Saturday, May 9, 2026
Saturday, May 9, 2026

ಕೆಮ್ಮಣ್ಣು: ಕಳ್ಳತನ ಮಾಡಿದ ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ

ಕೆಮ್ಮಣ್ಣು: ಕಳ್ಳತನ ಮಾಡಿದ ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ

Date:

ಉಡುಪಿ: ಕೆಮ್ಮಣ್ಣುವಿನಲ್ಲಿ ಎಲೆಕ್ಟ್ರಾನಿಕ್ ವಸ್ತು ಹಾಗೂ ನಗದನ್ನು ಕಳವು ಮಾಡಿದ ಆರೋಪಿಗೆ ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

2014 ಫೆಬ್ರವರಿ 23 ರಂದು ಮಧ್ಯರಾತ್ರಿ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟು ವಾಸಿ ಗಿರೀಶ್ ಎಂಬಾತನು, ಪಡುತೋನ್ಸೆ ಗ್ರಾಮದ ಕೆಮ್ಮಣ್ಣುವಿನ ಕಾವ್ಯಾ ರವರ ಮನೆಯಲ್ಲಿ ಲ್ಯಾಪ್‌ಟಾಪ್, ಮೊಬೈಲ್ ಹಾಗೂ 700 ರೂ. ನಗದು ಕಳವು ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ರವರು ಆರೋಪಿ ಗಿರೀಶ್‌ಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 10,000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಫೆಮಿನಾ ಮಿಸ್ ಇಂಡಿಯಾ -2026 ಗೆದ್ದ ಸಾಧ್ವಿ ಸತೀಶ್ ಸೈಲ್ ಅಭಿನಂದಿಸಿದ ಸಿಎಂ

ಬೆಂಗಳೂರು, ಮೇ 8: ಒಡಿಶಾದ ಭುವನೇಶ್ವರದಲ್ಲಿ ನಡೆದ 61ನೇ "ಫೆಮಿನಾ ಮಿಸ್...

ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ: ಪಾಂಡುರಂಗ ಪೈ ಸಿದ್ದಾಪುರ

ಸಿದ್ಧಾಪುರ, ಮೇ 8: ಮಕ್ಕಳು ಪ್ರತಿದಿನವೂ ಶ್ರದ್ಧೆ, ದೃಢಸಂಕಲ್ಪ, ಕಾರ್ಯ ತತ್ಪರತೆಯಿಂದ...

ಸಂಚಾರ ಸ್ಥಗಿತಗೊಳಿಸಿರುವ ಬಸ್‌ಗಳ ಮಾಹಿತಿ ನೀಡಲು ಸೂಚನೆ

ಉಡುಪಿ, ಮೇ 8: ಜಿಲ್ಲೆಯ ವಿವಿಧ ಭಾಗಗಳಿಗೆ ಪರವಾನಿಗೆ ಹೊಂದಿ ಈಗಾಗಲೇ...

ನೂರಕ್ಕೆ ನೂರು ಅಂಕ ಪಡೆದ 54 ವಿದ್ಯಾರ್ಥಿಗಳಿಗೆ ಕಸಾಪ ಗೌರವ

ಉಡುಪಿ, ಮೇ 8: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ...
error: Content is protected !!