Saturday, October 17, 2026
Saturday, October 17, 2026

ಪುತ್ತೂರು ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ: ಯೋಗ ದಿನಾಚರಣೆ

ಪುತ್ತೂರು ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ: ಯೋಗ ದಿನಾಚರಣೆ

Date:

ಉಡುಪಿ, ಜೂ.23: ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಪುತ್ತೂರು ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. “ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಘೋಷ ವಾಕ್ಯಕ್ಕೆ ಅನುಗುಣವಾಗಿ ಯೋಗ ಗುರುಗಳಾದ ಪಿ.ವಿ.ಭಟ್ ಇವರ ಮಾರ್ಗದರ್ಶನದಲ್ಲಿ ಯೋಗ ಶಿಷ್ಟಾಚಾರದಂತೆ ಯೋಗಾಸನ ಮತ್ತು ಪ್ರಾಣಾಯಾಮ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಗುರುಗಳಾದ ಪಿ.ವಿ. ಭಟ್ ಮತ್ತು ಸತೀಶ್ ಕುಂದರ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಪಿ.ವಿ. ಭಟ್ ಅವರು ಮಾತನಾಡುತ್ತಾ, ಯೋಗದ ಮಹತ್ವದ ಬಗ್ಗೆ ಹಾಗೂ ಅದನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಆಗುವ ಪ್ರಯೋಜನಗಳ ಬಗ್ಗೆ ತಿಳಿ ಹೇಳಿದರು. ಗುರುಗಳಾದ ಸತೀಶ್ ಕುಂದರ್ ಅವರು ಮಾತನಾಡಿ, ಯೋಗ ಅಭ್ಯಾಸದಲ್ಲಿ ನಿರಂತರತೆ ಇರಬೇಕು ಮತ್ತು ಆದಷ್ಟು ಬೆಳಗಿನ ಸಮಯದಲ್ಲಿ ಕನಿಷ್ಠ ಒಂದು ಗಂಟೆಯಾದರೂ ಯೋಗಭ್ಯಾಸ ಮಾಡುವಂತೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಯೋಗ ಬಂಧುಗಳಾದ ಚಂದ್ರಪ್ರತಿಮಾ ಮತ್ತು ಸುನಿತಾ ಶೆಟ್ಟಿ ಅವರು ನಿರಂತರ ಯೋಗಭ್ಯಾಸದಿಂದ ತಮಗಾದ ಪ್ರಯೋಜನಗಳ ಬಗ್ಗೆ, ತಮ್ಮಲ್ಲಾದ ಸಕಾರಾತ್ಮಕ ಬದಲಾವಣೆಗಳ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಪ್ರಾರಂಭದಲ್ಲಿ ಯೋಗ ಶಿಕ್ಷಕಿ ಸುನೀತಾ ಚೈತನ್ಯ ಸ್ವಾಗತಿಸಿದರು. ಅನುಪಮಾ, ರೂಪ, ಮಾಲತಿ ಶೆಟ್ಟಿ, ಭಾರತಿ, ಸುಮಿತ್ರ, ಶಾಂತ, ಮಾಲತಿ ಭರತ್ ರಾಜ್, ವೇದ ಶೆಟ್ಟಿ, ಶುಭಾ ಶೆಟ್ಟಿ, ರಾಜೇಶ್ವರಿ, ಮಮತಾ, ಗಾಯತ್ರಿ ಭಟ್, ಶ್ರೀಲಕ್ಷ್ಮಿ, ಜಯಂತಿ ಉಡುಪ, ಸಂಧ್ಯಾ ಶೇಟ್ ಸಹಕರಿಸಿದರು. ಲಕ್ಷ್ಮೀ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಅಂಜಲಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಚ್‌ಐವಿ /ಏಡ್ಸ್ ಅರಿವು ಮೂಡಿಸಲು ಜಿಲ್ಲಾಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್

ಉಡುಪಿ, ಅ.17: ಹೆಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ...

ಪೊಲೀಸರಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

ಉಡುಪಿ, ಅ.17: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್...

ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.17: ಸರಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ...
error: Content is protected !!