Monday, October 26, 2026
Monday, October 26, 2026

ವಸತಿ ಶಾಲೆಗಳಲ್ಲಿ ವಿಶೇಷ ವರ್ಗದ ಮಕ್ಕಳಿಗೆ ನೇರ ಪ್ರವೇಶಾತಿ: ಅರ್ಜಿ ಆಹ್ವಾನ

ವಸತಿ ಶಾಲೆಗಳಲ್ಲಿ ವಿಶೇಷ ವರ್ಗದ ಮಕ್ಕಳಿಗೆ ನೇರ ಪ್ರವೇಶಾತಿ: ಅರ್ಜಿ ಆಹ್ವಾನ

Date:

ಉಡುಪಿ, ಜೂ.24: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ನಾರಾಯಣಗುರು ವಸತಿ ಶಾಲೆಗಳಲ್ಲಿ 6 ನೇ ತರಗತಿ ಪ್ರವೇಶಾತಿಗೆ ವಿಶೇಷ ವರ್ಗದ ಮಕ್ಕಳಿಗೆ ಪ್ರವೇಶ ಪರೀಕ್ಷೆ ಇಲ್ಲದೇ ನೇರ ಪ್ರವೇಶ ಪಡೆಯಲು ಇಲಾಖಾ ವೆಬ್‌ಸೈಟ್ https://cetonlin.karnataka.gov.in/kreis24d/Forms/onlineregister.aspx ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವಿಶೇಷ ವರ್ಗದ ಅಡಿಯಲ್ಲಿ ಬರುವ ಸಮುದಾಯಗಳು : ಸಫಾಯಿ ಕರ್ಮಚಾರಿಗಳ ಮಕ್ಕಳು, ಚಿಂದಿ ಆಯುವವರ ಮಕ್ಕಳು, ಸ್ಮಶಾನ ಕಾರ್ಮಿಕರ ಮಕ್ಕಳು, ಬಾಲ ಕಾರ್ಮಿಕ ಕೆಲಸದಿಂದ ರಕ್ಷಿಸಲ್ಪಟ್ಟ ಮಕ್ಕಳು, ಜೀತದಾಳುಗಳ ಮಕ್ಕಳು, ಮಾಜಿ ದೇವದಾಸಿಯರ ಮಕ್ಕಳು, ಶೇ. 25 ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿದ ಮಕ್ಕಳು, ಹೆಚ್.ಐ.ವಿ ಪೀಡಿತ ಪಾಲಕರ ಮಕ್ಕಳು, ಒಂಟಿ ತಾಯಂದಿರ ಮಕ್ಕಳು, ಅನಾಥ ಮಕ್ಕಳು, ಅಲೆಮಾರಿ ಸಮುದಾಯದ ಮಕ್ಕಳು, ಸಕಾರಿ ಯೋಜನೆಗಳಿಂದ ಸ್ಥಳಾಂತರಗೊಂಡವರ ಮಕ್ಕಳು, ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತಗೊಂಡ ಸೇನಾ ಸಿಬ್ಬಂದಿ ಮಕ್ಕಳು, ಗಿರಿಜನ ವಸತಿ ಶಾಲೆಗಳಲ್ಲಿ 5 ನೇ ತರಗತಿಯವರೆಗೆ ಓದಿದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಹಾಗೂ ಆಶ್ರಮ ಶಾಲೆ ವಿದ್ಯಾರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ವಿಶೇಷ ವರ್ಗದ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮನ್ವಯಾಧಿಕಾರಿಗಳು, ಕ್ರೆಸ್ ಉಡುಪಿ ಮೊ.ನಂ: 9482625925 ಹಾಗೂ ಹಿರೇಬೆಟ್ಟು ಮೊ.ದೇ.ವ.ಶಾ. ಪ್ರಾಂಶುಪಾಲರು ಮೊ.ನಂ: 7975115073 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

 

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಾಗತಿಕ ತೈಲ ಬೆಲೆ: ಗರಿಷ್ಠ ಏರಿಕೆ ನಂತರ ಸುಮಾರು 2% ರಷ್ಟು ಕುಸಿತ

ನವದೆಹಲಿ, ಅ.26: ಸುಮಾರು ಆರು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದ ನಂತರ...

ಬ್ರೆಜಿಲ್‌ನಲ್ಲಿ ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಬಂದ ಲುಲಾ; ಲ್ಯಾಟಿನ್ ಅಮೆರಿಕದಲ್ಲಿ ಟ್ರಂಪ್ ಪ್ರಭಾವಕ್ಕೆ ಹಿನ್ನಡೆ

ಯು.ಬಿ.ಎನ್.ಡಿ., ಅ.26: ಭಾನುವಾರ ನಡೆದ ಬ್ರೆಜಿಲ್‌ನ ನಿರ್ಣಾಯಕ ಮತದಾನದಲ್ಲಿ ಸೆನೆಟರ್ ಫ್ಲಾವಿಯೊ...

ಆತ್ಮವಿಶ್ವಾಸದಿಂದ ಇಂಗ್ಲೀಷ್ ಸಂವಹನ

ಬಸ್ರೂರು, ಅ.26: ಬಸ್ರೂರು ಶ್ರೀ ಶಾರದಾ ಕಾಲೇಜಿನ ಇಂಗ್ಲೀಷ್ ವಿಭಾಗದ ವತಿಯಿಂದ...

ಏಷ್ಯನ್ ಪ್ಯಾರಾ ಕ್ರೀಡಾಕೂಟ: 114 ಪದಕಗಳೊಂದಿಗೆ ಭಾರತದ ಭರ್ಜರಿ ಪ್ರದರ್ಶನ

ಜಪಾನ್‌ನ ನಗೋಯಾದಲ್ಲಿರುವ ಮಿಜುಹೋ ಪಾರ್ಕ್ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಡೆದ 2026 ಏಷ್ಯನ್...
error: Content is protected !!