Friday, February 27, 2026
Friday, February 27, 2026

ಕಲ್ಸಂಕ ಸೇತುವೆ ಅಗಲೀಕರಣ (ಫ್ರೀ ಲೆಫ್ಟ್) ಕಾಮಗಾರಿಗೆ ಚಾಲನೆ

ಕಲ್ಸಂಕ ಸೇತುವೆ ಅಗಲೀಕರಣ (ಫ್ರೀ ಲೆಫ್ಟ್) ಕಾಮಗಾರಿಗೆ ಚಾಲನೆ

Date:

ಉಡುಪಿ, ಫೆ.3: ಉಡುಪಿ ನಗರಸಭೆಯ ಮೂಲಕ ರೂ. 49 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಲ್ಸಂಕ ಜಂಕ್ಷನ್ ನಲ್ಲಿ ಅಂಬಾಗಿಲು ತಿರುವು ಸೇತುವೆ ಅಗಲೀಕರಣ ( ಫ್ರೀ ಲೆಫ್ಟ್ ) ಕಾಮಗಾರಿಗೆ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಉಡುಪಿ ನಗರದ ವಾಹನ ದಟ್ಟಣೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬಹು ವರ್ಷಗಳ ಬೇಡಿಕೆಯಾಗಿದ್ದ ಫ್ರೀ ಲೆಫ್ಟ್ ಕಾಮಗಾರಿಗೆ ನಗರಸಭೆಯ ಮೂಲಕ 49 ಲಕ್ಷ ವೆಚ್ಚದಲ್ಲಿ ಅನುದಾನ ಒದಗಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಂಡ ಬಳಿಕ ಕಲ್ಸಂಕ ಜಂಕ್ಷನ್ ನಿಂದ ಅಂಬಾಗಿಲು ಕಡೆಗೆ ಸಾಗುವ ವಾಹನಗಳಿಗೆ ಸುಗಮ ಸಂಚಾರ ಸಾಧ್ಯವಾಗಲಿದ್ದು ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

ಉಡುಪಿ ನಗರಸಭೆ ನಿಕಟಪೂರ್ವ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಟಿ. ಜಿ. ಹೆಗ್ಡೆ, ಗಿರೀಶ್ ಅಂಚನ್, ಸುಂದರ ಕಲ್ಮಾಡಿ, ಜಯಂತಿ ಪೂಜಾರಿ, ಅಶೋಕ್ ನಾಯ್ಕ್, ಗಿರಿಧರ ಆಚಾರ್ಯ, ಲಕ್ಷ್ಮೀ ಮಂಜುನಾಥ, ಸವಿತಾ ಹರೀಶ್ ರಾಮ್, ಭಾರತಿ ಪ್ರಶಾಂತ್, ಮಾನಸ ಸಿ. ಪೈ, ಅನಿಟ ಡಿಸೋಜ, ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷರಾದ ಶ್ರೀವತ್ಸ, ಪ್ರಮುಖರಾದ ಕಿಶೋರ್ ಕರಂಬಳ್ಳಿ, ದಯಾಶಿನಿ ಮೊದಲಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು

ಚೆನ್ನೈ, ಫೆ.26: ಇಲ್ಲಿಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್...

ಜೆಇಇ ಮೈನ್ ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್‌: ಜ್ಞಾನಸುಧಾದ ೮ ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್

ಕಾರ್ಕಳ, ಫೆ.26: ಎನ್.ಟಿ.ಎ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ ಬಿ.ಆರ್ಕ್ ಮತ್ತು...

ಬೆಂಗಳೂರಿನ ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ ‘ನಕಲಿ ವಿಶ್ವವಿದ್ಯಾಲಯ’ ಎಂದು ಯುಜಿಸಿ ಘೋಷಣೆ; ವಿದ್ಯಾರ್ಥಿಗಳು ಅದರಿಂದ ದೂರವಿರಲು ಸಲಹೆ

ಬೆಂಗಳೂರು, ಫೆ.26: ರಾಜಾಜಿನಗರದಲ್ಲಿರುವ ಬೆಂಗಳೂರು ಮೂಲದ 'ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ'ಯನ್ನು...
error: Content is protected !!