Tuesday, July 28, 2026
Tuesday, July 28, 2026

ಕರ್ನಾಟಕ ಬ್ಯಾಂಕ್: 53ನೇ ವಾರ್ಷಿಕೋತ್ಸವ

ಕರ್ನಾಟಕ ಬ್ಯಾಂಕ್: 53ನೇ ವಾರ್ಷಿಕೋತ್ಸವ

Date:

ಸಾಲಿಗ್ರಾಮ, ಜ.20: ಕರ್ನಾಟಕ ಬ್ಯಾಂಕಿನ ಚಿತ್ರಪಾಡಿ ಸಾಲಿಗ್ರಾಮ ಶಾಖೆಯ ೫೩ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಬ್ಯಾಂಕ್‌ನಲ್ಲಿ ಜರುಗಿತು. ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಸಾಲಿಗ್ರಾಮ ದೇವಸ್ಥಾನದ ಅಧ್ಯಕ್ಷರಾದ ಡಾ. ಕೆ. ಎಸ್ ಕಾರಂತ ಬ್ಯಾಂಕಿನ ಪ್ರಗತಿಯನ್ನು ಶ್ಲಾಘಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಪ್ರಾದೇಶಿಕ ಕಛೇರಿಯ ಎ.ಜಿ.ಎಂ ವಾದಿರಾಜ್ ಕೆ ವಹಿಸಿದ್ದರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕತ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಇವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಕರ್ಣಾಟಕ ಬ್ಯಾಂಕ್‌ನ ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ ಉಪಾಧ್ಯ, ಅಘೋರೇಶ್ವರ ದೇಗುಲದ ಅಧ್ಯಕ್ಷ ಚಂದ್ರಶೇಖರ ಕಾರಂತ, ಸ್ಥಳೀಯರಾದ ಚಂದ್ರಶೇಖರ ಸೋಮಯಾಜಿ, ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಡಿಜಿಎಮ್ ಆನಂದರಾಮ ಅಡಿಗ, ಬೈಕಾಡಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು. ಬ್ಯಾಂಕಿನ ವ್ಯವಸ್ಥಾಪಕರಾದ ಅವಿನಾಶ್ ಸ್ವಾಗತಿಸಿ, ಸಿಬ್ಬಂದಿಗಳಾದ ರಶ್ಮಿ ವಂದಿಸಿದರು. ವಿನಯ ಕಾಂಚನ್ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನರೇಂದ್ರ ಎಸ್ ಗಂಗೊಳ್ಳಿಗೆ ಕಾವ್ಯಶ್ರೀ ಪ್ರಶಸ್ತಿ

ಗಂಗೊಳ್ಳಿ, ಜು.27: ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನಹಡಗಲಿ ವತಿಯಿಂದ ಕೊಡಲ್ಪಡುವ...

ಕಾಮನ್‌ವೆಲ್ತ್ ಕ್ರೀಡಾಕೂಟ: ಮುಂದುವರಿದ ಭಾರತದ ಪದಕ ಬೇಟೆ

ಯು.ಬಿ.ಎನ್.ಡಿ., ಜು.27: ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ವೇಟ್‌ಲಿಫ್ಟರ್ ಜ್ಞಾನೇಶ್ವರಿ...

ಸಂಸ್ಕೃತ ಪ್ರತಿಭಾ ಪುರಸ್ಕಾರ

ಉಡುಪಿ, ಜು.27: ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಶೀರೂರು...
error: Content is protected !!