Tuesday, September 22, 2026
Tuesday, September 22, 2026

ಲಿಂಗ ಸಮಾನತೆ ಕಾರ್ಯಗಾರ

ಲಿಂಗ ಸಮಾನತೆ ಕಾರ್ಯಗಾರ

Date:

ಮಂಗಳೂರು, ಜೂ.27: ಮಹಿಳಾ ಸಬಲೀಕರಣ ಯೋಜನೆಯಡಿಯಲ್ಲಿ ರಚಿತವಾದ ಲಿಂಗ ಸಮಾನತಾ ಪ್ರೇರಕ ತಂಡಕ್ಕೆ ಲಿಂಗ ಸಮಾನತೆಯ ಕುರಿತು ಕಾರ್ಯಗಾರವನ್ನು ಸಿಒಡಿಪಿ ಸಂಸ್ಥೆಯ ಐಎಸ್‌ಡಿ ಹಾಲ್ನಲ್ಲಿ ಆಯೋಜಿಸಲಾಯಿತು. ಸಭೆಯ ಅದ್ಯಕ್ಷತೆಯನ್ನು ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ವಿನ್ಸೆಂಟ್ ಡಿಸೋಜರವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಡೀಡ್ಸ್ ಸಂಸ್ಥೆಯ ತುಕರಾಮ್ ತರಬೇತಿಯನ್ನು ನೀಡಿದರು. ಗಂಡು-ಹೆಣ್ಣಿನ ಮೇಲಿನ ಮನೋಭಾವ, ತಾರತಮ್ಯತೆ ಸಮಾಜದಲ್ಲಾಗಬೇಕಾದ ಬದಲಾವಣೆಯ ಕುರಿತು ಮಾಹಿತಿ ನೀಡಿ ಗುಂಪು ಚಟುವಟಿಕೆಗಳ ಮೂಲಕ ಲಿಂಗಸಮಾನತೆಯ ಕುರಿತು ತರಬೇತಿ ನೀಡುವ ವಿಧಾನವನ್ನು ತಿಳಿಸಿಕೊಟ್ಟರು. ಕಾರ್ಯಗಾರದಲ್ಲಿ ೪೦ ಮಂದಿ ಒಕ್ಕೂಟ/ ಮಹಾಸಂಘದ ಮಹಿಳೆಯರು ಭಾಗವಹಿಸಿದ್ದರು. ಸಂಸ್ಥೆಯ ಸಹ ನಿರ್ದೇಶಕರಾದ ವಂದನೀಯ ಫಾದರ್ ಲಾರೆನ್ಸ್ ಕುಟಿನ್ಹಾ, ಮಹಿಳಾ ಸಬಲೀಕರಣ ಯೋಜನಾ ಸಂಯೋಜಕಿ ಸುಪ್ರಿಯಾ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಂದಾಪುರದ ಇಂಪನಾ ಆರ್. ಅವರಿಗೆ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಕುಂದಾಪುರ, ಸೆ.22: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ...

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ ಶೈಕ್ಷಣಿಕ ಭೇಟಿ

ಕುಂದಾಪುರ, ಸೆ.22: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು,...

ಎನ್ಎಸ್ಎಸ್ ಸ್ವಯಂಸೇವಕರಿಂದ ತ್ರಾಸಿ ಬೀಚ್ ಕ್ಲೀನಿಂಗ್

ಕುಂದಾಪುರ, ಸೆ.22: ಅಂತಾರಾಷ್ಟ್ರೀಯ ಕೊಸ್ಟಲ್ ಕ್ಲೀನ್ ಆಫ್ ಡೇ ಆಚರಣೆ ಪ್ರಯುಕ್ತ...
error: Content is protected !!