Home ಸುದ್ಧಿಗಳು ಕ್ರೀಡೆ ಕಿರಿಯರಿಗೆ ವಿಶ್ವಕಪ್, ಹಿರಿಯರಿಗೆ ವಿಂಡೀಸ್ ವಿರುದ್ಧ ಭರ್ಜರಿ ಗೆಲುವು

ಕಿರಿಯರಿಗೆ ವಿಶ್ವಕಪ್, ಹಿರಿಯರಿಗೆ ವಿಂಡೀಸ್ ವಿರುದ್ಧ ಭರ್ಜರಿ ಗೆಲುವು

452
0

ಅಹ್ಮದಾಬಾದ್: ಅಂಡರ್-19 ವಿಶ್ವಕಪ್ ಗೆದ್ದು ಸಂಭ್ರಮಿಸುತ್ತಿರುವ ಕಿರಿಯರಿಗೆ, ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವನ್ನು ಸಾಧಿಸುವ ಮೂಲಕ ರೋಹಿತ್ ಶರ್ಮಾ ಪಡೆ ಸಂಭ್ರಮಾಚರಣೆಯಲ್ಲಿ ಸಾಥ್ ನೀಡಿದೆ.

ಇಂದು ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿ ವಿಂಡೀಸ್ ನ್ನು ಕಟ್ಟಿ ಹಾಕಿತು.

ಚಹಾಲ್ ಸ್ಪಿನ್ ಮೋಡಿಗೆ ತತ್ತರಿಸಿದ ವಿಂಡೀಸ್ ದಾಂಡಿಗರು ಪೆವಿಲಿಯನ್ ಯಾತ್ರೆ ಆರಂಭಿಸಿದರು. ಚಹಾಲ್ 4 ವಿಕೆಟ್ ಪಡೆದರು. ಜೇಸನ್ ಹೋಲ್ಡರ್ 57 ರನ್ ಗಳಿಸಿ ತಂಡವನ್ನು ಆಧರಿಸಿದರು. ವಾಷಿಂಗ್ಟನ್ ಸುಂದರ್ 3 ವಿಕೆಟ್ ಕಬಳಿಸಿದರು. ಕರ್ನಾಟಕದ ವೇಗಿ ಪ್ರಸಿದ್ ಕೃಷ್ಣಾ ಹತ್ತು ಓವರ್ ಗಳಲ್ಲಿ ಕೇವಲ 29 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಮಿಂಚಿದರು. 43.5 ಓವರ್ ಗಳಲ್ಲಿ ವೆಸ್ಟ್ ಇಂಡೀಸ್ 176ಕ್ಕೆ ಸರ್ವಪತನವಾಗಿ ಭಾರತಕ್ಕೆ ಸುಲಭದ ಗುರಿ ನೀಡಿತು.

ಆರಂಭಿಕ ಜೋಡಿ, ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರೆ ಇಶಾನ್ ಕಿಶನ್ ನಾಯಕನಿಗೆ ಸಾಥ್ ನೀಡಿದರು. ರೋಹಿತ್ ಶರ್ಮಾ 51 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ ಒಂದು ಬಾನೆತ್ತರದ ಹೊಡೆತದೊಂದಿಗೆ 60 ರನ್ ಗಳಿಸಿದರು.

ಮೊದಲ ವಿಕೆಟ್ಗೆ 84 ರನ್ ಜತೆಯಾಟ ನೀಡಿದ ರೋಹಿತ್-ಕಿಶನ್ ಜೋಡಿಯನ್ನು ಬೇರ್ಪಡಿಸುವಲ್ಲಿ ಅಲ್ಜಾರಿ ಜೋಸೆಫ್ ಯಶಸ್ವಿಯಾದರು. 116 ರನ್ ಆಗುವಷ್ಟರಲ್ಲಿ ಭಾರತ 4 ವಿಕೆಟ್ ಕಳೆದುಕೊಂಡಾಗ, ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಹೂಡಾ ಜೋಡಿ ಜವಾಬ್ದಾರಿಯುತ ಆಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಕೇವಲ 28 ಓವರ್ ಗಳಲ್ಲಿ ಭಾರತ 4 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.