ಉಡುಪಿ, ಏ.12: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆದೇಶದಂತೆ ಹನುಮಜ್ಜಯಂತಿ ಪ್ರಯುಕ್ತ ರಂದು ಬೆಳಿಗ್ಗೆ 9 ರಿಂದ ಸಂಜೆ 4 ರ ತನಕ ವಿದುಷಿ ಉಷಾ ಹೆಬ್ಬಾರ್ ನೇತೃತ್ವದಲ್ಲಿ ನಡೆದ ಭಜನಾ ವೈಭವಕ್ಕೆ ಕರ್ನಾಟಕ ಭಜನಾ ಪರಿಷತ್ ನ ಉಪಾಧ್ಯಕ್ಷರಾದ ರಾಜೇಂದ್ರ ಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀ ಮಠದ ದಿವಾನ ನಾಗರಾಜ ಆಚಾರ್ಯ, ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀ ಮಠದ ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ್ ಭಟ್, ಹಾಗೂ ಕಾಸರಗೋಡು ಭಜನಾ ಮಂಡಳಿಯ ವೀಣಾ ಶಾನುಭೋಗ ಹಾಗೂ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಭಜನೋತ್ಸವದಲ್ಲಿ ಬೆಂಗಳೂರು, ಮಂಗಳೂರು ಜಿಲ್ಲಾ ವಲಯ, ಕಾಸರಗೋಡು ವಲಯ, ಉಡುಪಿ ಜಿಲ್ಲಾ ವಲಯದ ಅನೇಕ ಭಜನಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.
ಶ್ರೀ ಕೃಷ್ಣ ಮಠ: ಹನುಮಜ್ಜಯಂತಿ ಪ್ರಯುಕ್ತ ಭಜನಾ ವೈಭವ
ಶ್ರೀ ಕೃಷ್ಣ ಮಠ: ಹನುಮಜ್ಜಯಂತಿ ಪ್ರಯುಕ್ತ ಭಜನಾ ವೈಭವ
Date:




By
ForthFocus™