ಕೋಟ, ಸೆ.26: ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಹಂದಟ್ಟು ಮಹಿಳಾ ಬಳಗ ಕೋಟ, ಮಣೂರು ಫ್ರೆಂಡ್ಸ್, ಜೆಸಿಐ ಕೋಟ ಸಿನಿಯರ್ ಲಿಜನ್ ವತಿಯಿಂದ ೨೭೨ನೇ ಭಾನುವಾರದ ಪರಿಸರ ಸ್ನೇಹಿ ಅಭಿಯಾನದ ಪ್ರಯುಕ್ತ ಮಣೂರು ಮಳಲು ತಾಯಿ ದುರ್ಗಾಪರಮೇಶ್ವರಿ ದೇಗುಲವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಭಾನುವಾರ ಜರಗಿತು. ದೇಗುಲದ ಅರ್ಚಕ ಯೊಗೀಶ್ ಭಟ್ ಅಭಿಯಾನಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿ ಸಂಘದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಇವರನ್ನು ಶಾಲು ಹೊದಿಸಿ ಗೌರವಿಸಿದರು. ದೇಗುಲದ ಸಿಬ್ಬಂದಿ ಶರಾವತಿ, ಸಂಘದ ಉಪಾಧ್ಯಕ್ಷರಾದ ಸಂತೋಷ್ ಪೂಜಾರಿ, ದಿನೇಶ್ ಆಚಾರ್, ಜತೆ ಕಾರ್ಯದರ್ಶಿ ಕೃಷ್ಣ ಕಾಂಚನ್, ಮಾಜಿ ಅಧ್ಯಕ್ಷ ಗಿರೀಶ್ ಆಚಾರ್, ಜೆಸಿಐ ಕೋಟ ಲಿಜನ್ ಅಧ್ಯಕ್ಷ ಕೇಶವ ಆಚಾರ್, ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು ಮತ್ತಿತರರು ಇದ್ದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.
ಮಣೂರು ಮಳಲು ತಾಯಿ ದುರ್ಗಾಪರಮೇಶ್ವರಿ ದೇಗುಲ ಸ್ವಚ್ಛತಾ ಕಾರ್ಯ
ಮಣೂರು ಮಳಲು ತಾಯಿ ದುರ್ಗಾಪರಮೇಶ್ವರಿ ದೇಗುಲ ಸ್ವಚ್ಛತಾ ಕಾರ್ಯ
Date:




By
ForthFocus™