Sunday, April 26, 2026
Sunday, April 26, 2026

ಪ್ರಧಾನಮಂತ್ರಿ ಮಾತೃವಂದನಾ ಯೋಜನೆ: ಸಹಾಯಧನ ಸೌಲಭ್ಯ

ಪ್ರಧಾನಮಂತ್ರಿ ಮಾತೃವಂದನಾ ಯೋಜನೆ: ಸಹಾಯಧನ ಸೌಲಭ್ಯ

Date:

ಉಡುಪಿ, ಅ.22: ಕೇಂದ್ರ ಸರ್ಕಾರದ ವತಿಯಿಂದ ಗರ್ಭಿಣಿ / ಬಾಣಂತಿ ಮಹಿಳೆಯರಿಗಾಗಿ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ಮೊದಲ ಪ್ರಸವದ ಗರ್ಭಿಣಿ/ ಬಾಣಂತಿ ಮಹಿಳೆಯರಿಗೆ 5000 ರೂ.ಗಳ ಸಹಾಯಧನ ಲಭ್ಯವಿದ್ದು, ಮೊದಲ ಪ್ರಸವದ ಗರ್ಭಿಣಿಯು ಎಲ್.ಎಂ.ಪಿ ದಿನಾಂಕದಿಂದ 150 ದಿನಗಳ ಒಳಗೆ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಮೊದಲನೇ ಕಂತಿನ ಅರ್ಜಿಯನ್ನು ನೋಂದಾಯಿಸಬೇಕು ಹಾಗೂ ಎರಡನೇ ಕಂತಿನಲ್ಲಿ ಮಗುವಿನ ಜನನದ ನೋಂದಣಿ ಮತ್ತು 3 ನೇ ಚುಚ್ಚುಮದ್ದು ಪೂರ್ಣಗೊಂಡ ಬಳಿಕ ಅರ್ಜಿಯನ್ನು ನೋಂದಾಯಿಸಬಹುದಾಗಿದೆ. ಮೊದಲನೆ ಕಂತಿನಲ್ಲಿ ರೂ.3000 ಹಾಗೂ ಎರಡನೇ ಕಂತಿನಲ್ಲಿ ರೂ. 2000 ನ್ನು (ಮಗುವಿನ ಜನನದ ನಂತರ 3 ನೇ ಚುಚ್ಚುಮದ್ದು ಪೂರ್ಣಗೊಂಡ ನಂತರ) ಫಲಾನುಭವಿಯ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (ಡಿ.ಬಿ.ಟಿ) ಮೂಲಕ ವರ್ಗಾಯಿಸಲಾಗುವುದು.

2 ನೇ ಪ್ರಸವದ ಬಾಣಂತಿ ಮಹಿಳೆಯರಿಗೆ ಹೆಣ್ಣು ಮಗು ಜನಿಸಿದಲ್ಲಿ ರೂ. 6000 ಸಹಾಯಧನ ದೊರೆಯಲಿದ್ದು, ಜನನದ ನಂತರ ಒಂದನೇ ಕಂತಿನಲ್ಲಿ ನೇರ ನಗದು ವರ್ಗಾವಣೆ (ಡಿ.ಬಿ.ಟಿ) ಮೂಲಕ ಫಲಾನುಭವಿಯ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ವರ್ಗಾಹಿಸಲಾಗುವುದು (ಮಗು ಜನಿಸಿದ 270 ದಿನಗಳೊಳಗೆ ನೋಂದಾವಣೆಯಾಗಬೇಕು). ನೋಂದಣಿಗೆ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ, ತಾಯಿ ಮತ್ತು ಶಿಶು ರಕ್ಷಣಾ ಕಾರ್ಡ್ ಪ್ರತಿ, ಫಲಾನುಭವಿಯ ಆಧಾರ್ ಕಾರ್ಡ್ ಪ್ರತಿ, ಪಡಿತರ ಚೀಟಿ/ ಜಾತಿ ಮತ್ತು ಆದಾಯ ಪ್ರಮಾಣ ಪತ್ರ / ನರೇಗಾ ಕಾರ್ಡ್/ ಇ-ಶ್ರಮ್ ಕಾರ್ಡ್/ಆಯುಷ್ಮಾನ್ ಕಾರ್ಡ್ (ಯಾವುದಾದರೂ ಒಂದು ನಕಲು ಪ್ರತಿ, ಪೋಷಣಾ ಟ್ರಾಕರ್‌ನಲ್ಲಿ ಫೇಸ್ ಅಥೆಂಟಿಕೇಷನ್, ಫಲಾನುಭವಿಯ ಬ್ಯಾಂಕ್ ಖಾತೆ (ಎನ್.ಪಿ.ಸಿ.ಐ ಮ್ಯಾಪಿಂಗ್ ಕಡ್ಡಾಯ) ಪ್ರತಿ ಕಡ್ಡಾಯವಾಗಿದ್ದು, ಹೆಚ್ಚಿನ ವಿವರಗಳಿಗೆ ಸಮೀಪದ ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ, ಮಹಿಳಾ ಮೇಲ್ವಿಚಾರಕಿ ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಟ್ರಂಪ್ ಭೋಜನಕೂಟದಲ್ಲಿ ಗುಂಡು ಹಾರಾಟ; ಅಮೆರಿಕ ಅಧ್ಯಕ್ಷ ಸ್ಥಳಾಂತರ

ಯು.ಬಿ.ಎನ್.ಡಿ., ಏ.26: ವಾಷಿಂಗ್ಟನ್ ಹಿಲ್ಟನ್‌ನ ಲಾಬಿಯಲ್ಲಿ ಶಂಕಿತ ಗುಂಡು ಹಾರಾಟದ ವರದಿಯಾದ...

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಬ್ಯಾಂಕಿಂಗ್ ಪರವಾನಗಿಯನ್ನು ದ್ದುಗೊಳಿಸಿದ ಆರ್.ಬಿ.ಐ

ನವದೆಹಲಿ, ಏ.26: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ ನೀಡಲಾದ ಬ್ಯಾಂಕಿಂಗ್ ಪರವಾನಗಿಯನ್ನು...

ನೀತಿ ಆಯೋಗದ ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಲಾಹಿರಿ ನೇಮಕ

ನವದೆಹಲಿ, ಏ.26: ಸರ್ಕಾರವು ನೀತಿ ಆಯೋಗವನ್ನು ಪುನರ್ರಚಿಸಿದೆ. ಅರ್ಥಶಾಸ್ತ್ರಜ್ಞ ಅಶೋಕ್ ಕುಮಾರ್...
error: Content is protected !!