Monday, November 16, 2026
Monday, November 16, 2026

ಪಾಜಕ ಶ್ರೀ ವಿಶ್ವೇಶತೀರ್ಥ ಪದವಿ ಕಾಲೇಜು: ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

ಪಾಜಕ ಶ್ರೀ ವಿಶ್ವೇಶತೀರ್ಥ ಪದವಿ ಕಾಲೇಜು: ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

Date:

ಕಟಪಾಡಿ, ಮಾ.14: ಪಾಜಕ ಶ್ರೀ ವಿಶ್ವೇಶತೀರ್ಥ ಮಹಾವಿದ್ಯಾಲಯ ಪದವಿ ಕಾಲೇಜು ಹಾಗೂ ಜೆಸಿಐ ಕಟಪಾಡಿ ಜಂಟಿ ಆಶ್ರಯದಲ್ಲಿ ಒಂದು ದಿನದ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣೆ, (ಮಧುಮೇಹ, ಕಣ್ಣಿನ ತಪಾಸಣೆ, ಮೂಳೆ ತಪಾಸಣೆ) ಹಾಗೂ ರಕ್ತದಾನ ಶಿಬಿರವು ಉಡುಪಿ ಜಿಲ್ಲಾ ಆಸ್ಪತ್ರೆ ಮತ್ತು ಸಿ,ಎಸ್,ಐ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ ಉಡುಪಿ, ಇವರ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಟ್ರಸ್ಟಿ ಸುದರ್ಶನ್ ರಾವ್ ಶಿಬಿರ ಉದ್ಘಾಟಿಸಿ ಮಾತನಾಡಿ, ವರ್ಷಕ್ಕೆ ಒಂದು ಬಾರಿಯಾದರೂ ನಾವು ರಕ್ತದಾನ ಮಾಡಬೇಕು ಇದರಿಂದ ಒಂದಷ್ಟು ಜನರಿಗೆ ನೆರವಾಗುವುದರ ಜೊತೆಗೆ ನಮ್ಮ ಆರೋಗ್ಯ ಕೂಡ ಸಮತೋಲನದಲ್ಲಿ ಇರುತ್ತದೆ. ಅಲ್ಲದೆ ಇಂತಹ ಉಚಿತ ಆರೋಗ್ಯ ಶಿಬಿರಗಳಿಂದ ಸುತ್ತಮುತ್ತಲಿನ ಹಳ್ಳಿಯ ಬಡ ಜನರಿಗೆ ಆರೋಗ್ಯ ತಪಾಸಣೆಯ ಅವಕಾಶ ಸಿಗುವುದರಿಂದ ಅವರು ರೋಗ ಮುಕ್ತ ಜೀವನ ನಡೆಸಲು ಸಹಾಯವಾಗುತ್ತದೆ ಎಂದರು.

ಶಿಬಿರದಲ್ಲಿ ಕಟಪಾಡಿ ಜೆ.ಸಿ.ಐ ನ ಪ್ರಶಾಂತ್ ಆರ್ ಎಸ್, ವೃಂದಿತಾ ಪ್ರಶಾಂತ್, ರೋಹಿ ರತ್ನಾಕರ್, ವೈದ್ಯರುಗಳಾದ ಡಾ. ಓಜಸ್ವಿ, ಡಾ. ಕವಿನ್, ಡಾ. ಅಭಿನವ್, ಡಾ. ರೆಬೆಕಾ ಹಾಗೂ ದಾದಿಯರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ವಿಜಯ್.ಪಿ ರಾವ್, ಸಂಯೋಜಕಿ ಸೌಮ್ಯಾ ಶ್ರೀಹರಿ, ಕಾಲೇಜಿನ ಎನ್.ಎಸ್.ಎಸ್ ಸಂಯೋಜನಾಧಿಕಾರಿ ಭಾಗ್ಯಶ್ರೀ, ವಿದ್ಯಾರ್ಥಿ ಮುಖಂಡರಾದ ಅಭಿಜಿತ್, ಶಿಲ್ಪಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೇಯಾ ಜಿ. ಆರ್ ಕಾರ್ಯಕ್ರಮ ನಿರೂಪಿಸಿ, ಐಶ್ರ‍್ಯ ಕೆ.ಎನ್ ಸ್ವಾಗತಿಸಿ, ಶಿಲ್ಪಾ ವಂದಿಸಿದರು. ಶಿಬಿರದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಸೇರಿದಂತೆ ಸುಮಾರು 200 ಕ್ಕೂ ಹೆಚ್ಚು ಜನ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡರು. ಹಾಗೂ ೫೦ ಯುನಿಟ್ ರಕ್ತ ಸಂಗ್ರಹಿಸಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಖೇಲೋ ಇಂಡಿಯಾ ಯೂತ್ ಗೇಮ್ಸ್’ನ 8ನೇ ಆವೃತ್ತಿಯ ಲೋಗೋ ಮತ್ತು ಮ್ಯಾಸ್ಕಾಟ್ ಅನಾವರಣ

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ ಮತ್ತು...

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಮತ್ತೊಮ್ಮೆ ಚಂಡಮಾರುತ ಸಾಧ್ಯತೆ

ನವದೆಹಲಿ, ನ.15: ಆಗ್ನೇಯ ಮತ್ತು ಅದನ್ನು ಹೊಂದಿಕೊಂಡಿರುವ ನೈರುತ್ಯ ಬಂಗಾಲ ಕೊಲ್ಲಿಯಲ್ಲಿ...

ಉಡುಪಿ ಸಂಪೂರ್ಣ ಸಾಕ್ಷರತಾ ಜಿಲ್ಲೆ ಗೌರವಕ್ಕೆ ಜಿಲ್ಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕೊಡುಗೆ ಅಪಾರ: ಯಶ್ಪಾಲ್ ಸುವರ್ಣ

ಉಡುಪಿ, ನ. 15: ವಿಶ್ವದಲ್ಲಿಯೇ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ರಾಷ್ಟ್ರ...
error: Content is protected !!