ಉಡುಪಿ, ನ.22: ಉಡುಪಿಯಲ್ಲಿ ನಡೆದ ಆಕ್ಸಿಸ್ ಮ್ಯಾಕ್ಸ್ ಇನ್ಶುರೆನ್ಸ್ ಕಂಪನಿಯ ಬೆಳ್ಳಿ ಮಹೋತ್ಸವ ಆಚರಣೆಯಲ್ಲಿ ಶಿಕ್ಷಣ ತಜ್ಞ ಮತ್ತು ಪರಿಸರವಾದಿ ಡಾ. ಬಾಲಕೃಷ್ಣ ಎಸ್. ಮದ್ದೋಡಿ ಅವರನ್ನು ಶಿಕ್ಷಣ, ಪರಿಸರ ಮತ್ತು ಆರೋಗ್ಯ ಸೇವೆಗಳ ಮೂಲಕ ಸಮುದಾಯ ಅಭಿವೃದ್ಧಿ ಮತ್ತು ಸಮುದಾಯ ಸಂಪರ್ಕಕ್ಕೆ ನೀಡಿದ ಗಮನಾರ್ಹ ಸೇವೆಗಾಗಿ ಸನ್ಮಾನಿಸಲಾಯಿತು. ಆಕ್ಸಿಸ್ ಮ್ಯಾಕ್ಸ್ ಲೈಫ್ ಶಾಖೆಯ ಮುಖ್ಯಸ್ಥೆ ಜ್ಯೋತಿ ಶೇಟ್, ಉದ್ಯಮಿ ಅಜಯ್ ಪಿ ಶೆಟ್ಟಿ, ಜನಾರ್ದನ ಕೊಡವೂರು ಮತ್ತು ರಾಘವೇಂದ್ರ ರಿಲಯನ್ಸ್ ಸ್ಮಾರ್ಟ್ ಅವರ ಸಮ್ಮುಖದಲ್ಲಿ ಡಾ. ಮದ್ದೋಡಿ ಅವರನ್ನು ಶಿಕ್ಷಣ ರತ್ನ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು. ಮ್ಯಾಕ್ಸ್ ಲೈಫ್ ಇನ್ಶುರೆನ್ಸ್‌ನ ಗ್ರಾಹಕ ಸ್ನೇಹಿ ಸೇವೆಗಳ ಬಗ್ಗೆ ಸನ್ಮಾನಿತರು ಮೆಚ್ಚುಗೆ ವ್ಯಕ್ತಪಡಿಸಿದರು.
ಆಕ್ಸಿಸ್ ಮ್ಯಾಕ್ಸ್ ಇನ್ಶುರೆನ್ಸ್ ಕಂಪನಿ: ಸಾಧಕರಿಗೆ ಸನ್ಮಾನ
ಆಕ್ಸಿಸ್ ಮ್ಯಾಕ್ಸ್ ಇನ್ಶುರೆನ್ಸ್ ಕಂಪನಿ: ಸಾಧಕರಿಗೆ ಸನ್ಮಾನ
Date:




By
ForthFocus™