Wednesday, July 29, 2026
Wednesday, July 29, 2026

ಯೋಗಾಭ್ಯಾಸ ಕಡ್ಡಾಯವಾಗಿರಲಿ: ಡಾ. ಅಶ್ವಿನಿ

ಯೋಗಾಭ್ಯಾಸ ಕಡ್ಡಾಯವಾಗಿರಲಿ: ಡಾ. ಅಶ್ವಿನಿ

Date:

ಉಡುಪಿ, ಮಾ.11: ಮಹಿಳಾ ಪತಂಜಲಿ ಯೋಗ ಸಮಿತಿ ಉಡುಪಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಉಡುಪಿಯ ಮಥುರಾ ಕಂಫರ್ಟ್ಸ್ ನಲ್ಲಿ ನಡೆಯಿತು. ಪತಂಜಲಿ ಮಹಿಳಾ ಜಿಲ್ಲಾ ಪ್ರಭಾರಿ ಲೀಲಾ ಆರ್ ಅಮೀನ್ ಸ್ವಾಗತಿಸಿ, ಯೋಗ ಶಿಬಿರದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಅಡಿದರು. ಚೆನ್ನಮ್ಮ ಉಡುಪ ತಂಡ ಪ್ರಾರ್ಥಿಸಿದರು. ದೀಪ ಪ್ರಜ್ವಲನೆ ನೆರವೇರಿಸಿದ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಸೂತಿ ತಜ್ಞರಾದ ಡಾ. ಅಶ್ವಿನಿ ಎ ಪಿ ಮಾತನಾಡುತ್ತಾ, ಸುಮಾರು 35-40 ವರ್ಷ ದಾಟಿದ ಪ್ರತಿ ಮಹಿಳೆಯರು ದೈಹಿಕವಾಗಿ ವೈದ್ಯಕೀಯ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಬೇಕು ಹಾಗೂ ಯೋಗಾಭ್ಯಾಸದಲ್ಲಿ ನಿರತರಾಗಬೇಕೆಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಗರಸಭಾ ಉಪಾಧ್ಯಕ್ಷರಾದ ರಜನೀ ಹೆಬ್ಬಾರ್, ನಗರಸಭಾ ಸದಸ್ಯರಾದ ಅಮ್ರತಾ ಕೃಷ್ಣಮೂರ್ತಿ ಶುಭ ಹಾರೈಸಿದರು. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಮಹಿಳೆಯವರನ್ನು ಸನ್ಮಾನಿಸಲಾಯಿತು. ವಿವಿಧ ಕಕ್ಷೆಯ ಯೋಗಾರ್ತಿಗಳವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವೇದಾವತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಿವೃತ್ತ ಶಿಕ್ಷಕ ಮಲ್ಪೆ ರಾಘವೇಂದ್ರರಿಗೆ ಸೇವಾ ಪ್ರಶಸ್ತಿ

ಕಟಪಾಡಿ, ಜು.28: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ...

ಹೆಜಮಾಡಿ ಟೋಲ್ ಸಮಸ್ಯೆ: ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಶಾಸಕರ ಸಭೆ

ಹೆಜಮಾಡಿ, ಜು.28: ಹೆಜಮಾಡಿ ಟೋಲ್ ಸಮಸ್ಯೆಗೆ ಸಂಬಂಧಿಸಿದಂತೆ ಶಾಸಕರಾದ ಗುರ್ಮೆ ಸುರೇಶ್...

ಶ್ರೀ ಕಾಮೇಶ್ವರ ದೇವಸ್ಥಾನ ಬೈಕಾಡಿ: ಸಮಿತಿ ಸದಸ್ಯರಿಂದ ಧರ್ಮಸ್ಥಳ ಭೇಟಿ

ಬ್ರಹ್ಮಾವರ, ಜು.28: ಶ್ರೀ ಕಾಮೇಶ್ವರ ದೇವಸ್ಥಾನ ಬೈಕಾಡಿ ಇದರ ಅಭಿವೃದ್ಧಿ ಮತ್ತು...
error: Content is protected !!