ಕಾಪು, ಫೆ.24: ಮಲ್ಲಾರು ಶ್ರೀ ಧೂಮಾವತಿ ದೈವಸ್ಥಾನದ ಅಂಗಳಕ್ಕೆ ಗ್ರಾನೈಟ್ ಅಳವಡಿಸಲು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು ಇದರ ಉದ್ಘಾಟನೆಯನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೆರವೇರಿಸಿದರು.
ಕಾಪು ಪುರಸಭಾ ಸದಸ್ಯರಾದ ಶೈಲೇಶ್ ಎನ್ ಅಮೀನ್, ಉಮೇಶ್ ಕರ್ಕೇರಾ, ವಿದ್ಯಾಲತಾ, ಪ್ರಮುಖರಾದ ಸುಧಾಮ ಶೆಟ್ಟಿ, ಸುರೇಖ ಶೈಲೇಶ್, ಸುನಿಲ್ ಶೆಟ್ಟಿ, ಸುಧಾಕರ್ ಶೆಟ್ಟಿ, ಉಮೇಶ್ ಪೂಜಾರಿ, ಯೋಗೀಶ್ ಪೂಜಾರಿ, ಸಂಕಪ್ಪ ಪೂಜಾರಿ, ಮೊಮ್ಮ ಪೂಜಾರಿ, ದಯಾನಂದ್ ಮಲ್ಲಾರ್, ಆನಂದ ಪೂಜಾರಿ, ಅಶೋಕ್ ಶೆಟ್ಟಿ ರಮೇಶ್ ಪೂಜಾರಿ ಗಣೇಶ್ ಪೂಜಾರಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.




By
ForthFocus™