ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ವತಿಯಿಂದ ವೃತ್ತಿಪರ ಮಾಸದಲ್ಲಿ ಸ್ವಹಿತ ಮೀರಿದ ಸೇವೆಯ ವೃತ್ತಿ ಶ್ರೇಷ್ಠರಿಗೆ ಸನ್ಮಾನಿಸುವ ಕಾರ್ಯಕ್ರಮ ಸಾಧನ -2022 ಚೇತನ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಸಲಾಯಿತು.
ಸರ್ವಕ್ಷೇಮ ಆಸ್ಪತ್ರೆ ಮತ್ತು ರಿಸರ್ಚ್ ಫೌಂಡೇಶನ್ ಮೂಡುಗಿಳಿಯಾರು ಇದರ ಎಂ.ಡಿ. ಡಾ. ವಿವೇಕ ಎ. ಉಡುಪ ಅವರನ್ನು ಹಾಗೆಯೇ ಶ್ರೀ ವೆಂಕಟೇಶ್ವರ ಸ್ವೀಟ್ಸ್ ಮಾಲಕ ಪಿ ಲಕ್ಷ್ಮೀನಾರಾಯಣ ರಾವ್ ಇವರನ್ನು ಸ್ವಹಿತ ಮೀರಿದ ಸೇವೆಗಾಗಿ ವೃತ್ತಿ ಶ್ರೇಷ್ಠರೆಂದು ಗುರುತಿಸಿ ಸನ್ಮಾನಿಸಲಾಯಿತು.
ಡಾ. ವಿವೇಕ ಉಡುಪ ಅವರು ಯೋಗ ಚಿಕಿತ್ಸೆ, ಆರೋಗ್ಯಕರ ಜೀವನ ಕ್ರಮ ಮತ್ತು ಜೀವನ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದರು. ರೋಟರಿ ಜಿಲ್ಲಾ 3182 ಇದರ ವೃತ್ತಿಪರ ಅವಾರ್ಡ್ ಕಮಿಟಿ ಚೇರ್ಮೆನ್ ಪುಂಡಲೀಕ ಮರಾಠೆ ಹಾಗೂ ರೋಟರಿ ವಲಯ 3ರ ಸಹಾಯಕ ಗವರ್ನರ್ ಪದ್ಮನಾಭ ಕಾಂಚನ್, ಯೋಗ ಗುರು ಡಾ. ವಿದ್ವಾನ್ ವಿಜಯ ಮಂಜರ್ ಉಪಸ್ಥಿತರಿದ್ದರು.
ಸಭೆಯ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷೆ ಯಶೋಧ ಸಿ. ಹೊಳ್ಳ ವಹಿಸಿದ್ದರು. ನರೇಂದ್ರ ಕುಮಾರ್ ಕೋಟ ಮತ್ತು ವಿಜ್ಞೇಶ್ವರ ಅಡಿಗ ಅಭಿನಂದನ ನುಡುಗಳನ್ನು ವಾಚಿಸಿದರು. ಕ್ಲಬ್‌ನ ವೃತ್ತಿಪರ ನಿರ್ದೇಶಕ ಆನಂದ ಎಂ., ಚೆರ್ಮೆನ್ ಪಿ.ಸಿ. ಹೊಳ್ಳ, ರೋಟರಿ ಸದಸ್ಯರು, ಮುಂತಾದವರು ಉಪಸ್ಥಿತರಿದ್ದರು.