Friday, September 25, 2026
Friday, September 25, 2026

ಶಾಸ್ತ್ರೀಯತೆಗೆ ಸಮಕಾಲೀನತೆಯ ಸ್ಪರ್ಶವಾದಾಗ ಕಲೆಗಳಲ್ಲಿ ಹೊಸಗಾಳಿ ಬೀಸಲು ಸಾಧ್ಯ: ಮಧು ನಟರಾಜ್

ಶಾಸ್ತ್ರೀಯತೆಗೆ ಸಮಕಾಲೀನತೆಯ ಸ್ಪರ್ಶವಾದಾಗ ಕಲೆಗಳಲ್ಲಿ ಹೊಸಗಾಳಿ ಬೀಸಲು ಸಾಧ್ಯ: ಮಧು ನಟರಾಜ್

Date:

ಮಣಿಪಾಲ, ಮಾ.4: ಶಾಸ್ತ್ರೀಯತೆಗೆ ಸಮಕಾಲೀನತೆಯ ಸ್ಪರ್ಶವಾದಾಗ ನೃತ್ಯವೂ ಸೇರಿದಂತೆ ಎಲ್ಲಾ ಕಲೆಗಳಲ್ಲಿ ಹೊಸಗಾಳಿ ಬೀಸಲು ಸಾಧ್ಯ ಎಂದು ಖ್ಯಾತ ನೃತ್ಯ ವಿನ್ಯಾಸ ಕಲಾವಿದೆ ಮಧು ನಟರಾಜ್ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್(ಜಿಸಿಪಿಎಎಸ್)ನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತ, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ವಿಜೇತೆ ಮಧು ನಟರಾಜ್ ಅವರು ಶಾಸ್ತ್ರೀಯ ನೃತ್ಯದ ಪಠ್ಯಗಳು ಮತ್ತು ತಂತ್ರಗಳು ಪುನರ್ವಾಖ್ಯಾನ ಹಾಗೂ ನವೀಕರಣಕ್ಕೆ ಒಳಗಾದಾಗ, ಅವು ಸಮಕಾಲೀನವೂ, ಜನರಿಗೆ ಹತ್ತಿರವೂ ಆಗುತ್ತವೆಂದು, ಶ್ರೀಮತಿ ಮಧು ನಟರಾಜ್ ಅಭಿಪ್ರಾಯಪಟ್ಟರು. ಶಾಸ್ತ್ರೀಯ ಕಥಕ್ ಹಾಗೂ ಸಮಕಾಲೀನ ಎರಡೂ ನೃತ್ಯಗಳಲ್ಲಿ ಪರಿಣಿತಿ ಹೊಂದಿರುವ ಇವರು ಬೆಂಗಳೂರಿನ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ನ ನಿರ್ದೇಶಕರೂ ಆಗಿದ್ದಾರೆ. ಹಲವು ವಿಡಿಯೋಗಳ ಮೂಲಕ, ತಮ್ಮ ವಿವಿಧ ಪ್ರಯೋಗಗಳನ್ನು ವಿವರಿಸಿದ ಮಧು ನಟರಾಜ್ ಇವರು, ಮುಖ್ಯವಾಗಿ ಪ್ರಕೃತಿ, ಸ್ತ್ರೀ, ಪರಿಸರ ಸಂಬಂಧಿ ವಿಷಯಗಳನ್ನು ನೃತ್ಯ ರೂಪದಲ್ಲಿ ಜನರಿಗೆ ತಲುಪಿಸುವ ಪ್ರಯತ್ನಗಳನ್ನು ಎತ್ತಿ ಹೇಳಿದರು. ಕಲಾವಿದೆಯರಾದ ರಮ್ಯಾ ನಾಗರಾಜ್ ಹಾಗೂ ಡಾ. ಭ್ರಮರಿ ಶಿವಪ್ರಕಾಶ್ ಇವರ ಪ್ರಾತ್ಯಕ್ಷಿಕೆಯ ಮೂಲಕ ಶಾಸ್ತ್ರೀಯ ನೃತ್ಯ ಪ್ರಕಾರಗಳ ಹೋಲಿಕೆ ಮತ್ತು ಭಿನ್ನತೆಗಳನ್ನು ಶ್ರೀಮತಿ ಮಧು ನಟರಾಜ್ ವಿವರಿಸಿದರು. ಜಿಸಿಪಿಎಎಸ್ ನ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಸಂವಾದವನ್ನು ನಡೆಸಿಕೊಟ್ಟರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೃತಕ ಬುದ್ಧಿಮತ್ತೆ (ಎಐ), ಬಾಹ್ಯಾಕಾಶ, ಇಂಧನ ಮತ್ತು ಸಂಸ್ಕೃತಿ ಕುರಿತು ಮಹತ್ವದ ಚರ್ಚೆ ನಡೆಸಿದ ಭಾರತ, ಯುಎಇ ಮತ್ತು ಫ್ರಾನ್ಸ್‌

ಯು.ಬಿ.ಎನ್.ಡಿ., ಸೆ.24: ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81ನೇ ಅಧಿವೇಶನದ...

ಕುಂದಾಪ್ರ ಕನ್ನಡ: ಭಾಷಾ ವಿಶೇಷತೆ- ವಿಶೇಷ ಉಪನ್ಯಾಸ

ಕುಂದಾಪುರ, ಸೆ.24: ಡಾ. ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ...

ಉಡುಪಿಯ ಹಲವೆಡೆ ದಿನವಿಡೀ ಉತ್ತಮ ಮಳೆ

ಉಡುಪಿ, ಸೆ.24: ಉಡುಪಿಯ ಹಲವೆಡೆ ಗುರುವಾರ ಉತ್ತಮ ಮಳೆಯಾಗಿದೆ. ಕಾರ್ಕಳ, ಮಣಿಪಾಲ,...
error: Content is protected !!