ಕೋಟ, ನ.13: ಮಾನವ ಕಳ್ಳ ಸಾಗಾಣಿಕೆ ಮಾಡುವುದು, ದೌರ್ಜನ್ಯ ಎಸಗುವುದು ಒಂದು ಹೀನಕೃತ್ಯವಾಗಿದೆ. ಇದೊಂದು ಸಮಾಜಕ್ಕೆ ಅಂಟಿದ ರೋಗ. ಇದನ್ನು ತಡೆಗಟ್ಟುವಲ್ಲಿ ಪ್ರತಿಯೋಬ್ಬ ನಾಗರಿಕರು ಬದ್ಧರಾಗಿರಬೇಕು ಎಂದು ತಾಲ್ಲೂ ಕಾನೂನು ಸೇವೆಗಳ ಸಮಿತಿ ಕುಂದಾಪುರದ ವಕೀಲಾರದ ಮಂಜುನಾಥ್ ಹೇಳಿದರು. ಅವರು ವಿವೇಕ ಪದವಿಪೂರ್ವ ಕಾಲೇಜು ಕೋಟ, ಓಯಾಶಿಸ್ ಇಂಡಿಯಾ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ಉಡುಪಿ, ಪಡಿ ಮಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಂಯುಕ್ತವಾಗಿ ಆಯೋಜಿಸಿದ್ದ ಮುಕ್ತಿ ಬೈಕ್ ಚ್ಯಾಲೆಂಜ್- 2025ರ ಅಂಗವಾಗಿ ಆಯೋಜಿಸಿದ್ದ, ಮಾನವ ಕಳ್ಳ ಸಾಗಾಣಿಕೆಯ ತಡೆ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ಮಾತಾನಾಡಿದರು. ಮಾನವ ಕಳ್ಳ ಸಾಗಾಣಿಕೆ ತಡೆಯುವುದು ಎಲ್ಲರ ಕರ್ತವ್ಯ ಆಗಿದೆ. ಮಕ್ಕಳು, ಮಹಿಳೆ, ಪುರುಷ ಎನ್ನದೆ ಎಲ್ಲ ರೀತಿಯ ಜನರನ್ನು ವಿವಿಧ ಕಾರಣಗಳಿಗಾಗಿ ಕಿಡ್ನ್ಯಾಪ್, ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ. ಮುಖ್ಯವಾಗಿ ಹಣದ ಆಮಿಷ, ದೌರ್ಜನ್ಯಗಳಿಂದ ಕಳ್ಳ ಸಾಗಾಣಿಕೆ ಮಾಡುತ್ತಾರೆ. ಇಂದು ಯಾರದೋ ಕುಟುಂಬದಲ್ಲಿ ಆಗಿರಬಹುದು. ಮುಂದಿನ ದಿನಗಳಲ್ಲಿ ನಮ್ಮ ಕುಟುಂಬದಲ್ಲೂ ಅಗಬಹುದು. ಈ ಎಚ್ಚರಿಕೆಯಿಂದ ನಾವು ಎದುರಿಸಿ, ಕಳ್ಳ ಮಾನವ ಸಾಗಾಣಿಕೆ ಆಗದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ವಿವೇಕ ಪದವಿಪೂರ್ವ ಕಾಲೇಜು ಕೋಟದ ಪ್ರಾಂಶುಪಾಲರಾದ ಕೆ. ಜಗದೀಶ್ ನಾವಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾನವ ಕಳ್ಳ ಸಾಗಾಣಿಕೆ ಅಪರಾಧ ಹಾಗೂ ರಕ್ಷಣಾತ್ಮಕ ಕಾನೂನುಗಳ ಕುರಿತು ಮಾಹಿತಿ ನೀಡಿದರು. ಸಂಗೀತ, ಓಯಾಶಿಸ್ ಇಂಡಿಯಾ ಇವರು ಮಾನವ ಕಳ್ಳ ಸಾಗಣಿಕೆಯ ತಡೆ ಅಭಿಯಾನದ ಗುರಿ ಮತ್ತು ಉದ್ದೇಶದ ಕುರಿತು ತಿಳಿಸಿದರು. ನಂತರ, ಕ್ರೈಸ್ಟ್ ಯುನಿರ್ವಸಿಟಿಯ ವಿದ್ಯಾರ್ಥಿಗಳು, ಮಾನವ ಮಾರಾಟ, ಕಳ್ಳ ಸಾಗಣಿಕೆ, ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ಕುರಿತಾಗಿ ಜನಜಾಗೃತಿ ಮೂಡಿಸುವ ಬೀದಿ ನಾಟಕವನ್ನು ವಿವೇಕ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆಸಲಾಯಿತು.
ಹಿಂದಿನ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ರಮಾನಂದ ಭಟ್ ಚೇಂಪಿ, ರಾಧಾ ದಾಸ್, ಉಪಾಧ್ಯಕ್ಷರು, ಜಿಲ್ಲಾ ಮಹಿಳಾ ಮಂಡಳಿ ಉಡುಪಿ ಜಿಲ್ಲೆ, ಪಡಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೆನ್ನಿ ಡಿಸೋಜ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಉಪಾಧ್ಯಕ್ಷರಾದ ತಿಲೋತ್ತಮ ನಾಯಕ್, ರತಿಬಾಯಿ ಹಿರಿಯ ಶಿಕ್ಷಕರು ವಿವೇಕ ಬಾಯ್ಸ್ ಹೈಸ್ಕೂಲ್ ಕೋಟ, ವೆಂಕಟೇಶ ಉಡುಪ ಮುಖ್ಯ ಶಿಕ್ಷಕರು, ವಿವೇಕ ಗರ್ಲ್ಸ್ ಸ್ಕೂಲ್ ಕೋಟ, ಪ್ರೇಮನಂದಾ ಮುಖ್ಯ ಶಿಕ್ಷಕರು, ವಿವೇಕ ಬಾಯ್ಸ್ ಹೈಸ್ಕೂಲ್ ಕೋಟ, ಪ್ರೀತಿ ರೇಖಾ, ಮುಖ್ಯ ಶಿಕ್ಷಕರು ವಿವೇಕ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕೋಟ, ಓಯಾಶಿಸ್ ಸಂಸ್ಥೆಯ ಆರ್ಮುಗಂ, ಸಂಗೀತ, ಮತ್ತು ವಿವೇಕ ಪದವಿಪೂರ್ವ ಕಾಲೇಜಿನ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




By
ForthFocus™