ಕುಂದಾಪುರ, ಆ.19: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಜೀವ ಗಾಣಿಗ ಅವರು ಶಾಲೆಗೆ ಒಂದು ಪ್ರೊಜೆಕ್ಟರ್ ಮತ್ತು ಕಂಪ್ಯೂಟರ್ ನ್ನು ಕೊಡುಗೆಯಾಗಿ ನೀಡಿದರು. ಗಾಣಿಗ ಸಮಾಜ ಪ್ರಮುಖರಾದ ಸೀತಾರಾಮ ಗಾಣಿಗ, ಪ್ರಮೋದ್ ಗಾಣಿಗ, ಸದಾಶಿವ ಗಾಣಿಗ ಅವರು ಕೊಡುಗೆಯನ್ನು ಹಸ್ತಾಂತರಿಸಿದರು.
ಜಿಎಸ್‌ವಿಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶಿನಾಥ್ ಪೈ, ಸಂಚಾಲಕ ಸದಾಶಿವ ನಾಯಕ್, ಶಾಲಾ ಮುಖ್ಯೋಪಾಧ್ಯಯ ದೀಕ್ಷಿತ್ ಮೇಸ್ತ, ನಿಯೋಜಿತ ಮುಖ್ಯ ಶಿಕ್ಷಕಿ ಫಾತಿಮಾ ಬರೆಟ್ಟೊ ಮೊದಲಾದವರು ಉಪಸ್ಥಿತರಿದ್ದರು.




By
ForthFocus™