Friday, September 25, 2026
Friday, September 25, 2026

11ನೇ ಶತಮಾನದ ಮಂದಿರ ಸ್ವಚ್ಛತೆ

11ನೇ ಶತಮಾನದ ಮಂದಿರ ಸ್ವಚ್ಛತೆ

Date:

ಉಡುಪಿ: ಬಾರಕೂರು ಇದು ಆಳುಪರ ಕಾಲದ ರಾಜಧಾನಿ. ಅನೇಕ ರಾಜ ಮನೆತನ ಆಳ್ವಿಕೆ ನಡೆಸಿದ ಪುಣ್ಯದ ಸ್ಥಳ. ಅನೇಕ ಬಸದಿ, ಸುಮಾರು ಮುನ್ನೂರಕ್ಕೂ ಅಧಿಕ ದೇವಾಲಯ ಇಲ್ಲಿಯ ವೈಭವವನ್ನು ಮತ್ತೆ ನೆನಪು ಮಾಡುವಂತಿದೆ.

ಕ್ರಿ.ಶ ೧೧ ನೇ ಶತಮಾನದ್ದೆಂದು ಹೇಳಲಾಗುತ್ತಿರುವ ಶ್ರೀ ಗೌರೀಶ್ವರ ದೇಗುಲ ಹಿಂದೆ ವೈಭವದಿಂದ ಮೆರೆದ ದೇಗುಲವಾಗಿದೆ. ಇಲ್ಲಿಯ ಮಿಥುನ ನಾಗ ಶಿಲ್ಪ, ಅವಳೀ ನಾಗ ಶಿಲ್ಪ, ಬಿಳಿಯ ಶಿಲೆಯಿಂದ ಶ್ರೀ ಗೌರೀಶ್ವರ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿದೆ.

ಶೈವ ಹಾಗೂ ವೈಷ್ಣವ ದೇವಾಲಯ ಇರುವ ಅಪರೂಪದ ಸಂಗಮ ಸ್ಥಳದಂತಿದೆ ಈ ದೇಗುಲ. ಶಾಸನ ಉಲ್ಲೇಖದಂತೆ ಬಾರಕನ್ಯಾಪುರವೆಂದು ಕರೆಯಲ್ಪಡುವ ಈ ಊರು ಪ್ರವಾಸಿಗರ ನೆಚ್ಚಿನ ಕೇಂದ್ರದ ಸ್ಥಳದಂತೆ ಕಾಣಲ್ಪಟ್ಟಿದೆ.

ಪ್ರವಾಸಿ ಸ್ಥಳದ ಪ್ರವಾಸಿಗರ ತನ್ನತ್ತ ಬರ ಸೆಳೆಯಲು ಯುವಾ ಬ್ರಿಗೇಡ್ ಕುಂದಾಪುರ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಇತಿಹಾಸ ಪ್ರಸಿದ್ಧ ಚೌಳಿ ಕೆರೆಯ ಸಮೀಪದ ಶ್ರೀ ಗೌರೀಶ್ವರ ದೇವಸ್ಥಾನ ಸ್ವಚ್ಛತಾ ಕಾರ್ಯ ಭಾನುವಾರ ನಡೆಯಿತು.

ಯುವಾ ಬ್ರಿಗೇಡ್ ನ ನಿರಂಜನ್ ಶೆಟ್ಟಿ ತಲ್ಲೂರು, ಪ್ರಮೋದ್, ಪ್ರದೀಪ, ಶಶಿ, ಸುಬ್ರಹ್ಮಣ್ಯ, ಇತಿಹಾಸ ಉಪನ್ಯಾಸಕರು ಆಗಿರುವ ಅರುಣ್ ಕುಮಾರ್, ಸತೀಶ್ ಗುಂಡ್ಮಿ, ಭರತ್ ಗುಡಿಗಾರ್, ಪ್ರಶಾಂತ್ ಖಾರ್ವಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೃತಕ ಬುದ್ಧಿಮತ್ತೆ (ಎಐ), ಬಾಹ್ಯಾಕಾಶ, ಇಂಧನ ಮತ್ತು ಸಂಸ್ಕೃತಿ ಕುರಿತು ಮಹತ್ವದ ಚರ್ಚೆ ನಡೆಸಿದ ಭಾರತ, ಯುಎಇ ಮತ್ತು ಫ್ರಾನ್ಸ್‌

ಯು.ಬಿ.ಎನ್.ಡಿ., ಸೆ.24: ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81ನೇ ಅಧಿವೇಶನದ...

ಕುಂದಾಪ್ರ ಕನ್ನಡ: ಭಾಷಾ ವಿಶೇಷತೆ- ವಿಶೇಷ ಉಪನ್ಯಾಸ

ಕುಂದಾಪುರ, ಸೆ.24: ಡಾ. ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ...

ಉಡುಪಿಯ ಹಲವೆಡೆ ದಿನವಿಡೀ ಉತ್ತಮ ಮಳೆ

ಉಡುಪಿ, ಸೆ.24: ಉಡುಪಿಯ ಹಲವೆಡೆ ಗುರುವಾರ ಉತ್ತಮ ಮಳೆಯಾಗಿದೆ. ಕಾರ್ಕಳ, ಮಣಿಪಾಲ,...
error: Content is protected !!