Thursday, July 30, 2026
Thursday, July 30, 2026

ಮಜೂರು ಗ್ರಾಮ ಸಭೆ

ಮಜೂರು ಗ್ರಾಮ ಸಭೆ

Date:

ಮಜೂರು, ಸೆ.12: ಮಜೂರು ಗ್ರಾಮ ಪಂಚಾಯತ್‌ ನ 2025-26 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಶುಕ್ರವಾರ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಪ್ರಸಾದ್‌ ಶೆಟ್ಟಿ ವಳದೂರು ಅಧ್ಯಕ್ಷತೆಯಲ್ಲಿ ಮಜೂರು ಗ್ರಾಮ ಪಂಚಾಯತ್‌ ಸಭಾಭವನದಲ್ಲಿ ನಡೆಯಿತು. ಮಾರ್ಗದರ್ಶಿ ಅಧಿಕಾರಿ ಸುಗುಣ ಸಹಾಯಕ ಲೆಕ್ಕಾಧಿಕಾರಿ ತಾ.ಪಂ ಕಾಪು ಇವರು ಗ್ರಾಮ ಸಭೆಯ ಮಹತ್ವದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಪೋಲಿಸ್‌ ಇಲಾಖೆ, ಮಹಾತ್ಮಾ ಗಾಂಧಿ ನರೇಗಾ ಯೋಜನೆ , ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ತಮ್ಮ ಇಲಾಖೆಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಸಾರ್ವಜನಿಕರಿಂದ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಬಗ್ಗೆ, ನವಿಲು ಮಂಗಗಳ ಹಾವಳಿ ಬಗ್ಗೆ, 92 ಹೇರೂರು ಗ್ರಾಮದ ಪ್ಲಾಟಿಂಗ್‌ ಸಮಸ್ಯೆ ಬಗ್ಗೆ, ಪಾದೂರು ಗ್ರಾಮದಲ್ಲಿ ಜಲ್ಲಿ ಕ್ರಷರ್‌ ನಡೆಸದಂತೆ ವಿರೋಧ ವ್ಯಕ್ತಪಡಿಸಿದರು.

ಗ್ರಾಮ ಸಭೆಯಲ್ಲಿ ನೋಡೆಲ್‌ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಡಾ ಅರುಣ್‌ ಹೆಗ್ಡೆ ಪಶು ವೈದ್ಯಾಧಿಕಾರಿ ಇವರು ವರ್ಗಾವಣೆಗೊಂಡಿರುವ ಬಗ್ಗೆ ಮತ್ತು ಪಾದೂರು ಗ್ರಾಮದಲ್ಲಿ ಗ್ರಾಮ ಸಹಾಯಕರಾಗಿ 46 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಲಕ್ಷಣ್‌ ಶೆಟ್ಟಿಗಾರ್‌, ಕರಂದಾಡಿ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ 25 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕುಸುಮ, ಚಂದ್ರನಗರ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ 27 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಪುಷ್ಪ , ಮಜೂರು ಗ್ರಾಮ ಪಂಚಾಯತದ ಅಧಿಕೃತ ವೆಬ್‌ ಸೈಟ್‌ ಉಚಿತವಾಗಿ ಮಾಡಿಕೊಟ್ಟಿರುವ ಅರುಣ್‌ ಶೆಟ್ಟಿ ಅಂಡೆಮಾರುಗುತ್ತು ಪಾದೂರು ಇವರುಗಳನ್ನು ಗ್ರಾಮ ಪಂಚಾಯತ್‌ ನಿಂದ ಸನ್ಮಾನಿಸಲಾಯಿತು.

ಭಾವಾನಾತ್ಮಕ ಬೀಳ್ಕೋಡುಗೆ: ನೂರಾರು ವರ್ಷಗಳಿಂದ ತನ್ನ ಪೂರ್ವಜರೊಂದಿಗೆ ಹುಟ್ಟಿ ಬೆಳೆದು ಜೀವನ ಸಾಗಿಸುತ್ತಿದ್ದ ಅನಿವಾರ್ಯ ಸಂದರ್ಭದಲ್ಲಿ ISPRL 2 ನೇ ಹಂತದಲ್ಲಿ ಪಾದೂರು ಗ್ರಾಮದ ಸುಮಾರು 50 ಕುಟುಂಬ ನಿರ್ವಸಿತರಾಗಿ ಬೇರೆ ಕಡೆ ಹೋಗಬೇಕಾದ ನಿರ್ವಸಿತ ಕುಟುಂಬದವರಿಗೆ ಭಾವಾನಾತ್ಮಕ ಬೀಳ್ಕೊಡುಗೆ ನಡೆಸಲಾಯಿತು.

ಗ್ರಾಮಸ್ಥರಿಂದ ಸನ್ಮಾನ: ಕಳೆದ 5 ವರ್ಷಗಳಿಂದ ಪಾರದರ್ಶಕ ಆಡಳಿತ, ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿದ ನಿಕಟಪೂರ್ವ ಅಧ್ಯಕ್ಷರಾದ ಶರ್ಮಿಳಾ ಆಚಾರ್ಯ, ನಿಕಟಪೂರ್ವ ಉಪಾಧ್ಯಕ್ಷರಾದ ಮಧುಸೂಧನ್‌ ಸಾಲ್ಯಾನ್, ಪಂಚಾಯತ್‌ ನ ಅಧ್ಯಕ್ಷರಾದ ಪ್ರಸಾದ್‌ ಶೆಟ್ಟಿ ವಳದೂರು, ಹಾಗೂ ಉಪಾಧ್ಯಕ್ಷರಾದ ಮಂಜುಳಾ ಆಚಾರ್ಯ ಇವರಿಗೆ ಎಲ್ಲಾ ಗ್ರಾಮ ಪಂಚಾಯತ್‌ ಸದಸ್ಯರು ಹಾಗೂ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗ ದ ಪರವಾಗಿ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ISO (International Organisation for Standardisation) ಮಜೂರು ಗ್ರಾಮ ಪಂಚಾಯತ್‌ ಆಯ್ಕೆಯಾಗಿರುವ ಬಗ್ಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತ್‌ ಉಪಾಧ್ಯಕ್ಷರಾದ ಮಂಜುಳಾ ಆಚಾರ್ಯ, ಗ್ರಾಮ ಪಂಚಾಯತ್‌ ಸದಸ್ಯರು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ವಿಲಾಸಿನಿ, ವಿವಿಧ ಇಲಾಖಾಧಿಕಾರಿಗಳಾದ ಬಸವರಾಜ ಹೆಚ್‌ ಎಲ್‌., ಸಮಾಜ ಕಲ್ಯಾಣ ಇಲಾಖೆ, ಚಂದ್ರಕಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಥಮಿಕ. ಆರೋಗ್ಯ ಕೇಂದ್ರ, ಮಲ್ಲಿಕಾರ್ಜುನ ಉಪವಲಯ ಅರಣ್ಯಾಧಿಕಾರಿ, ಪೂರ್ಣಿಮ ಅಂಗನವಾಡಿ ಮೇಲ್ವಿಚಾರಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಬಿತಾ ಸಿ.ಆರ್.‌ಪಿ, ಶಿಕ್ಷಣ ಇಲಾಖೆ, ಗಂಗಾಧರ್‌ , ಮಂಜುನಾಥ ಅಡಿಗ ಶಿರ್ವ ಆರಕ್ಷಕ ಠಾಣೆ, ಶ್ರೀಕಾಂತ್ ಗ್ರಾಮ ಆಡಳಿತ ಅಧಿಕಾರಿ, ಕ್ಲಾರೆನ್ಸ್‌ ಲೆಸ್ಟರ್ನ್‌ ಕರ್ನೇಲಿಯೋ ಗ್ರಾಮ ಆಡಳಿತ ಅಧಿಕಾರಿ, ಅಕ್ಷಯ್‌ ಕೃಷ್ಣ ನರೇಗಾ IEC ಕೋರ್ಡಿನೇಟರ್‌, ಶಂಕರ್‌ ಗ್ರಾಮ ತಾಂತ್ರಿಕ ಸಹಾಯಕರು , ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ, ಸಮುದಾಯ ಆರೋಗ್ಯ ಅಧಿಕಾರಿ , ಸಂಜೀವಿನಿ ಸಂಘದ ಸದಸ್ಯರು, ಪಂಚಾಯತ್‌ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಪ್ರಸಾದ್‌ ಭಂಡಾರಿ ಕಾರ್ಯಕ್ರಮ ಸ್ವಾಗತಿಸಿ ವಂದಿಸಿದರು. ಆಶಾ ರವೀಂದ್ರ ಆಚಾರ್ಯ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ನವದೆಹಲಿ, ಜು.29: ಲೋಕಸಭೆ ಬುಧವಾರ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ)...

ಶಾಸಕ ಯಶ್ಪಾಲ್ ಸುವರ್ಣ ಅವರಿಗೆ ನೋಟೀಸ್

ಉಡುಪಿ, ಜು.29: ರಾಹುಲ್ ಗಾಂಧಿ ವಿರುದ್ಧ ಶಾಸಕ ಯಶ್ಪಾಲ್ ಸುವರ್ಣ ಅವರು...

ಹಡಪದ ಅಪ್ಪಣ್ಣ ರವರ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪ: ಮಂಜುನಾಥ ಪೂಜಾರಿ

ಉಡುಪಿ, ಜು.29: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ...

ಚಾತುರ್ಮಾಸ ಸಾಧನೆಗೆ ಶ್ರೇಷ್ಠ ಕಾಲ: ಭಂಡಾರಕೇರಿ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು

ಬಾರಕೂರು, ಜು.೨೯: ಶ್ರಾವಣದಿಂದ ಕಾರ್ತಿಕ ಮಾಸದವರೆಗಿನ ನಾಲ್ಕು ತಿಂಗಳ ಕಾಲ ಭಗವಂತ...
error: Content is protected !!