Saturday, May 2, 2026
Saturday, May 2, 2026

ಕೆ.ಎಂ.ಸಿ ಮಣಿಪಾಲದ ಕ್ಲಿನಿಕಲ್‌ ಭ್ರೂಣಶಾಸ್ತ್ರ ಕೇಂದ್ರಕ್ಕೆ ‘ಸೆಂಟರ್‌ ಆಫ್‌ ಎಕ್ಸಲೆನ್ಸ್‌’ ಮಾನ್ಯತೆ

ಕೆ.ಎಂ.ಸಿ ಮಣಿಪಾಲದ ಕ್ಲಿನಿಕಲ್‌ ಭ್ರೂಣಶಾಸ್ತ್ರ ಕೇಂದ್ರಕ್ಕೆ ‘ಸೆಂಟರ್‌ ಆಫ್‌ ಎಕ್ಸಲೆನ್ಸ್‌’ ಮಾನ್ಯತೆ

Date:

ಮುಂಬೈ/ಮಣಿಪಾಲ, ಅ.22: ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಸುಧಾರಿತ ಜಾಗತಿಕ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಶ್ರಮಿಸುತ್ತಿರುವ ಪ್ರತಿಷ್ಠಿತ ಮರ್ಕ್‌ ಫೌಂಡೇಶನ್‌ ಸಂಸ್ಥೆಯು ಮಣಿಪಾಲ ಕೆಎಂಸಿಯ ಕ್ಲಿನಿಕಲ್‌ ಭ್ರೂಣಶಾಸ್ತ್ರ ಕೇಂದ್ರ [ಕ್ಲಿನಿಕಲ್‌ ಎಂಬ್ರಿಯಾಲಜಿ ಸೆಂಟರ್‌] ಕ್ಕೆ ‘ಸೆಂಟರ್‌ ಆಫ್‌ ಎಕ್ಸಲೆನ್ಸ್‌’ ಮಾನ್ಯತೆ ನೀಡಿದೆ. ಸೌಲಭ್ಯವಂಚಿತ ಸಮುದಾಯಗಳಿಗೆ ಆರೋಗ್ಯಸೇವೆಯನ್ನು ಹೆಚ್ಚಿಸುವುದರಲ್ಲಿ ಮರ್ಕ್‌ ಫೌಂಡೇಶನ್‌ ಬದ್ಧವಾಗಿದೆ. ‘ಮರ್ಕ್‌-ಮಾತೆಗಿಂತ ಮಿಗಿಲು’ [ಮರ್ಕ್‌ ಮೋರ್‌ ದೇನ್‌ ಎ ಮದರ್‌] ಎಂಬ ಪ್ರಮುಖ ಆರಂಭಿಕ ಧ್ಯೇಯದೊಂದಿಗೆ ಅನೇಕ ಆಫ್ರಿಕನ್‌ ಸಂಸ್ಥೆಗಳೊಂದಿಗೆ, ಒಡಂಬಡಿಕೆಯನ್ನು ಮಾಡಿಕೊಂಡಿದೆ. ಸಾಕಷ್ಟು ಸೌಲಭ್ಯಗಳಿಲ್ಲದ ಪ್ರದೇಶಗಳಲ್ಲಿ ಸುಧಾರಿತ ಫಲವಂತಿಕೆಯ ಆರೈಕೆಯ ಅಗತ್ಯದ ಕಡೆ ಇದು ಗಮನಹರಿಸುತ್ತಿದೆ. ಸಾಮರ್ಥ್ಯ-ನಿರ್ಮಾಣದ ಯೋಜನೆಗಳಲ್ಲಿ ಮಣಿಪಾಲ ಕೆಎಂಸಿಯಲ್ಲಿರುವ ಶುಶ್ರೂಷಾ ಭ್ರೂಣಶಾಸ್ತ್ರ [ಕ್ಲಿನಿಕಲ್‌ ಎಂಬ್ರಿಯಾಲಜಿ] ಕೇಂದ್ರವು ಪ್ರಮುಖ ಜಾಗತಿಕ ಮಟ್ಟದ ಸಹಭಾಗಿಯಾಗಿದೆ. ಮರ್ಕ್‌ ಪೌಂಡೇಶನ್‌ ಮತ್ತು ಮಣಿಪಾಲದ ಕೆಎಂಸಿ ಸಂಯುಕ್ತ ಸಹಕಾರದಿಂದಾಗಿ 27 ದೇಶಗಳಲ್ಲಿನ ಸುಮಾರು ನೂರು ವೈದ್ಯರು ಮತ್ತು ವಿಜ್ಞಾನಿಗಳು ಉನ್ನತ ಶ್ರೇಣಿಯ ಭ್ರೂಣಶಾಸ್ತ್ರ ತರಬೇತಿಯನ್ನು ಮಣಿಪಾಲದಲ್ಲಿ ಪಡೆದಿದ್ದಾರೆ, ಈ ತರಬೇತಿ ಪಡೆದ ವೃತ್ತಿಪರರು ಅವರವರ ದೇಶಗಳಲ್ಲಿ ಬಂಜೆತನದ ಕಾಳಜಿಯ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ.

ಈ ಮಾನ್ಯತೆಯನ್ನು ಮುಂಬೈಯಲ್ಲಿ ಜರಗಿದ ಮರ್ಕ್‌-ಆಫ್ರಿಕಾ-ಏಷ್ಯಾ ಪ್ರಸಿದ್ಧ ಸಮಾವೇಶದಲ್ಲಿ ಪ್ರದಾನ ಮಾಡಲಾಯಿತು. ಮರ್ಕ್‌ ಫೌಂಡೇಶನ್‌ನ ಸಿಇಓ ಸೆನೆಟರ್‌ ಡಾ. ರಾಶ ಕಲೇಜ್‌, ಇ-ಮರ್ಕ್‌-ಕೆಜಿಯ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಪ್ರೊ. ಡಾ. ಫ್ರ್ಯಾಂಕ್‌ ಸ್ಟ್ಯಾಂಜನ್‌ಬರ್ಗ್‌-ಹ್ಯಾವರ್‌ಕ್ಯಾಂಪ್‌, 14 ಆಫ್ರಿಕನ್‌ ದೇಶಗಳ ಪ್ರಥಮ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಾಹೆಯ ಪ್ರೊ ವೆ,ಸ್‌ ಛಾನ್ಸಲರ್‌ ಡಾ. ಶರತ್‌ ರಾವ್‌, ಮಣಿಪಾಲ ಕೆಎಂಸಿಯ ಕ್ಲಿನಿಕಲ್‌ ಭ್ರೂಣಶಾಸ್ತ್ರ ಕಾರ್ಯಸೂಚಿಯ ಮುಖ್ಯಸ್ಥ ಡಾ. ಸತೀಶ್‌ ಅಡಿಗ ಈ ಪುರಸ್ಕಾರವನ್ನು ಸ್ವೀಕರಿಸಿದರು. ಈ ಮೂಲಕ ಏಷ್ಯಾದ ಪ್ರಮುಖ ಐವಿಎಫ್‌ ತರಬೇತಿ ಕೇಂದ್ರವಾಗಿರುವ ಮಣಿಪಾಲ ಕೆಎಂಸಿಯ ಕ್ಲಿನಿಕಲ್‌ ಎಂಬ್ರಿಯಾಲಜಿ ಕೇಂದ್ರವು ದಾಖಲೆಯನ್ನು ಮಾಡಿದೆ. ಈ ಕೇಂದ್ರವು ಜಗತ್ತಿನಲ್ಲಿ ಬಂಜೆತನದಲ್ಲಿ ಬಳಲುತ್ತಿರುವ ದಂಪತಿಗಳಿಗೆ ನೆರವಾಗುವುದಕ್ಕಾಗಿ ನೂರಾರು ವೈದ್ಯರು ಮತ್ತುವಿಜ್ಞಾನಿಗಳನ್ನು ಸಜ್ಜುಗೊಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದೋಣಿ ದುರಂತ: ಸಾವನ್ನಪ್ಪಿದವರ ಸಂಖ್ಯೆ 9 ಕ್ಕೆ ಏರಿಕೆ

ಜಬಲ್ಪುರ, ಮೇ 1: ಮಧ್ಯಪ್ರದೇಶದಲ್ಲಿ, ಜಬಲ್ಪುರದಲ್ಲಿ ನಡೆದ ಕ್ರೂಸ್ ದೋಣಿ ದುರಂತದಲ್ಲಿ...

ಪಶ್ಚಿಮ ಬಂಗಾಳದ 15 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ

ನವದೆಹಲಿ, ಮೇ.1: ಪಶ್ಚಿಮ ಬಂಗಾಳದ 15 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಚುನಾವಣಾ...

ವಾಣಿಜ್ಯ ಎಲ್‌ಪಿಜಿ ಬೆಲೆ ಏರಿಕೆ

ನವದೆಹಲಿ, ಮೇ 1: ಮೇ 1 ರಿಂದ ಜಾರಿಗೆ ಬರುವಂತೆ 19...

ಕಾರ್ಮಿಕರು ದೇಶದ ಅಭಿವೃದ್ಧಿಯ ಶಿಲ್ಪಿಗಳು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಮೇ.1: ಕಾರ್ಮಿಕರು ದೇಶದ ಆರ್ಥಿಕ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಶಿಲ್ಪಿಗಳು...
error: Content is protected !!