Wednesday, April 22, 2026
Wednesday, April 22, 2026

ಕನ್ನಡವನ್ನು ಕನ್ನಡವಾಗಿ ಉಳಿಸಿಕೊಳ್ಳುವ ಗಟ್ಟಿಯಾದ ಮನಸ್ಥಿತಿ ನಮ್ಮದಾಗಲಿ: ರಾಮಾಂಜಿ

ಕನ್ನಡವನ್ನು ಕನ್ನಡವಾಗಿ ಉಳಿಸಿಕೊಳ್ಳುವ ಗಟ್ಟಿಯಾದ ಮನಸ್ಥಿತಿ ನಮ್ಮದಾಗಲಿ: ರಾಮಾಂಜಿ

Date:

ಹಿರಿಯಡಕ, ನ.2: ಭಾಷೆ, ಬದುಕು, ಕಸುಬು, ಕಾಯಕ ಆರಾಧನೆ ಆಚರಣೆ ಎಲ್ಲವೂ ಆಗಿ ನಮ್ಮ ನಿತ್ಯದ ಬದುಕಿನ ಜೊತೆಗೆ ಬೆರೆತಿರುವ ನಾಡನುಡಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮೂಲಕ ಕನ್ನಡವನ್ನು ಕನ್ನಡವಾಗಿ ಉಳಿಸಿಕೊಳ್ಳುವ ಗಟ್ಟಿಯಾದ ಮನಸ್ಥಿತಿ ನಮ್ಮದಾಗಲಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಉಡುಪಿ ಜಿಲ್ಲಾ ಸಂಚಾಲಕ ರಾಮಾಂಜಿ ಹಾರೈಸಿದರು. ಅವರು ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿತವಾದ ನಾಡಹಬ್ಬ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಜಯಪ್ರಕಾಶ್‌ ಶೆಟ್ಟಿ ಹೆಚ್‌., ಕನ್ನಡದ ಹೆಗಲ ಮೇಲೆ ಕುಳಿತು ಸವಾರಿ ನಡೆಸುವ ಭಾಷೆಗಳ ಕುರಿತು ಎಚ್ಚರ ವಹಿಸುವ ಮೂಲಕ ಕನ್ನಡ ರಾಷ್ಟ್ರೀಯತೆಯನ್ನು ಜತನವಾಗಿ ಕಾಪಾಡಿಕೊಳ್ಳಬೇಕಾದ ಹೊಣೆ ನಮ್ಮದು ಎಂದರು.

ಕನ್ನಡ ವಿಭಾಗ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯಲತಾ ಪಿ. ಸ್ವಾಗತಿಸಿ, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಅಪರ್ಣ ಕೆ ಯು ವಂದಿಸಿದ ಈ ಕಾರ್ಯಕ್ರಮವನ್ನು ರಾ.ಸೇ.ಯೋ. ಮತ್ತು ಯೂತ್‌ ರೆಡ್‌ಕ್ರಾಸ್‌ ಕಾರ್ಯಕ್ರಮಾಧಿಕಾರಿ ನಂದೀಶ್‌ಕುಮಾರ್‌ ಕೆ.ಸಿ. ನಿರೂಪಿಸಿದರು. ಐಕ್ಯುಎಸಿ ಸಂಚಾಲಕ ಡಾ. ಲಿತಿನ್‌ ಬಿ ಎಂ, ವಿದ್ಯಾರ್ಥಿ ನಾಯಕ ಈರಬಸು ಹಾಗೂ ಇತರ ಬೋಧಕ, ಬೋಧಕೇತರರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ವರ್ಷ- ಭಯೋತ್ಪಾದನಾ ಕೃತ್ಯ ಎಸಗಿದವರಿಗೆ ಭಾರತೀಯ ಸೇನೆಯ ಕಠಿಣ ಎಚ್ಚರಿಕೆ

ಶ್ರೀನಗರ, ಏ.22: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷ ಈ ದಿನದಂದು,...

ಜೆಇಇ ಮೈನ್ (ಬಿ.ಟೆಕ್) ಅಂತಿಮ ಫಲಿತಾಂಶ: ಜ್ಞಾನಸುಧಾದ 10 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಟೋಟಲ್ ಪರ್ಸಂಟೈಲ್; ಟಾಪರ್ ಆಗಿ 99.9055199 ಪರ್ಸಂಟೈಲ್‌ನೊಂದಿಗೆ ಕನಿಷ್ಕ್ ಅಮೀನ್

ಕಾರ್ಕಳ, ಏ.21: ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸಿದ ಜೆಇಇ ಮೈನ್(ಬಿ.ಟೆಕ್)-2026ರ...

ಜೆಇಇ ಮೈನ್ಸ್ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

ಕಾರ್ಕಳ, ಏ.21: ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ...
error: Content is protected !!