Friday, October 2, 2026
Friday, October 2, 2026

ನಿವೃತ್ತ ಶಿಕ್ಷಕರನ್ನು ಗುರುತಿಸುವ ಕಾಯಕ ಶ್ರೇಷ್ಠ: ಕೆ.ಜಗದೀಶ ನಾವಡ

ನಿವೃತ್ತ ಶಿಕ್ಷಕರನ್ನು ಗುರುತಿಸುವ ಕಾಯಕ ಶ್ರೇಷ್ಠ: ಕೆ.ಜಗದೀಶ ನಾವಡ

Date:

ಕೋಟ, ಸೆ.26: ನಿವೃತ್ತ ಶಿಕ್ಷಕರ ಬದುಕು ಹಾಗೂ ಅವರ ಶೈಕ್ಷಣಿಕ ಜೀವನ ತಳಹದಿ ಶ್ರೇಷ್ಠವಾದದ್ದು. ಅವರ ನಿವೃತ್ತಿಯ ನಂತರ ದಿನಗಳಲ್ಲಿ ಗುರುತಿಸುವ ಕಾಯಕ ಶೈಕ್ಷಣಿಕ ಬದುಕಿನ ಸಾರ್ಥಕತೆಯ ಕ್ಷಣಕ್ಕೆ ಸಾಕ್ಷಿಯಾಗಿದೆ ಎಂದು ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ.ಜಗದೀಶ್ ನಾವಡ ಹೇಳಿದರು. ಡಾ. ಕೋಟ ಶಿವರಾಮ ಕಾರಂತ ಮಕ್ಕಳ ವೇದಿಕೆ ಸಾಲಿಗ್ರಾಮ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಗೀತಾನಂದ ಫೌಂಡೇಶನ್ ಕೋಟ-ಮಣೂರು, ಕೋಟ ವಿದ್ಯಾ ಸಂಘ ಕೋಟ ಸಹಯೋಗದಲ್ಲಿ ನಿವೃತ್ತ ಶಿಕ್ಷಕರ ಸಾಹಿತ್ಯಕ ಸಮಾವೇಶ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿವೃತ್ತರಾದ ಮಂಜುನಾಥ್ ಉಪಾಧ್ಯಾಯ, ಜಗದೀಶ್ ಹೊಳ್ಳ, ರಮೇಶ್ ನಕ್ಷತ್ರಿ, ಪ್ರಭಾಕರ ಕಾಮತ್ ಇವರುಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಹಿರಿಯ ಶಿಕ್ಷಕರಾದ ರಾಮಕೃಷ್ಣ ಉಪಾಧ್ಯಾಯ, ಆನಂದರಾಮ ವಾಕುಡ, ರಾಮದೇವ ಹಂದೆ, ಮಹಾಬಲೇಶ್ವರ ಉರಾಳ, ರಂಗಯ್ಯ ಅಡಿಗ, ರಂಗಪ್ಪಯ್ಯ ಹೊಳ್ಳ, ಸೂರ್ಯನಾರಾಯಣ ಹೇರ್ಳೆ, ರಾಘವೇಂದ್ರ ಭಟ್ ಇವರುಗಳನ್ನು ಗುರುತಿಸಿ ಗೌರವಿಸಲಾಯಿತು.

ಕುಂದಾಪುರ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಿ.ನಾಗೇಶ್ ಆರೋಗ್ಯದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಇದೇ ವೇಳೆ ಡಾ.ನಾಗೇಶ್‌ರವರನ್ನು ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಡಾ. ಕೋಟ ಶಿವರಾಮ ಕಾರಂತ ಮಕ್ಕಳ ವೇದಿಕೆಯ ಅಧ್ಯಕ್ಷ ಸಿ ಉಪೇಂದ್ರ ಸೋಮಯಾಜಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಪಿ ನರಸಿಂಹ ಐತಾಳ್ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸ್ವಾಗತಿಸಿ, ನಿವೃತ್ತ ಶಿಕ್ಷಕ ಶ್ರೀಪತಿ ಹೇರ್ಳೇ ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕ ನಾಗೇಶ್ ಮಯ್ಯ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಏಷ್ಯನ್ ಗೇಮ್ಸ್: ಭಾರತದ ಪದಕ ಪಟ್ಟಿಗೆ 6 ಪದಕಗಳ ಸೇರ್ಪಡೆ

ಯು.ಬಿ.ಎನ್.ಡಿ., ಅ.1: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಇಂದು ಮತ್ತೊಂದು...

ವಿವಿಧ ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನ

ಉಡುಪಿ, ಅ.1: ಸಿಬ್ಬಂದಿ ನೇಮಕಾತಿ ಆಯೋಗವು ಭಾರತ ಸರ್ಕಾರದ ವಿವಿಧ ಸಚಿವಾಲಯ,...
error: Content is protected !!