಮತ್ತು ಜಿ ಏನ್ ಜಿ ಕ್ಲಬ್ (GNG Club) ಸಂಸ್ಥೆಗಳ ಮಾನ್ಯತೆ (Patronage) ಹೊಂದಿದ್ದು, ವಿಶ್ವದ ಅನೇಕ ಅಂತಾರಾಷ್ಟ್ರೀಯ ಛಾಯಾಗ್ರಾಹಕರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಆಸ್ಟ್ರೋ ಮೋಹನ್ ಅವರ ಶಕ್ತಿಶಾಲಿ ಪತ್ರಿಕಾ ಛಾಯಾಗ್ರಹಣದ ಚಿತ್ರ ಬ್ಯಾಟಲ್ ಅಗೈನ್ಸ್ಟ್ ದ ಫ್ಲೇಮ್ಸ್ “Battle Against the Flames” ಫೋಟೋ ಪತ್ರಿಕೋದ್ಯಮ ವಿಭಾಗದಲ್ಲಿ PSA ಗೋಲ್ಡ್ ಪದಕ ಹಾಗೂ ವಿಶೇಷ ಜಡ್ಜಸ್ ಚಾಯ್ಸ್ ಪ್ರಶಸ್ತಿ ಪಡೆದುಕೊಂಡಿದ್ದು, ಸ್ಪರ್ಧೆಯ ಅತ್ಯುತ್ತಮ ಹಾಗೂ ಪ್ರಭಾವಶಾಲಿ ಚಿತ್ರಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ.

ಇದೇ ಚಿತ್ರವು ಜನರಲ್ ವಿಭಾಗದಲ್ಲಿಯೂ PSA ಗೋಲ್ಡ್ ಪದಕ ಗಳಿಸಿದ್ದು, ಒಂದೇ ಚಿತ್ರವು ಎರಡು ವಿಭಿನ್ನ ವಿಭಾಗಗಳಲ್ಲಿ ಅಗ್ರಪ್ರಶಸ್ತಿ ಗಳಿಸಿರುವುದು ಅತ್ಯಂತ ಅಪರೂಪದ ಸಾಧನೆಯಾಗಿದೆ.

ಅದೇ ರೀತಿ, ಅವರ ಸಂಸ್ಕೃತಿ ಮತ್ತು ಭಕ್ತಿಯ ಭಾವವನ್ನು ವ್ಯಕ್ತಪಡಿಸುವ ಫೋಟೋ ಟ್ರಾವೆಲ್ ವಿಭಾಗದ ಎಟ್ ದ ಫೀಟ್ ಆಫ್ ಫೈತ್ “At the Feet of Faith” ಎಂಬ ಚಿತ್ರಕ್ಕೆ PSA ಗೋಲ್ಡ್ ಪದಕ, GNG ಗೋಲ್ಡ್ ಪದಕ ಹಾಗೂ ಹಾನರೇಬಲ್ಮೆನ್ಷನ್ ಇ-ಪ್ರಮಾಣ ಪತ್ರ ಲಭಿಸಿದ್ದು, ಜಾಗತಿಕ ಮಟ್ಟದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಜೀವನ ಶೈಲಿಯನ್ನು ಪ್ರತಿಬಿಂಬಿಸುವ ಚಿತ್ರವಾಗಿ ಮೆಚ್ಚುಗೆ ಪಡೆದಿದೆ.

ಈ ಸಾಧನೆಯೊಂದಿಗೆ ಆಸ್ಟ್ರೋ ಮೋಹನ್ ಅವರು ಅಂತರರಾಷ್ಟ್ರೀಯ ಛಾಯಾಚಿತ್ರ ಕ್ಷೇತ್ರದಲ್ಲಿ, ವಿಶೇಷವಾಗಿ ಪತ್ರಿಕಾ ಛಾಯಾಗ್ರಾಹಣ ಹಾಗೂ ಫೋಟೋ ಟ್ರಾವೆಲ್ ವಿಭಾಗಗಳಲ್ಲಿ ತಮ್ಮ ವಿಶಿಷ್ಟ ಛಾಪನ್ನು ಮತ್ತೊಮ್ಮೆ ಮೂಡಿಸಿದ್ದಾರೆ.

ಆಸ್ಟ್ರೋ ಮೋಹನ್ ಅವರು ಕಳೆದ ಮೂರು ದಶಕಗಳಿಂದ ಹಿರಿಯ ಪತ್ರಿಕಾ ಛಾಯಾಗ್ರಹಣ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿದ್ದು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳನ್ನು ಪಡೆದು ಉಡುಪಿ, ಕರ್ನಾಟಕ ಮತ್ತು ಭಾರತದ ಹೆಸರನ್ನು ಜಗತ್ತಿನ ಮಟ್ಟದಲ್ಲಿ ಪ್ರಸಿದ್ಧಿ ಪಡಿಸಿದ್ದಾರೆ.

ಮಾನವ ಜೀವನ, ಸಂಸ್ಕೃತಿ, ಸಂಪ್ರದಾಯ, ಭಕ್ತಿ, ಹಬ್ಬಗಳು ಮತ್ತು ಜೀವನದ ನಿಜವಾದ ಕ್ಷಣಗಳನ್ನು ತಮ್ಮ ಕ್ಯಾಮೆರಾದಮೂಲಕ ಜಗತ್ತಿನ ವೇದಿಕೆಗೆ ಪರಿಚಯಿಸುವ ಕಾರ್ಯವನ್ನು ಅವರು ನಿರಂತರವಾಗಿ ಮಾಡುತ್ತಿದ್ದು, ಈ ಅಂತರರಾಷ್ಟ್ರೀಯ ಪ್ರಶಸ್ತಿಗಳು ಅವರ ಛಾಯಾಚಿತ್ರ
ಜೀವನದ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಾರ್ವಜನಿಕರ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ

ಬೆಂಗಳೂರು, ಜೂ.4: ಸರ್ಕಾರದ ಎಲ್ಲಾ ಅಪರ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ,...

ದೇಶಪ್ರೇಮಿಗೆ ಉಸಿರಿಗಿಂತ ದೇಶ ದೊಡ್ಡದು: ಡಾ.ಸುಧಾಕರ್ ಶೆಟ್ಟಿ; ಸೇನೆಗೆ ಒಂದು ಲಕ್ಷ ರೂಪಾಯಿ ಹಸ್ತಾಂತರದ ಮೂಲಕ ಮಾಲಿಕೆ ಪ್ರಾರಂಭ

ಕಾರ್ಕಳ, ಜೂ.4: ಶಿಕ್ಷಣದ ಜೊತೆಗೆ ದೇಶಭಕ್ತಿಯನ್ನು ನಮ್ಮ ವ್ಯಕ್ತಿತ್ವದೊಂದಿಗೆ ಜೋಡಿಸಿಕೊಂಡಾಗ ರಾಷ್ಟ್ರ...

ಶಿರ್ವ: ಜೀವನೋಪಾಯ ಸೇವಾ ಕೇಂದ್ರ ಉದ್ಘಾಟನೆ

ಶಿರ್ವ, ಜೂ.೪: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ, ಜಿಲ್ಲಾ...

ಸಮಾಜ ಸೇವಕ ಗುರುದತ್ ಪ್ರಭು ಅವರಿಂದ ಪೌರ ಕಾರ್ಮಿಕರಿಗೆ ಹಣ್ಣು, ಬಟ್ಟೆ ವಿತರಣೆ

ಬೆಂಗಳೂರು, ಜೂ.4: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾನಗರದಲ್ಲಿ ಸಮಾಜ ಸೇವಕರು...
error: Content is protected !!