Friday, September 4, 2026
Friday, September 4, 2026

ಮಟ್ಟು: 23 ಪ್ರಬೇಧಗಳ 219 ಹಕ್ಕಿಗಳ ವೀಕ್ಷಣೆ

ಮಟ್ಟು: 23 ಪ್ರಬೇಧಗಳ 219 ಹಕ್ಕಿಗಳ ವೀಕ್ಷಣೆ

Date:

ಕಟಪಾಡಿ, ಫೆ.1: ಉಡುಪಿಗೆ ಬನ್ನಿ ತಂಡದ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಪಿತ್ರೋಡಿ ಹಾಗೂ ಮಟ್ಟು ಪರಿಸರದಲ್ಲಿ ಜನವರಿ 31 ರಂದು ಸಂಜೆ ಹಕ್ಕಿ ವೀಕ್ಷಣೆ ಕಾರ್ಯಕ್ರಮ ನಡೆಯಿತು.

ಸುಮಾರು ಒಂದೂವರೆ ಗಂಟೆಗಳ ಕಾಲ ಪರಿಸರಾಸಕ್ತರು ಕಾಲ್ನಡಿಗೆಯ ಮೂಲಕ ಸುತ್ತಮುತ್ತಲಿನ ಪರಿಸರದಲ್ಲಿ 23 ಪ್ರಬೇಧಗಳ 219 ಹಕ್ಕಿಗಳನ್ನು ಪಟ್ಟಿ ಮಾಡಿದರು.

ಇದರಲ್ಲಿ ಬ್ಲಾಕ್ ಹೆಡೆಡ್ ಐಬಿಸ್, ಗುಲಾಬಿ ಕೊರಳಿನ ಗಿಳಿ, ಸಣ್ಣ ಕುಟ್ರ, ಕಾಡು ಗೊರವಂಕ, ಚುಕ್ಕೆ ಬೆಳವ, ಗದ್ದೆ ಮಿಂಚುಳ್ಳಿ, ನೀಲಿ ಮಿಂಚುಳ್ಳಿ, ಕೆಂಪು ಟಿಟ್ಟಿಭ, ದೊಡ್ಡ ಬೆಳ್ಳಕ್ಕಿ, ಕೊಳದ ಬಕ, ಸಣ್ಣ ಕಳ್ಳಿಪೀರ, ಗದ್ದೆಗೊರವ, ಗಲ್ ಸೇರಿದಂತೆ 23 ಪ್ರಬೇಧಗಳು ಒಳಗೊಂಡಿವೆ. ಬಳಿಕ ಮಟ್ಟು ಗುಳ್ಳ ಬೆಳೆಗಾರರ ಜತೆ ಸಂವಾದ ನಡೆಯಿತು.

ಮಟ್ಟು ಗುಳ್ಳ ಬೆಳೆಗಾರರ ಸಂಘದ ಪ್ರಬಂಧಕ ಮಟ್ಟು ಲಕ್ಷ್ಮಣ್, ಗಿರೀಶ್ ಆಚಾರ್, ಪ್ರತಿಮಾ ಆಚಾರ್, ಮೇಧಾ ನಾಯಕ್, ರಮ್ಯಾ ಕಾಮತ್, ರಾಜಶ್ರೀ ಎಸ್., ವೈಭವ್ ಯಡಿಯಾಳ್, ವಿದ್ಯಾಶ್ರೀ ಎಸ್., ಪ್ರಸನ್ನ ಉದ್ಯಾವರ ಉಪಸ್ಥಿತರಿದ್ದರು. ಡಾ. ಗಣೇಶ್ ಪ್ರಸಾದ್ ಜಿ. ನಾಯಕ್ ಸ್ವಾಗತಿಸಿ ಕಾರ್ಯಕ್ರಮ ಸಂಯೋಜಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿಗೆ ಅವಳಿ ಪ್ರಶಸ್ತಿ

ಉಡುಪಿ, ಸೆ.4: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮತ್ತು ಸರಕಾರಿ...

ರಥಬೀದಿ ಕಾಲೇಜು: ಸಂಸ್ಕೃತ ದಿನಾಚರಣೆ

ಮಂಗಳೂರು, ಸೆ.3: ರಥಬೀದಿ ಕಾಲೇಜಿನಲ್ಲಿ ಸಂಸ್ಕೃತ ದಿನಾಚರಣೆ ಕಾರ್ಯಕ್ರಮ ಮಂಗಳೂರು ರಥಬೀದಿಯ...

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕಾಗಿ ಸಹಾಯಧನ: ಅರ್ಜಿ ಆಹ್ವಾನ

ಉಡುಪಿ, ಸೆ.4: ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕುಗಳಿಗೆ ಸಂಬಂಧಿಸಿದಂತೆ ಅಡಿಕೆ...

ಪಡುಕರೆ: ಮುದ್ದುಕೃಷ್ಣ ವೇಷ ಸ್ಪರ್ಧೆ ಸಂಪನ್ನ

ಪಡುಕರೆ, ಸೆ.4: ಶ್ರೀ ಕೃಷ್ಣ ಮಾರುತಿ ವ್ಯಾಯಾಮ ಶಾಲೆ, ಕಡೆಕಾರು ಪಡುಕರೆ...
error: Content is protected !!