ಬ್ರಹ್ಮಾವರ, ಅ.28: ಸಾಸ್ತಾನ ಸೇರಿದಂತೆ ವಿವಿಧ ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರ ರಕ್ಷಣೆಗಾಗಿ ಸಾಸ್ತಾನದ ಅನ್ಯೋನ್ಯತಾ ರಿಕ್ಷಾ ಚಾಲಕರ ಮನವಿಗೆ ಸ್ಪಂದಿಸಿದ ಬೆಂಗಳೂರಿನ ಉದ್ಯಮಿಯೋರ್ವರು ಕೊಡ ಮಾಡಿದ ೬ ಬ್ಯಾರಿಕೇಡ್ ಗಳನ್ನು ಬಿಜೆಪಿ ಮುಖಂಡ ಐರೋಡಿ ವಿಠಲ ಪೂಜಾರಿ ಸಮ್ಮುಖದಲ್ಲಿ ಕೋಟ ಆರಕ್ಷಕ ಠಾಣಾಧಿಕಾರಿ ಪ್ರವೀಣ್ ಕುಮಾರ್‌ರವರಿಗೆ ಹಸ್ತಾಂತರಿಸಲಾಯಿತು.
ಗೋಳಿಗರಡಿ ದೈವಸ್ಥಾನದ ಶಂಕರಪಾತ್ರಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯೆ ಸುಲತಾ ಹೆಗ್ಡೆ, ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ, ಕೋಟ ಅಮೃತೇಶ್ವರಿ ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ, ಸ್ಥಳೀಯರಾದ ಭಾಸ್ಕರ್ ಶೆಟ್ಟಿ, ಉದಯ ಶೆಟ್ಟಿ, ಪ್ರಕಾಶ್ ಶೆಟ್ಟಿ, ಶಂಕರ್ ಕುಲಾಲ್, ಶಿವಕೃಪಾ ರಿಕ್ಷಾ ಚಾಲಕರು, ಗೂಡ್ಸ್ ವಾಹನ ಚಾಲಕರು, ಅನ್ಯೋನ್ಯತಾ ರಿಕ್ಷಾ ಚಾಲಕರು ಇದ್ದರು.




By
ForthFocus™