Wednesday, September 9, 2026
Wednesday, September 9, 2026

ರಾಷ್ಟ್ರಪತಿ ಭವನಕ್ಕೆ ಭೇಟಿಗೆ ಸಂಜೀವಿನಿ ಬುಡಕಟ್ಟು ಮಹಿಳೆಗೆ ಅವಕಾಶ

ರಾಷ್ಟ್ರಪತಿ ಭವನಕ್ಕೆ ಭೇಟಿಗೆ ಸಂಜೀವಿನಿ ಬುಡಕಟ್ಟು ಮಹಿಳೆಗೆ ಅವಕಾಶ

Date:

ಬ್ರಹ್ಮಾವರ, ಮಾ.13: ಅಮೃತ ಉದ್ಯಾನ-2026 ರಾಷ್ಟ್ರಪತಿ ಭವನ ನವದೆಹಲಿಗೆ ಭೇಟಿ ನೀಡಲು ಬ್ರಹ್ಮಾವರ ತಾಲೂಕಿನ ವಡ್ದರ್ಸೆ ಗ್ರಾಮ ಪಂಚಾಯತ್ ನ ವಿಸ್ಮಯ ಸಂಜೀವಿನಿ ಒಕ್ಕೂಟದ ಬುಡಕಟ್ಟು ಜನಾಂಗದ ಮಹಿಳೆ ಜ್ಯೋತಿಗೆ ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಮೂಲಕ ದೆಹಲಿಯಲ್ಲಿ ನಡೆಯುವ ರಾಷ್ಟ್ರಪತಿ ಭವನದ ಅಮೃತ ಉದ್ಯಾನ ಭೇಟಿ ಕಾರ್ಯಕ್ರಮಕ್ಕಾಗಿ ರಾಜ್ಯದ ಆದಿವಾಸಿ ಬುಡಕಟ್ಟು ಸ್ವ ಸಹಾಯ ಗುಂಪಿನ 4 ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ.

ಭಾರತದ ರಾಷ್ಟ್ರಪತಿಗಳ ಆಶಯದಂತೆ ಎಲ್ಲಾ ವಿಶೇಷ ವರ್ಗದ ಸಿಬ್ಬಂದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಮೃತ ಉದ್ಯಾನಕ್ಕೆ ಭೇಟಿಗೆ ಆಹ್ವಾನಿಸಿದ್ದು ವಿಶೇಷವಾಗಿ ಬುಡಕಟ್ಟು ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ವಿಶೇಷವಾಗಿ ಆದ್ಯತೆ ನೀಡಲಾಗಿದೆ. ಜ್ಯೋತಿ ಇವರು ಸಂಜೀವಿನಿ ಒಕ್ಕೂಟದ ಮೂಲಕ ಸ್ವ ಸಹಾಯ ಸಂಘಗಳ ರಚನೆ, ಕಾರ್ಯಕ್ರಮ ಅನುಷ್ಠಾನ, ವಿವಿಧ ತರಬೇತಿ, ಸಾಲ ಸೌಲಭ್ಯ ಕಲ್ಪಿಸುವುದರ ಮೂಲಕ ಗ್ರಾಮೀಣ ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸುತ್ತಿದ್ದು ಈ ಮೂಲಕ ಇವರನ್ನು ಗುರುತಿಸಲಾಗಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ; ವಿಮಾನ ಪ್ರಯಾಣ ಅಸ್ತವ್ಯಸ್ತ

ಯು.ಬಿ.ಎನ್.ಡಿ., ಸೆ.8: ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ ಎಂಟು ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆಯನ್ನು...

ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ: ಸಾಲ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಉಡುಪಿ, ಸೆ.8: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ...
error: Content is protected !!