Saturday, October 3, 2026
Saturday, October 3, 2026

ನಾಡೋಜ ಡಾ. ಜಿ ಶಂಕರ್ ರವರ 70ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಹಸಿರು ಅಭಿಯಾನ

ನಾಡೋಜ ಡಾ. ಜಿ ಶಂಕರ್ ರವರ 70ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಹಸಿರು ಅಭಿಯಾನ

Date:

ಕೋಟ, ಅ.5: ಮನೆಗೊಂದು ಮರ ಊರಿಗೊಂದು ವನ ಎಂಬ ನಾಣ್ಣುಡಿಯಂತೆ ಭಾನುವಾರ ಮೊಗವೀರ ಸಂಘದ ಮಾರ್ಗದರ್ಶಕರಾದ ನಾಡೋಜ ಡಾ. ಜಿ ಶಂಕರ್ ರವರ 70ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಮೊಗವೀರ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ವತಿಯಿಂದ ವಿನೂತನವಾಗಿ ಮನೆಮನೆಗೂ ಹಸಿರು ಕಾರ್ಯಕ್ರಮದಡಿ ಮನೆಗೊಂದು ಸಸಿ ವಿತರಣಾ ಕಾರ್ಯಕ್ರಮ ನಡೆಯಿತು. ಸಂಘಟನೆಯ ಕಾರ್ಯಕರ್ತರಾದ ಜಗದೀಶ್ ಮೇಸ್ತ್ರಿ ಅವರ ಮನೆಯಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡಲಾಯಿತು. ವಿವಿಧೆಡೆ ಮನೆಮನೆಗೆ ಭೇಟಿ ನೀಡಿ 70ರ ಹುಟ್ಟುಹಬ್ಬದ ನೆನಪಿಗಾಗಿ 70 ಮನೆಗಳಲ್ಲಿ ಗಿಡ ನೆಡಲಾಯಿತು. ಸ್ಥಳೀಯವಾಗಿ ಅಶಕ್ತರ ಮನೆಗಳಿಗೆ ತೆರಳಿ ಅನಾರೋಗ್ಯಕ್ಕೆ ತುತ್ತಾದವರಿಗೆ ಸಾಂತ್ವನ ಹೇಳಿ ಅವರಿಗೆ ಧೈರ್ಯ ತುಂಬಲಾಯಿತು.

ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷರಾದ ರಾಘವೇಂದ್ರ ಹರಪ್ಪನಕೆರೆ ಅಧ್ಯಕ್ಷೆತೆಯಲ್ಲಿ ಕಾರ್ಯಕ್ರಮ ನಡೆಯಿತು. ಸಂಘದ ಕೋಟೇಶ್ವರ ಘಟಕದ ಸ್ಥಾಪಕ ಅಧ್ಯಕ್ಷ ಸತೀಶ್ ಎಂ ನಾಯಕ್, ಗೌರವ ಸಲಹೆಗಾರರಾದ ಜಗದೀಶ ಮೊಗವೀರ ಮಾರ್ಕೊಡು, ಗೌರವಾಧ್ಯಕ್ಷ ಆನಂದ್ ಕುಂದರ್, ಮಾಜಿ ಅಧ್ಯಕ್ಷ ಸುರೇಶ್ ಚಾತ್ರಬೆಟ್ಟು, ಮಾಜಿ ಗೌರವ ಅಧ್ಯಕ್ಷ ಸುರೇಶ್ ಮೊಗವೀರ ಶಾನಾಡಿ ಮತ್ತು ಮಹಿಳಾ ಅಧ್ಯಕ್ಷ ಗಾಯತ್ರಿ ವಿಕ್ರಂ ತೆಕ್ಕಟ್ಟೆ, ಮಹಿಳಾ ಕಾರ್ಯದರ್ಶಿಯಾದ ರಾಜೇಶ್ವರಿ ಮಾರ್ಕೋಡು, ಮಾಜಿ ಮಹಿಳಾ ಅಧ್ಯಕ್ಷ ಉಷಾ ಮಾರ್ಕೊಡು ಹಾಗೂ ಶಾರದಾ ಮೂಡುಗೋಪಾಡಿ ಮತ್ತು ಸಂಘದ ಪದಾಧಿಕಾರಿಗಳು ಹಾಗೂ ಊರ ಗುರಿಕಾರರು ಉಪಸ್ಥಿತರಿದ್ದರು. ಕಾರ್ಯದರ್ಶಿ ನಾಗರಾಜ್ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತೆಂಕನಿಡಿಯೂರು ಕಾಲೇಜು: ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ

ತೆಂಕನಿಡಿಯೂರು, ಅ.3: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ...

ವಿಧಿಕ್ತ–2026 ಉದ್ಘಾಟನೆ

ಕುಂದಾಪುರ, ಅ.3: ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ವಾಣಿಜ್ಯ ವಿಭಾಗದ...

ಕ್ರಿಯೇಟಿವ್ ಕಾಲೇಜು: ಗಾಂಧಿ ಜಯಂತಿ ಸಂಭ್ರಮ

ಕಾರ್ಕಳ, ಅ.3: ಕ್ರಿಯೇಟಿವ್ ಪದವಿ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಜಯಂತಿ ಹಾಗೂ...
error: Content is protected !!