ಕಾರ್ಕಳ, ಅ.12: ಕಾರ್ಕಳ ತೆಳ್ಳಾರು ರಸ್ತೆಯ ಶ್ರೀ ದೇವಕಿ ಕೃಷ್ಣ ರವಳನಾಥ ದೇವಸ್ಥಾನದಲ್ಲಿ ಚಂಡಿಕಾಯಾಗ ವೇ.ಮೂ. ಸಂದೀಪ್ ಭಟ್ ನೇತೃತ್ವದಲ್ಲಿ ನಡೆಯಿತು. ಸೇವಾದಾರದ ಚಂದ್ರಕಲಾ ದೇವದಾಸ್ ಕಾಮತ್ ಉಡುಪಿ ಪೂಜಾ ಕಾರ್ಯದಲ್ಲಿ ಸಹಕರಿಸಿದರು.

ಶ್ರೀದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಶ್ರೀ ದೇವಿಗೆ ವಿಶೇಷ ಅಲಂಕಾರ, ಸಾಮೂಹಿಕ ನಮಸ್ಕಾರ, ಚಂಡಿಕಾ ಹೋಮದ ಪೂರ್ಣಾಹುತಿ, ಸುಹಾಸಿನಿ ಪೂಜೆ, ಕುಮಾರಿ ಪೂಜೆ, ದಂಪತಿ ಪೂಜೆ, ಪಲ್ಲಪೂಜೆ, ಮಹಾಪೂಜೆಯ ಬಳಿಕ ಸಮಾರಾಧನೆ ಜರಗಿತು. ರಾತ್ರಿ ಶ್ರೀ ದೇವಕಿ ಕೃಷ್ಣ ರವಳನಾಥ ದೇವರಿಗೆ ಹೂವಿನ ಪೂಜೆ, ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ರಂಗಪೂಜೆ ಪ್ರಸಾದ ವಿತರಣೆ ನಡೆಯಿತು. ದೇವಳದ ಆಡಳಿತ ಮಂಡಳಿಯ ಸದಸ್ಯರಾದ ಟಿ. ಸುಧಾಕರ್ ಪ್ರಭು, ರಾಮನಾರಾಯಣ ಪ್ರಭು, ವಿನೋದ್ ಪ್ರಭು, ಆರ್ ವಸಂತ್ ಪ್ರಭು, ಮುಂತಾದವರು ಉಪಸ್ಥಿತರಿದ್ದರು.




By
ForthFocus™