Thursday, August 20, 2026
Thursday, August 20, 2026

ಅನಧಿಕೃತ ಗಿಡ; ತೆಂಗು ಬೆಳೆಗಾರರಿಗೆ ಎಚ್ಚರಿಕೆ

ಅನಧಿಕೃತ ಗಿಡ; ತೆಂಗು ಬೆಳೆಗಾರರಿಗೆ ಎಚ್ಚರಿಕೆ

Date:

ಉಡುಪಿ, ಫೆ.17: ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕುಗಳಲ್ಲಿ ವಿವಿಧ ಜಾತಿಯ ತೆಂಗು ಸಸಿಗಳೆಂದು ಹೊರ ರಾಜ್ಯದ ನರ್ಸರಿಗಳವರು ಅನಧಿಕೃತವಾಗಿ ಗ್ಯಾರಂಟಿ ಇಲ್ಲದೆ ಗಿಡಗಳನ್ನು ತಂದು ರೋಡು ಬದಿಗಳಲ್ಲಿ, ಎರಡು ವರ್ಷಗಳಲ್ಲಿ ಪಸಲು ಬರುವುದಾಗಿ ನಂಬಿಸಿ ಅತಿ ಹೆಚ್ಚು ದರದಲ್ಲಿ ಪ್ರತಿ ತೆಂಗಿನ ಸಸಿಗಳಿಗೆ 1500 ರೂ. ವರೆಗೂ ಮಾರಾಟ ಮಾಡಿ ರೈತರಿಗೆ ಮೋಸ ಮಾಡುತ್ತಿರುವುದು ತೋಟಗಾರಿಕೆ ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಸಾರ್ವಜನಿಕರು, ಜಿಲ್ಲೆಯಲ್ಲಿರುವ ಅಧಿಕೃತ ನರ್ಸರಿಗಳು, ತೋಟಗಾರಿಕಾ ಇಲಾಖೆ ನರ್ಸರಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಧಿಕೃತವಾಗಿ ಉತ್ಪಾದನೆ ಮಾಡಿದಂತ ಕಸಿ/ ಸಸಿಗಳನ್ನು ಖರೀದಿಸುವಂತೆ ಹಾಗೂ ಸಂಬಂಧಪಟ್ಟವರಿಂದ ಬಿಲ್ಲನ್ನು ಶೀಘ್ರವಾಗಿ ಪಡೆದುಕೊಳ್ಳುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹಿರಿಯಡಕ: ದೇವರಾಜು ಅರಸು ಅವರ 111ನೇ ಜನ್ಮ ದಿನಾಚರಣೆ

ಹಿರಿಯಡಕ, ಆ.20: ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸಮಾನತೆಯ ಪ್ರಜಾಸತ್ತಾತ್ಮಕ ಹೊಣೆಗಾರಿಕೆಗಳನ್ನು...

ತೆಂಕನಿಡಿಯೂರು: ಮೂರು ದಿನಗಳ ಉದ್ಯಮಶೀಲತಾ ಅರಿವಿನ ಕಾರ್ಯಗಾರ ಉದ್ಘಾಟನೆ

ಉಡುಪಿ, ಆ 20: ಪ್ರಸ್ತುತ ಕೃತಕ ಬುದ್ಧಿಮತ್ತೆಯೊಂದಿಗಿನ ಸ್ಪರ್ಧಾತ್ಮಕ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು...

ಬಾಳೆಹಣ್ಣು ಹಣ್ಣಾಗಿಸಲು ಹಾನಿಕಾರಕ ರಾಸಾಯನಿಕ ಬಳಕೆ: ಬಾಳೆಹಣ್ಣಿನ ದಾಸ್ತಾನು ಕೇಂದ್ರಗಳ ಮೇಲೆ ಅಧಿಕಾರಿಗಳಿಂದ ದಾಳಿ

ಉಡುಪಿ, ಆ.20: ಹಾನಿಕಾರಕ ರಾಸಾಯನಿಕಗಳನ್ನು ಬಳಸಿದ ಆಹಾರ ಪದಾರ್ಥಗಳಿಂದ ಕ್ಯಾನ್ಸರ್ ಇತ್ಯಾದಿ...

ಆ. 21: ಜ್ಞಾನಸುಧಾ ಸಂಸ್ಥಾಪಕ ದಿ. ಗೋಪ ಶೆಟ್ಟಿಯವರ 105ನೇ ಹುಟ್ಟುಹಬ್ಬ: ರಕ್ತದಾನ ಶಿಬಿರ; ವಿಶೇಷ ಮಕ್ಕಳ ಶಾಲಾ ಅಧ್ಯಾಪಕರಿಗೆ ಸನ್ಮಾನ

ಕಾರ್ಕಳ, ಆ.20: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಜ್ಞಾನಸುಧಾ ಶಿಕ್ಷಣ...
error: Content is protected !!