Friday, November 20, 2026
Friday, November 20, 2026

ಕಾವಿ ಕಲಾವಿದ ಡಾ. ಜನಾರ್ದನ ಹಾವಂಜೆಯವರ ‘ಯಕ್ಷ’ ಕಲಾಕೃತಿಯು ಪ್ರದರ್ಶನ

ಕಾವಿ ಕಲಾವಿದ ಡಾ. ಜನಾರ್ದನ ಹಾವಂಜೆಯವರ ‘ಯಕ್ಷ’ ಕಲಾಕೃತಿಯು ಪ್ರದರ್ಶನ

Date:

ಹಾವಂಜೆ, ಅ.12: ಸಮಕಾಲೀನ ಕಲೆಯನ್ನು ಜನ ಸಾಮಾನ್ಯರೊಂದಿಗೆ ಬೆಸೆಯುವ ಪ್ರಯತ್ನದ ಶಿಕಾಗೋ ಅಂತರರಾಷ್ಟ್ರೀಯ ಟರ‍್ರೆನ್ ಬಿನಾಲೆಯು ಅಕ್ಟೋಬರ್ 1 ರಿಂದ ನವೆಂಬರ್ 15ರ ತನಕ ವಿಶ್ವದಾದ್ಯಂತ ನಡೆಯುತ್ತಿದ್ದು, ಉಡುಪಿಯ ಕಾವಿ ಕಲಾವಿದ ಡಾ. ಜನಾರ್ದನ ಹಾವಂಜೆಯವರ ‘ಯಕ್ಷ’ ಕಲಾಕೃತಿಯು ಇದೇ ಸಂದರ್ಭದಲ್ಲಿ ಹಾವಂಜೆಯ ಭಾಸ ಗ್ಯಾಲರಿ ಮತ್ತು ಸ್ಟುಡಿಯೋದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಅಮೆರಿಕಾ, ಡೆನ್ಮಾರ್ಕ್, ಜರ್ಮನಿ, ಗ್ರೀಸ್, ಇಟೆಲಿ ಮೊದಲಾದ ವಿಶ್ವದ ಸುಮಾರು 60ಕ್ಕೂ ಮಿಕ್ಕಿದ ಕಡೆಗಳಲ್ಲಿ 80ಕ್ಕೂ ಮಿಕ್ಕಿ ಸಮಕಾಲೀನ ಕಲಾಕೃತಿಗಳು ಇದರ ಭಾಗವಾಗಿ ಪ್ರದರ್ಶನಗೊಳ್ಳುತ್ತಿದ್ದು ಭಾರತದ ಹತ್ತು ಕಡೆಗಳಲ್ಲಿನ ಕಲಾಕೃತಿಗಳು ಈ ಪ್ರದರ್ಶನಕ್ಕೆ ಆಯ್ಕೆಯಾಗಿವೆ ಎಂಬುದಾಗಿ ಭಾರತದ ಕಲಾಪ್ರದರ್ಶನದ ಸಂಯೋಜಕಿ ಭಾಗ್ಯ ಅಜಯ್‌ಕುಮಾರ್ ತಿಳಿಸಿದ್ದಾರೆ.

ಹಾವಂಜೆಯಲ್ಲಿ ಪ್ರದರ್ಶನಗೊಳ್ಳುತ್ತಿರುವ “ಯಕ್ಷ” ಮಿಶ್ರ ಮಾಧ್ಯಮದ ಕಲಾಕೃತಿಯು ಗ್ರಾಮೀಣ ಬದುಕನ್ನು ದರ್ಶಿಸುವ ಯಕ್ಷ ಕಲಾವಿದನೋರ್ವನ ಬದುಕನ್ನು ಸೆರೆಹಿಡಿದು ಪ್ರದರ್ಶನಗೊಳ್ಳುತ್ತಿದೆ. ನಿಜ ಜೀವನದ ಯಕ್ಷನನ್ನು ಬಿಂಬಿಸಿದ ಈ ಕಲಾಕೃತಿಯು ಕಾವಿ ಕಲೆಯ ಸಾಂಪ್ರದಾಯಿಕ ಸೊಗಡನ್ನು ದುಡಿಸಿಕೊಂಡು, ಗದ್ದೆಯ ಮಣ್ಣಿನ ಜೊತೆಗೆ ಕೆಮ್ಮಣ್ಣು, ಸುಣ್ಣ ಮಾತ್ರವಲ್ಲದೇ ಛಾಯಾಚಿತ್ರಗಳನ್ನೂ ಬಳಸಿಕೊಂಡುದು ಅದಕ್ಕೊಂದು ಸಮಕಾಲೀನ ಚೌಕಟ್ಟನ್ನು ನಿರ್ಮಿಸಿದೆ. ಹಳ್ಳಿಗರ ದೈನಂದಿನ ದಾಖಲಿಸಲ್ಪಡದ ಅಂಶಗಳನ್ನು ಮತ್ತು ಯಕ್ಷರಂಗದಲ್ಲಿ ಮಿಂಚುವ ವಿಜೃಂಭಣೆಯನ್ನು ಈ ಕಲಾಕೃತಿಯು ದರ್ಶಿಸುತ್ತ ವೀಕ್ಷಕರ ಮನಸೂರೆಗೊಳ್ಳುತ್ತಿದೆ. ವೆಬ್ ಸೈಟ್ ಲಿಂಕ್ : https://terrainexhibitions.org/tb25-karnakata-india

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶತಮಾನದ ಸಂಭ್ರಮಕ್ಕೆ ಸಜ್ಜಾದ ಪುತ್ತೂರು ಎಲ್.ವಿ.ಪಿ. ಶಾಲೆ; ನ. 20 ಮತ್ತು 21ರಂದು ಶತಮಾನೋತ್ಸವ ಆಚರಣೆ

ಉಡುಪಿ, ನ.19: ಉಡುಪಿಯ ಪುತ್ತೂರಿನ ಎಲ್.ವಿ.ಪಿ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು...

ಪೇಶ್ ಇಮಾಮ್ ಹಾಗೂ ಮುಅಝಿನ್‌ರವರ ಬಾಕಿ ಗೌರವಧನ ಕೂಡಲೇ ಬಿಡುಗಡೆಗೊಳಿಸಿ: ಅಸ್ಗರ್ ಮುಡಿಪು ಆಗ್ರಹ

ಮಂಗಳೂರು, ನ.19: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಮುಸ್ಲಿಂ...

ಕಾವೇರಿ 2.0: ಆಸ್ತಿ ನೋಂದಣಿಗೆ ಡಿಜಿಟಲ್ ಸ್ಪರ್ಶ

ಬೆಂಗಳೂರು, ನ.19: ಆಸ್ತಿ ನೋಂದಣಿಗಾಗಿ ಕಚೇರಿಗಳಿಗೆ ತೆರಳಿ ಭೌತಿಕ ದಾಖಲೆಗಳನ್ನು ಸಲ್ಲಿಸುವ...
error: Content is protected !!