Sunday, January 19, 2025
Sunday, January 19, 2025

ಕೃಷಿ-ಋಷಿ ಪರಂಪರೆ ದೇಶದ ಎರಡು ಕಣ್ಣುಗಳಿದ್ದಂತೆ: ಕೆ.ವಿ. ರಮೇಶ್ ರಾವ್

ಕೃಷಿ-ಋಷಿ ಪರಂಪರೆ ದೇಶದ ಎರಡು ಕಣ್ಣುಗಳಿದ್ದಂತೆ: ಕೆ.ವಿ. ರಮೇಶ್ ರಾವ್

Date:

ಕೋಟ: ಈ ದೇಶದ ಪ್ರಮುಖ ಆಸ್ತಿ ಕೃಷಿ ಮತ್ತು ಋಷಿ ಪರಂಪರೆ. ಅದನ್ನು ಎಂದೂ ಮರೆಯಬಾರದು ಎಂದು ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಹೇಳಿದರು. ಬುಧವಾರ ಪಂಚವರ್ಣ ಯುವಕ ಮಂಡಲ ಕೋಟ ಇದರ ನೇತೃತ್ವದಲ್ಲಿ ರೈತಧ್ವನಿ ಸಂಘ ಕೋಟ, ಗಿಳಿಯಾರು ಯುವಕ ಮಂಡಲ, ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದಲ್ಲಿ 13 ನೇ ಆವೃತಿಯ ತಿಂಗಳ ಸರಣಿ ಕಾರ್ಯಕ್ರಮ ಸಾಧಕ ಕೃಷಿಕನ ಗೌರವಿಸುವ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿಕ ಕಾರ್ಯನಿರ್ವಹಿಸಿದರೆ ಮಾತ್ರ ನಮ್ಮ ಜೀವನ ನಡೆಯಲು ಸಾಧ್ಯವಿದೆ.

ಇಲ್ಲವಾದಲ್ಲಿ ಆಧುನಿಕ ಜಗತ್ತು ಪ್ಲಾಸ್ಟಿಕ್ ಅನ್ನ ಬಳಕೆ ಮಾಡುವ ಸ್ಥಿತಿ ಸೃಷ್ಠಿಯಾಗಬಹುದು. ಆದರೆ ಅಂತಹ ರೈತನ ಗೋಳು ಇಂದಿನ ಸರಕಾರ ಕೇಳದ ಸ್ಥಿತಿ ನಿರ್ಮಾಗೊಳಿಸಿದೆ. ಹೀಗಾದರೆ ಕೃಷಿ ಉಳಿಯಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು. ರೈತ ಸಮುದಾಯ ಯಾವುದೇ ಬೆಳೆ ಬೆಳೆದರೂ ಅದಕ್ಕೆ ಸಮರ್ಪಕ ದರ ಆಯಾ ಸಂದರ್ಭದಲ್ಲಿ ಸಿಗದಿರುವುದು ಶೋಚನೀಯ. ಈ ಎಲ್ಲಾ ಸಮಸ್ಯೆಗಳಿಗೆ ಆಡಳಿತ ನಡೆಸುವ ಸರಕಾರಗಳೇ ನೇರ ಹೊಣೆಗಾರರಾಗಿದ್ದಾರೆ.

ಅಂಗವೈಕಲ್ಯ ಎಂಬುವುದು ದೇಹಕ್ಕಲ್ಲ, ಮನಸ್ಸಿಗಲ್ಲ ಅದು ತನ್ನ ದಿನಚರಿಯಲ್ಲಿ ಕಂಡುಕೊಂಡ ವಿಚಾರವಾಗಿದೆ. ಯಾವುದೇ ರೈತನಾಗಲಿ ಹಗಲಿರುಳೆನ್ನದೆ ದುಡಿದು ಈ ದೇಶದ ಸಂಪತ್ತನ್ನು ಕ್ರೋಢೀಕರಿಸುತ್ತಾನೆ. ಅಂತಹ ರೈತನನ್ನು ಗುರುತಿಸಲು ಸರಕಾರಗಳು ವಿಫಲವಾಗಿವೆ. ಒಂದೊಮ್ಮೆ ಅದನ್ನು ಪಡೆಯಬೇಕಾದರೆ ಅದೇ ರೈತ ಪ್ರತಿಭಟನೆಗೆ ಇಳಿಯುವ ಸ್ಥಿತಿ ಸೃಷ್ಠಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಒಂದು ಸರಕಾರ ಮಾಡಬೇಕಾದ ಕಾರ್ಯ ಇಂತಹ ಸಂಘ ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಧ್ಯಯನಶೀಲ ಹಿರಿಯ ಕೃಷಿಕ ಭಾಸ್ಕರ್ ಶೆಟ್ಟಿ ಮಣೂರು ಮಾತನಾಡಿ, ರೈತರು ಕಷ್ಟಪಟ್ಟು ಬೆಳೆದ ಬೆಳೆ ಯಾರ ಪಾಲಾಗುತ್ತಿದೆ ಕೇಳಿದರೆ ಅದು ಖಾಸಗಿ ಮೀಲ್ ದಾರರಿಗೆ ವರವಾಗಿ ಪರಿಣಮಿಸಿದೆ. ತಾನು ಬೆಳೆದ ಬೆಳೆಗೆ ಸೂಕ್ತ ದರ ಸರಕಾರ ಘೋಷಿಸಬೇಕು ಆದರೆ ಸರಕಾರ ನಿರ್ಲಕ್ಷ್ಯ ತೋರಿದ ಪರಿಣಾಮ ಈ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಒಂದಿಷ್ಟು ಸಂಘ ಸಂಸ್ಥೆಗಳು ರೈತನ ಮನೆಬಾಗಿಲಿಗೆ ತೆರಳಿ ಗೌರವಿಸುವ ಕಾರ್ಯ ಇದೆಯಲ್ಲ ಅದು ರೈತನ ಆತ್ಮಬಲವನ್ನು ಇಮ್ಮಡಿಗೊಳಿಸುತ್ತದೆ. ಜೀವನದಲ್ಲಿ ಸರ್ವಶ್ರೇಷ್ಠ ಯಾವುದು ಕೇಳಿದರೆ ಅದು ರೈತಕಾಯಕ ಎಂದರೆ ಅತಿಶಯೋಕ್ತಿಯಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತೆಕ್ಕಟ್ಟೆಯ ಕೊಮೆ ವಿಶೇಷಚೇತನ ಸಾಧಕ ಕೃಷಿಕ ನಾಗರಾಜ್ ಮೊಗವೀರ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಮೃತ್ ಜೋಗಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಎ.ಪಿ.ಎಮ್.ಸಿ ಉಡುಪಿ ಉಪಾಧ್ಯಕ್ಷ ಕೃಷ್ಣ ಪೂಜಾರಿ ಪಿ, ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಶ್ರೀಕಾಂತ್ ಶೆಣೈ, ಗಿಳಿಯಾರು ಯುವಕ ಮಂಡಲದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೇರ್ಳೆ, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ವಿಪ್ರ ಮಹಿಳಾ ಬಳಗದ ಸಂಚಾಲಕಿ ವನೀತಾ ಉಪಾಧ್ಯ, ಸ್ಮಿತಾ, ಪಂಚವರ್ಣ ಯುವಕ ಮಂಡಲ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಸದಸ್ಯ ಭಾಸ್ಕರ ದೇವಾಡಿಗ, ನಾಗರಾಜ ಪೂಜಾರಿ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ ಹಂದಟ್ಟು ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿಪ್ರ ಮಹಿಳಾ ಬಳಗದ ಸುಜಾತ ಮಹೇಶ್ ಬಾಯರಿ ನಿರೂಪಿಸಿದರು. ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಪ್ರಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಸಂಚಾಲಕ ಅಜಿತ್ ಆಚಾರ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಾನವೀಯ ಮೌಲ್ಯಗಳೇ ವಿವೇಕಾನಂದರ ತತ್ವ: ಡಾ. ನಿಕೇತನ

ಉಡುಪಿ, ಜ.18: ಶಾಂತಿ ಮತ್ತು ಪ್ರೀತಿಯ ಮೂಲಕ ಮಾನವ ಜನಾಂಗ ಉತ್ತಮ...

ತಾಂತ್ರಿಕ ಸಹಾಯಕರ ಹುದ್ದೆ: ಅರ್ಜಿ ಅಹ್ವಾನ

ಉಡುಪಿ, ಜ.19: ಕೃಷಿ ಇಲಾಖೆಯ ವತಿಯಿಂದ ಅನುಷ್ಟಾನಗೊಳಿಸುತ್ತಿರುವ ಆಹಾರ ಮತ್ತು ಪೌಷ್ಟಿಕ...

ಜ. 19-21 ರವರೆಗೆ ನಾಟಕೋತ್ಸವ ಪ್ರದರ್ಶನ

ಉಡುಪಿ, ಜ.19: ಕಾರ್ಕಳ ಯಕ್ಷ ರಂಗಾಯಣ ಇವರ ವತಿಯಿಂದ ಜನವರಿ 19...

ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ಉಡುಪಿ, ಜ.19: ರಾಷ್ಟ್ರೀಯ ಹೆದ್ದಾರಿ 169 ಎ ರ ಉಡುಪಿ ನಗರ...
error: Content is protected !!