Friday, April 10, 2026
Friday, April 10, 2026

ಪಾಜಕ ಶ್ರೀ ವಿಶ್ವೇಶತೀರ್ಥ ಪದವಿ ಕಾಲೇಜು: ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

ಪಾಜಕ ಶ್ರೀ ವಿಶ್ವೇಶತೀರ್ಥ ಪದವಿ ಕಾಲೇಜು: ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

Date:

ಕಟಪಾಡಿ, ಮಾ.14: ಪಾಜಕ ಶ್ರೀ ವಿಶ್ವೇಶತೀರ್ಥ ಮಹಾವಿದ್ಯಾಲಯ ಪದವಿ ಕಾಲೇಜು ಹಾಗೂ ಜೆಸಿಐ ಕಟಪಾಡಿ ಜಂಟಿ ಆಶ್ರಯದಲ್ಲಿ ಒಂದು ದಿನದ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣೆ, (ಮಧುಮೇಹ, ಕಣ್ಣಿನ ತಪಾಸಣೆ, ಮೂಳೆ ತಪಾಸಣೆ) ಹಾಗೂ ರಕ್ತದಾನ ಶಿಬಿರವು ಉಡುಪಿ ಜಿಲ್ಲಾ ಆಸ್ಪತ್ರೆ ಮತ್ತು ಸಿ,ಎಸ್,ಐ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ ಉಡುಪಿ, ಇವರ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಟ್ರಸ್ಟಿ ಸುದರ್ಶನ್ ರಾವ್ ಶಿಬಿರ ಉದ್ಘಾಟಿಸಿ ಮಾತನಾಡಿ, ವರ್ಷಕ್ಕೆ ಒಂದು ಬಾರಿಯಾದರೂ ನಾವು ರಕ್ತದಾನ ಮಾಡಬೇಕು ಇದರಿಂದ ಒಂದಷ್ಟು ಜನರಿಗೆ ನೆರವಾಗುವುದರ ಜೊತೆಗೆ ನಮ್ಮ ಆರೋಗ್ಯ ಕೂಡ ಸಮತೋಲನದಲ್ಲಿ ಇರುತ್ತದೆ. ಅಲ್ಲದೆ ಇಂತಹ ಉಚಿತ ಆರೋಗ್ಯ ಶಿಬಿರಗಳಿಂದ ಸುತ್ತಮುತ್ತಲಿನ ಹಳ್ಳಿಯ ಬಡ ಜನರಿಗೆ ಆರೋಗ್ಯ ತಪಾಸಣೆಯ ಅವಕಾಶ ಸಿಗುವುದರಿಂದ ಅವರು ರೋಗ ಮುಕ್ತ ಜೀವನ ನಡೆಸಲು ಸಹಾಯವಾಗುತ್ತದೆ ಎಂದರು.

ಶಿಬಿರದಲ್ಲಿ ಕಟಪಾಡಿ ಜೆ.ಸಿ.ಐ ನ ಪ್ರಶಾಂತ್ ಆರ್ ಎಸ್, ವೃಂದಿತಾ ಪ್ರಶಾಂತ್, ರೋಹಿ ರತ್ನಾಕರ್, ವೈದ್ಯರುಗಳಾದ ಡಾ. ಓಜಸ್ವಿ, ಡಾ. ಕವಿನ್, ಡಾ. ಅಭಿನವ್, ಡಾ. ರೆಬೆಕಾ ಹಾಗೂ ದಾದಿಯರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ವಿಜಯ್.ಪಿ ರಾವ್, ಸಂಯೋಜಕಿ ಸೌಮ್ಯಾ ಶ್ರೀಹರಿ, ಕಾಲೇಜಿನ ಎನ್.ಎಸ್.ಎಸ್ ಸಂಯೋಜನಾಧಿಕಾರಿ ಭಾಗ್ಯಶ್ರೀ, ವಿದ್ಯಾರ್ಥಿ ಮುಖಂಡರಾದ ಅಭಿಜಿತ್, ಶಿಲ್ಪಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೇಯಾ ಜಿ. ಆರ್ ಕಾರ್ಯಕ್ರಮ ನಿರೂಪಿಸಿ, ಐಶ್ರ‍್ಯ ಕೆ.ಎನ್ ಸ್ವಾಗತಿಸಿ, ಶಿಲ್ಪಾ ವಂದಿಸಿದರು. ಶಿಬಿರದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಸೇರಿದಂತೆ ಸುಮಾರು 200 ಕ್ಕೂ ಹೆಚ್ಚು ಜನ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡರು. ಹಾಗೂ ೫೦ ಯುನಿಟ್ ರಕ್ತ ಸಂಗ್ರಹಿಸಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರೈತ ಕರೆ ಕೇಂದ್ರದಲ್ಲಿ ಟೋಲ್ ಫ್ರೀ ಸಂಖ್ಯೆಯೊಂದಿಗೆ ವ್ಯಾನಿಟಿ ಸಂಖ್ಯೆ ಸಕ್ರಿಯ

ಉಡುಪಿ, ಏ.9: ರೈತ ಕರೆ ಕೇಂದ್ರದಲ್ಲಿ ಟೋಲ್ ಫ್ರೀ ಸಂಖ್ಯೆಯಾದ 1800-425-3553...

ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ, ಮಾಹಿತಿ ಶಿಬಿರ

ಉಡುಪಿ, ಏ.9: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ...

ಉತ್ತಮ ವ್ಯಕ್ತಿತ್ವವೇ ಜೀವನದ ದರ್ಪಣ: ಪ್ರೊ. ಪವನ್ ಕಿರಣ್‌ಕೆರೆ

ಕುಂದಾಪುರ, ಏ.9: ಸಮಾಜಕ್ಕೆ ಅಗತ್ಯವಿರುವುದು ಸುಶಿಕ್ಷಿತರಿಗಿಂತ ಸುಸಂಸ್ಕೃತರು. ಹೀಗಾಗಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವ...

ಎರಡು ದಿನಗಳ ರೇಂಜರ್ಸ್ ರೋವರ್ಸ್; ಯುವ ರೆಡ್ ಕ್ರಾಸ್ ವಾರ್ಷಿಕ ಶಿಬಿರ

ಮಂಗಳೂರು ಏ.9: ಡಾ. ಪಿ. ದಯಾನಂದ ಪೈ- ಪಿ. ಸತೀಶ ಪೈ...
error: Content is protected !!