Sunday, January 19, 2025
Sunday, January 19, 2025

ಮನೆ ಮನೆಯಲ್ಲೂ ಸ್ವಚ್ಛತೆಯ ಧ್ಯೇಯಘೋಷ ಮೊಳಗಲಿ: ರವೀಂದ್ರ ಉಪಾಧ್ಯ

ಮನೆ ಮನೆಯಲ್ಲೂ ಸ್ವಚ್ಛತೆಯ ಧ್ಯೇಯಘೋಷ ಮೊಳಗಲಿ: ರವೀಂದ್ರ ಉಪಾಧ್ಯ

Date:

ಕೋಟ: ಸ್ವಚ್ಛತಾ ಅಭಿಯಾನಗಳು ಮನೆ ಮನೆಯಲ್ಲೂ ಆರಂಭಗೊಳ್ಳಬೇಕು ಆಗ ಮಾತ್ರ ಪರಿಸರ ಸುಂದರವಾಗಿಡಲು ಸಾಧ್ಯವಿದೆ ಎಂದು ಬ್ರಹ್ಮಾವರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗುಂಡ್ಮಿ ರವೀಂದ್ರ ಉಪಾಧ್ಯ ಹೇಳಿದರು.

ಕೋಟದ ಪಂಚವರ್ಣ ಯುವಕ ಮಂಡಲದ ನೇತೃತ್ವದಲ್ಲಿ ಗಿಳಿಯಾರು ಯುವಕ ಮಂಡಲ, ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ, ಯಕ್ಷಸೌರಭ ಕಲಾರಂಗ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಂಯುಕ್ತ ಸಂಯೋಜನೆಯಲ್ಲಿ ಪರಿಸರ ಸ್ನೇಹಿ ಸ್ವಚ್ಛತಾ ಅಭಿಯಾನ 107ನೇ ಭಾನುವಾರದ ಕಾರ್ಯಕ್ರಮದಲ್ಲಿ ಪಾಂಡೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರ‍ೀಯ ಹೆದ್ದಾರಿ ಸನಿಹ ಪ್ಲಾಸ್ಟಿಕ್ ಮುಕ್ತಗೊಳಿಸುವ ಆಂದೋನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ತ್ಯಾಜ್ಯದ ಕೊಂಪೆ ನಮ್ಮ ಪರಿಸರವನ್ನು ಆವರಿಸಿಕೊಂಡಿದೆ. ಇದರಿಂದ ವಿವಿಧ ರೀತಿಯ ಸಾಂಕ್ರಾಮಿಕ ಖಾಯಿಲೆಗಳು ಸೃಷ್ಠಿಯಾಗುತ್ತಿವೆ. ಪರಿಸರವನ್ನು ನಾವು ಆರಾಧಿಸಿದರೆ ಅವುಗಳು ನಮ್ಮನ್ನು ಹಾಗೂ ನಮ್ಮ ಮುಂದಿನ ಪೀಳಿಗೆಯನ್ನು ಕಾಯುತ್ತವೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಂಘ ಸಂಸ್ಥೆಗಳ ವಿವಿಧ ಬಗ್ಗೆಯ ಕಾರ್ಯಕ್ರಮಗಳು ಸಹಕಾರಿ.

ಈ ನಿಟ್ಟಿನಲ್ಲಿ ಕೋಟ ಭಾಗದ ಪಂಚವರ್ಣ ಯುವಕ ಮಂಡಲ ಹಾಗೂ ಅದರ ಮಿತ್ರ ಸಂಸ್ಥೆಗಳ ಕಾರ್ಯ ಶ್ಲಾಘನೀಯ. ಯಾವುದೇ ಕಾರ್ಯಕ್ರಮ ಆಯೋಜಿಸಿಕೊಂಡು ಬರುವುದು ಸುಲಭ. ಆದರೆ ಅದನ್ನು ನಿರಂತವಾಗಿ ಕೊಂಡೊಯ್ಯುವುದು ಬಹುದೊಡ್ಡ ಸಾಧನೆಯಾಗಿದೆ. ಇದಕ್ಕೆಲ್ಲ ನಮ್ಮ ಕಣ್ಮುಂದೆ ಇಂಥಹ ಸಂಘಟನೆಗಳೇ ಸಾಕ್ಷಿಯಾಗಿವೆ. ಪ್ಲಾಸ್ಟಿಕ್ ಅನ್ನು ಮಿತವಾಗಿ ಬಳಸಿ ಪರಿಸರವನ್ನು ಉಳಿಸಿ ಎಂಬ ಘೋಷವಾಕ್ಯ ನಮ್ಮೆಲ್ಲ ಕೇರಿಗಳಲ್ಲಿ ಮೊಳಗಲಿ ಎಂದು ಆಶಿಸಿದರು.

ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ಕಾರ್ಯಕ್ರಮದ ಮಾರ್ಗದರ್ಶಕ ಗುಂಡ್ಮಿ ರವೀಂದ್ರ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಪಟ್ಟಾಭಿರಾಮಚಂದ್ರ ಸೋಮಯಾಜಿ, ಗುಂಡ್ಮಿ ತಗ್ಗಿನಬೈಲು ಗುರಿಕಾರ ನಾರಾಯಣ ಪೂಜಾರಿ, ಕೋಟದ ಜನತಾ ಫಿಶ್ ಮಿಲ್ ಮ್ಯಾನೇಜರ್ ಶ್ರೀನಿವಾಸ್ ಕುಂದರ್, ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ, ಯಕ್ಷಸೌರಭ ಕಲಾರಂಗದ ಸತ್ಯನಾರಾಯಣ ಆಚಾರ್ಯ, ಪಂಚವರ್ಣ ಸಂಚಾಲಕ ಅಜಿತ್ ಆಚಾರ್ಯ, ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್ಯ, ಜೊತೆಕಾರ್ಯದರ್ಶಿ ಸಂದೇಶ್ ಆಚಾರ್ಯ, ಭಾಸ್ಕರ್ ದೇವಾಡಿಗ, ಸುಧೀರ್ ಕೊಯ್ಕೂರ್, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಹಂಗಾರಕಟ್ಟೆ ದೂಳಂಗಡಿ ಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಗಿಳಿಯಾರ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ನಿರೂಪಿಸಿದರು. ಕಾರ್ಯಕ್ರಮಕ್ಕೆ ಸಾಲಿಗ್ರಾಮ ಪಟ್ಟಣ ಪಂಚಾಯತ್, ಗೀತಾನಂದ ಫೌಂಡೇಶನ್ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!