Tuesday, September 8, 2026
Tuesday, September 8, 2026

ಅಂತಾರಾಷ್ಟ್ರೀಯ ಫಿಲಾಟೆಲಿ ಪ್ರದರ್ಶನ​ದಲ್ಲಿ ಪೂರ್ಣಿಮಾ ಜನಾರ್ದನ್ ಅವರಿಗೆ ವರ್ಮೈಲ್ ಪ್ರಶಸ್ತಿ ಪುರಸ್ಕಾರ ​

ಅಂತಾರಾಷ್ಟ್ರೀಯ ಫಿಲಾಟೆಲಿ ಪ್ರದರ್ಶನ​ದಲ್ಲಿ ಪೂರ್ಣಿಮಾ ಜನಾರ್ದನ್ ಅವರಿಗೆ ವರ್ಮೈಲ್ ಪ್ರಶಸ್ತಿ ಪುರಸ್ಕಾರ ​

Date:

ಉಡುಪಿ, ಡಿ.16: ಇಂಡೋನೇಷಿಯನ್ ಫಿಲಾಟಲಿಸ್ಟ್ ಅಸೋಸಿಯೇಷನ್ ತನ್ನ 17ನೇ ನ್ಯಾಷನಲ್ ಬಾಲಿ ಪೆಕ್ಸ್ -2025ರ ಫಿಲಾಟಲಿ ಪ್ರದರ್ಶನದಲ್ಲಿ ಆಯೋಜಿಸಿದ್ದ ಇಂಟರ್ ನ್ಯಾಷನಲ್ ಫ್ರೆಂಡ್ ಶಿಪ್ ಫಿಲಾಟಲಿ ​ಸ್ಪರ್ಧೆ ಹಾಗು ಪ್ರದರ್ಶನದಲ್ಲಿ ಫಿಲಾಟಲಿಸ್ಟ್, ​ಉಡುಪಿ ವಿಭಾಗದ ಅಂಚೆ ಇಲಾಖಾ ಉದ್ಯೋಗಿ ಪೂರ್ಣಿಮಾ ಜನಾರ್ದನ್ ರವರ ಸಂಗ್ರಹದ ಅಂಚೆ ಚೀಟಿ ಪ್ರದರ್ಶನ “Discovering The Divine: An Exploration of Hindu Deities” (ಡಿಸ್ಕೌಂವರಿಂಗ್ ದಿ ಡಿವೈನ್, ಆನ್ ಎಕ್ಸ್ಪ್ರೆಲೋರೇಷನ್ ಆಫ್ ಹಿಂದೂ ಡಯಾಟಿಸ್) ಫಿಲಾಟಲಿ ಪ್ರದರ್ಶನವು 81 ಅಂಕ ಪಡೆದು ವರ್ಮೈಲ್​ ಪುರಸ್ಕಾರ ಪಡೆದಿದೆ. ಈ ಸಂದರ್ಭದಲ್ಲಿ ಪೂರ್ಣಿಮಾ ಜನಾರ್ದನರವರು ಫಿಲಾಟೆಲಿ ಹಾಗೂ ಸಂಸ್ಕೃತಿ ಬಗ್ಗೆ ನಡೆದ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿ ಅಂಚೆ ಚೀಟಿ ಸಂಗ್ರಹಣಾ ಹವ್ಯಾಸ ಮತ್ತು ಸಂಸ್ಕೃತಿಯ ಸಮ್ಮಿಲನದ ಔಚಿತ್ಯದ ಬಗ್ಗೆ ವಿಚಾರ ಮಂಡಿಸಿದ​ರು.

ಈ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ​ ಸೆಂಟ್ರಲ್ ಬೋರ್ಡ್ ಆಫ್ ಇಂಡೋನೆಷ್ಯಾ ಫಿಲಾಟೆಲಿಸ್ಟ್ ಅಸೋಸಿಯೇಷನ್ ನ ಪ್ರತಿನಿಧಿಯಾಗಿರುವ ನಸುರುಲ್ ಜಿಹಾದಾನ್, ಬಾಲಿ ಜನರಲ್ ಫೋಸ್ಟ್ ಆಫೀಸ್ ನ ಕಾರ್ಪೊರೇಟ್ ಮ್ಯಾನೇಜರ್ ಹಬೀಬಿ ಹಾಗೂ ಬಾಲಿ ಪೆಕ್ಸ್ -2025 ರ ಮುಖ್ಯ ಆಯೋಜಕ ಹಾಗೂ ಪ್ರಥಮ ಬಾಲಿ ಪೆಕ್ಸ್ ಸಂಘಟಕ​ ಸೂರ್ಯ ಹದಿನಾಥ ಹಾಗೂ ಇತರ ಪ್ರಶಸ್ತಿ ವಿಜೇತರು ಉಪಸ್ಥಿತರಿದ್ದರು.

ಹಿಂದೂ ದೇವರು ಹಾಗೂ ದೇವತೆಗಳ ಬಗ್ಗೆ ಪೂರ್ಣಿಮಾರವರ ಸಂಗ್ರಹದ ಅಂಚೆ ಚೀಟಿ ಪ್ರದರ್ಶನ ಜ​ಮೆಚ್ಚುಗೆ ಪಡೆಯಿತು. ಈ ಪ್ರದರ್ಶನ ಇಂಡೋನೇಷ್ಯಾ ಬಾಲಿಯ ದೆನ್ ಪಸಾರ್ ನಲ್ಲಿರುವ ಸ್ಟೇಟ್ ಮ್ಯೂಸಿಯಂನಲ್ಲಿ ಡಿಸೆಂಬರ್ 11 ರಿಂದ 14ರ ವರೆಗೆ ನಡೆದಿದ್ದು ವಿಶ್ವದ ಸುಮಾರು 27 ಫಿಲಾಟೆಲಿಸ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿಯಲ್ಲಿ ಕೇರಳದ ಸಾಂಸ್ಕೃತಿಕ ವೈಭವ: ಓಣಂ ಸಂಭ್ರಮಕ್ಕೆ ಮನಸೋತ ಕರಾವಳಿಗರು

ಉಡುಪಿ, ಸೆ.7: ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವದ ಸಂಭ್ರಮದ ನಡುವೆಯೇ...

ಕ್ರಿಯೇಟಿವ್ ಗುರುದೇವೋಭವ: ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಭಾಗಿ

ಕಾರ್ಕಳ, ಸೆ.7: ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಕ್ರಿಯೇಟಿವ್...

ಸರಸ್ವತಿ ವಿದ್ಯಾಲಯದಲ್ಲಿ ಇ ವೇಸ್ಟ್ ಮ್ಯಾನೇಜ್ಮೆಂಟ್ ಕಾರ್ಯಕ್ರಮ

ಗಂಗೊಳ್ಳಿ, ಸೆ.7: ಇ ತ್ಯಾಜ್ಯಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು ಹೇಗೆ...

ತ್ರಿಶಾ ವಿದ್ಯಾ ಪಿಯು ಕಾಲೇಜು ಕಟಪಾಡಿ: ಕಾಪು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

ಕಟಪಾಡಿ, ಸೆ.7: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ತ್ರಿಶಾ...
error: Content is protected !!