ಕೋಟ, ಡಿ.28: ಗೆಳೆಯರ ಬಳಗ ಕಾರ್ಕಡ ಸಾಲಿಗ್ರಾಮ ಹಾಗೂ ಕಾರ್ಕಡ ಗ್ರಾಮಸ್ಥರಿಂದ ಸಂಗ್ರಹಿಸಿದ ಎರಡು ಲೋಡು ಒಣಹುಲ್ಲನ್ನು ಆರೂರು ಬೆಳ್ಮಾರಿನಲ್ಲಿರುವ ಪುಣ್ಯಕೋಟಿ ಗೋಸೇವಾ ಕೇಂದ್ರಕ್ಕೆ ತೆರಳಿ ಗೋಪೂಜೆ ನೆರವೇರಿಸಿ ಗೋಗ್ರಾಸ ನೀಡಿ ಹಸ್ತಾಂತರಿಸಲಾಯಿತು. ಕೊಡುಗೆಯನ್ನು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದ ಗೋಶಾಲೆಯ ನಿರ್ದೇಶಕ ಪ್ರಸಾದ ಇವರು, ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳರ ಸಮಾಜ ಸೇವೆ ಹಾಗೂ ಗೆಳೆಯರ ಬಳಗದ ಸದಸ್ಯರಿಗೆ ಗೋವಿನ ಮೇಲಿರುವ ಪ್ರೀತಿ ಭಕ್ತಿ ಅವರ ಈ ಸೇವೆಗೆ ಸಾಕ್ಷಿ. ಹುಲ್ಲು ನೀಡಿದ ಹಾಗೂ ಈ ಬಗ್ಗೆ ಕಾರ್ಯಾಚರಿಸಿದ ಗೆಳೆಯರ ಬಳಗದ ಎಲ್ಲ ಸದಸ್ಯರಿಗೂ ಗೋಮಾತೆ ಅನುಗ್ರಹಿಸಲಿ ಎಂದರು.
ಗೆಳೆಯರ ಬಳಗದ ಉಪಾಧ್ಯಕ್ಷ ಕೆ. ಶಶಿಧರ ಮಯ್ಯ, ಕಾರ್ಯದರ್ಶಿ ಕೆ. ನಾಗರಾಜ ಉಪಾಧ್ಯ, ಕೆ. ಜಗದೀಶ ಆಚಾರ್ಯ, ಕೆ. ತಮ್ಮಯ್ಯ ಹಾಗೂ ಕೆ. ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.




By
ForthFocus™