ಉಡುಪಿ, ಜೂ.30: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಬೆಳ್ಮಣ್ಣು ಹೊಸಮಾರು ಅಂಗನವಾಡಿ ಕೇಂದ್ರಕ್ಕೆ ಮೇಜು ಕೊಡುಗೆಯಾಗಿ ನೀಡಲಾಯಿತು. ಕೊಡುಗೆಯನ್ನು ಅಂಗನವಾಡಿ ಕೇಂದ್ರದ ಶಿಕ್ಷಕಿ ಶ್ಯಾಮಲ ತಂತ್ರಿ ಅವರ ಮೂಲಕ ಶಾಲೆಗೆ ಹಸ್ತಾಂತರಿಸಲಾಯಿತು. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ದಿನೇಶ್ ಪೂಜಾರಿ ಬೀರೊಟ್ಟು, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಜೊತೆ ಕಾರ್ಯದರ್ಶಿ ಅನ್ನಪೂರ್ಣ ಕಾಮತ್, ಸದಸ್ಯರಾದ ಮಂಜುನಾಥ ಆಚಾರ್ಯ, ಸುಲೋಚನಾ ಕೋಟ್ಯಾನ್, ವೀಣಾ ಆಚಾರ್ಯ, ಯೋಗೀಶ್ ಆಚಾರ್ಯ, ಅಂಗನವಾಡಿ ಸಹಾಯಕಿ ರೇಣುಕಾ ಮೂಲ್ಯ ಮೊದಲಾದವರಿದ್ದರು.
ಹೊಸಮಾರು ಅಂಗನವಾಡಿ ಕೇಂದ್ರಕ್ಕೆ ಅಬ್ಬನಡ್ಕ ಫ್ರೆಂಡ್ಸ್ ವತಿಯಿಂದ ಕೊಡುಗೆ ಹಸ್ತಾಂತರ
ಹೊಸಮಾರು ಅಂಗನವಾಡಿ ಕೇಂದ್ರಕ್ಕೆ ಅಬ್ಬನಡ್ಕ ಫ್ರೆಂಡ್ಸ್ ವತಿಯಿಂದ ಕೊಡುಗೆ ಹಸ್ತಾಂತರ
Date:




By
ForthFocus™