ಕೋಟ, ಮಾ.22: ಸಮಾಜದ ಬೇರೆ ಬೇರೆ ಸ್ತರಗಳಲ್ಲಿ ತಮ್ಮದೇ ಕೊಡುಗೆಯನ್ನು ನೀಡಿರುವ ಮಹಿಳೆಯರು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಅವರನ್ನು ಗೌರವಿಸಿದರೆ ಸಮಾಜವನ್ನೇ ಗೌರವಿಸಿದಂತೆ. ಆಕೆ ತಾಯಿಯಾಗಿ , ಮಡದಿಯಾಗಿ ಗೆಳತಿಯಾಗಿ ಬೇರೆ ಬೇರೆ ಹುದ್ದೆಗಳನ್ನು ನಿರ್ವಹಿಸಿದಂತ ಕರ್ತವ್ಯ ಶ್ಲಾಘನೀಯವಾದದ್ದು ಎಂದು ಉದ್ಯಮಿ ಆನಂದ ಸಿ ಕುಂದರ್ ಹೇಳಿದರು. ಅವರು, ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಅಮೃತೇಶ್ವರಿ ಮಹಿಳಾ ಮೀನುಗಾರರ ಸಹಕಾರಿ ಸಂಘ ಕೋಟ, ನೆನಪು ಮೂವೀಸ್ ಮತ್ತು ಉಸಿರು ಕೋಟ ಆಶ್ರಯದಲ್ಲಿ ನಡೆದ ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್ ಈ ಗುರುತಿಸುವಿಕೆಯ ಮೂಲಕ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡು ಇನ್ನಷ್ಟು ಕೃತುಶಕ್ತಿಯಿಂದ ಮಹಿಳೆಯರು ಕಾರ್ಯವೆಸಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಸುಶೀಲಾ ಸೋಮಶೇಖರ್, ಯು. ಎಸ್. ಶೆಣೈ, ಸುಮನಾ ಹೇರ್ಳೆ, ಪಂಚಾಯತ್ ಮಾಜಿ ಅಧ್ಯಕ್ಷರಾದ ಸತೀಶ್ ಬಾರಿಕೆರೆ, ಸದಸ್ಯರಾದ ವಾಸು ಪೂಜಾರಿ ಉಪಸ್ಥಿತರಿದ್ದರು. ಸತೀಶ್ ವಡ್ಡರ್ಸೆ ಸ್ವಾಗತಿಸಿ ವಾಣಿಶ್ರೀ ಅಶೋಕ ಐತಾಳ್ ವಂದಿಸಿದರು. ಕುಂದಾಪ್ರ ರೇಡಿಯೋ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.




By
ForthFocus™