Friday, October 2, 2026
Friday, October 2, 2026

ಮಣೂರು ದೇಗುಲದ ರಥೋತ್ಸವ ಸಂಪನ್ನ

ಮಣೂರು ದೇಗುಲದ ರಥೋತ್ಸವ ಸಂಪನ್ನ

Date:

ಕೋಟ, ಏ.13: ಮಣೂರು ರಾಷ್ಟ್ರೀಯ ಹೆದ್ದಾರಿಯ ಸನಿಹದಲ್ಲಿರುವ ಮಣೂರು ಶ್ರೀ ಮಹಾಲಿಂಗೇಶ್ವರ ಹೇರಂಭ ಮಹಾಗಣಪತಿ ದೇಗುಲದ ವಾರ್ಷಿಕ ರಥೋತ್ಸವ ಶನಿವಾರ ಸಂಪನ್ನಗೊಂಡಿತು. ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಸುಮಾರು ಒಂದೂವರೆ ಕಿ.ಮೀ ಸಂಚರಿಸಿದ ರಥೋತ್ಸವದಲ್ಲಿ ಕೀಲು ಕುದುರೆ, ವಿವಿಧ ರೀತಿಯ ಗೊಂಬೆಗಳು, ಸ್ತಬ್ಧ ಚಿತ್ರಗಳು, ಕೇರಳ ಚೆಂಡೆ, ವಾದ್ಯಘೋಷಗಳು, ತಟ್ಟಿರಾಯ ಹೀಗೆ ವಿವಿಧ ರೀತಿಯ ವಿಶೇಷತೆಗಳು ರಥೋತ್ಸವದಲ್ಲಿ ಕಂಡುಬಂತು.

ಟ್ರಸ್ಟಿಗಳಾದ ರವಿ ಐತಾಳ್, ಅಶೋಕ್ ಶೆಟ್ಟಿ, ದಿವ್ಯ ಪ್ರಭು, ಅಚ್ಯುತ್ ಹಂದೆ, ಕೃಷ್ಣ ದೇವಾಡಿಗ, ಸುಫಲ ಶೆಟ್ಟಿ, ದಿನೇಶ್ ಆಚಾರ್, ಚಂದ್ರ ಹರ್ತಟ್ಟು, ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಅರುಣಾಚಲ ಮಯ್ಯ, ವಿಷ್ಣುಮೂರ್ತಿ ಮಯ್ಯ, ಮಹೇಶ್ ಹೊಳ್ಳ, ಗೋಪಾಲ ಪೈ, ರಾಜೇಂದ್ರ ಉರಾಳ, ಸೇರಿದಂತೆ ಸಹಸ್ರಾರು ಮಂದಿ ರಥೋತ್ಸವದಲ್ಲಿ ಭಾಗಿಯಾದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಏಷ್ಯನ್ ಗೇಮ್ಸ್: ಭಾರತದ ಪದಕ ಪಟ್ಟಿಗೆ 6 ಪದಕಗಳ ಸೇರ್ಪಡೆ

ಯು.ಬಿ.ಎನ್.ಡಿ., ಅ.1: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಇಂದು ಮತ್ತೊಂದು...

ವಿವಿಧ ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನ

ಉಡುಪಿ, ಅ.1: ಸಿಬ್ಬಂದಿ ನೇಮಕಾತಿ ಆಯೋಗವು ಭಾರತ ಸರ್ಕಾರದ ವಿವಿಧ ಸಚಿವಾಲಯ,...
error: Content is protected !!