Wednesday, July 22, 2026
Wednesday, July 22, 2026

ಪ್ರಸಾದ ಎಸಳು ಚರ್ಚಾಗೋಷ್ಠಿ

ಪ್ರಸಾದ ಎಸಳು ಚರ್ಚಾಗೋಷ್ಠಿ

Date:

ಮಂಗಳೂರು, ಮಾ.21: ಪ್ರಾಚೀನ ಸಂಪ್ರದಾಯದಂತೆ ಗೋವಾದಲ್ಲಿ ಹೆಚ್ಚು ಪ್ರಚಲಿತವಿರುವ ‘ಪ್ರಸಾದ ಎಸಳು’ ಎಂಬ ಅಧ್ಯಯನದ ಬಗ್ಗೆ ಪುರೋಹಿತರ ಮೂಲಕ ಭಕ್ತನು ದೇವರಲ್ಲಿ ಪ್ರಾರ್ಥಿಸಿಕೊಂಡಾಗ ಮೂರ್ತಿ ಅಥವಾ ಪೀಠದಲ್ಲಿ ಹಚ್ಚಿದ ಹೂವಿನ ಎಸಳು ಕೆಳಗೆ ಬೀಳುತ್ತದೆ. ಈ ಸಂಪ್ರದಾಯವು ತುಂಬಾ ದೈವಿಕ ಪ್ರಜ್ನೆಯಿಂದ ಕೂಡಿದ್ದು ಇಂದು ನಶಿಸಿ ಹೋಗುತ್ತಿದೆ. ಈ ‘ಪ್ರಸಾದ ಎಸಳು’ (ಪ್ರಸಾದ ಪಾಕಳಿ) ದೈವಿಕ ಪರಿಕಲ್ಪನೆಯ ಬಗ್ಗೆ ಮಾನವಿಕಶಾಸ್ತ್ರದ ಹಿನ್ನಲೆಯಲ್ಲಿ ಸಂಶೋಧನೆ ನಡೆಸುತ್ತಿರುವ ಗೋವಾದ ಡಾ. ಬಾಲಾಜಿ ಶೆಣೈ ದೀಪ ಬೆಳಗಿಸಿ ಉದ್ಘಾಟಿಸಿದರು. ವಿವರಣಾತ್ಮಕ ಸಂಶೋಧನಾ ಅಧ್ಯಯನದ ಚರ್ಚಾಗೋಷ್ಠಿಯಲ್ಲಿ ಧಾರ್ಮಿಕ ಚಟುವಟಿಕೆಯ ಬಗ್ಗೆ ಸಭಿಕರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಾ ವಿವಿಧ ದೇವಾಲಯಗಳಲ್ಲಿ ಹೂವಿನ ಎಸಳುಗಳನ್ನು ಹಚ್ಚುವ ವಿನ್ಯಾಸ ಮತ್ತು ಅರ್ಥವನ್ನು ವಿವರಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿಎ ನಂದಗೋಪಾಲ ಶೆಣೈ ಸ್ವಾಗತಿಸಿದರು. ಹಿರಿಯರಾದ ಪಯ್ಯನೂರು ರಮೇಶ ಪೈ, ಸಿ.ಎ. ಜಯಂತ ಶೆಣೈ ನಗರ್, ಎಮ್ ಗಣೇಶ್ ಭಟ್, ವಸಂತ ಶೆಣೈ, ಸಿ.ಎ. ಎಮ್ ಎನ್ ಪೈ, ಪ್ರೊ ಪ್ರಕಾಶ ಮಲ್ಯ, ಅನ್ನು ಮಂಗಳೂರು, ಸ್ಥಳೀಯ ದೇವಸ್ಥಾನದ ಪ್ರತಿನಿಧಿಗಳು ಹಾಗೂ ಇತರ ಗಣ್ಯರು ಆಸಕ್ತ ವಿದ್ಯಾರ್ಥಿಗಳೂ ಭಾಗವಹಿಸಿದ್ದರು. ಸುಚಿತ್ರಾ ಎಸ್ ಶೆಣೈ ಕಾರ್ಯಕ್ರಮ ನಿರೂಪಿಸಿ ಅಧ್ಯಯನ ಯೋಜನೆಯ ಸಂಶೋಧಕರನ್ನು ಪರಿಚಯಿಸಿದರು. ಕೇಂದ್ರದ ಸಿ ಎ.ಒ ಡಾ. ಬಿ ದೇವದಾಸ ಪೈ ವಂದಿಸಿದರು. ಸಂಶೋಧಕ ಗೋವಾದ ಡಾ. ಬಾಲಾಜಿ ಶೆಣೈರವರನ್ನು ಸನ್ಮಾನಿಸಿ ಗೌರವಿಸಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬೊಮ್ಮರಬೆಟ್ಟು: ಗ್ರಾಮಸ್ಥರ ಅಹವಾಲು ಸ್ವೀಕಾರ

ಕಾಪು, ಜು.21: ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರ ಅಹವಾಲು ಸ್ವೀಕಾರ...

ರಿಕ್ಷಾ ಚಾಲಕರ ಅಗತ್ಯ ಬೇಡಿಕೆಗಳ ಈಡೇರಿಕೆಗೆ ವಿಶೇಷ ಆದ್ಯತೆ: ಯಶ್ಪಾಲ್ ಸುವರ್ಣ

ಬ್ರಹ್ಮಾವರ, ಜು.21: ಸಾರ್ವಜನಿಕರ ಸಾರಿಗೆ ವ್ಯವಸ್ಥೆಯಲ್ಲಿ ವಿಶೇಷ ಪಾತ್ರವಹಿಸುವ ರಿಕ್ಷಾ ಚಾಲಕರ...

ಬಡಾ ಗ್ರಾಮ ಪಂಚಾಯತ್: ವಿವಿಧ ಸವಲತ್ತು ವಿತರಣೆ

ಕಾಪು, ಜು.21: ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರ ಅಹವಾಲು ಸ್ವೀಕಾರ...

ಕ್ರೀಡಾ ದಾಖಲೆಗಳ ಮಾಹಿತಿ ಹಾಗೂ ತರಬೇತಿ ಸಾಧನೆಗೆ ಸ್ಪೂರ್ತಿ: ಡಾ.ಸುಧಾಕರ ಶೆಟ್ಟಿ

ಮಣಿಪಾಲ, ಜು.21: ಕ್ರೀಡಾ ದಾಖಲೆಗಳ ಮಾಹಿತಿ ಹಾಗೂ ತರಬೇತಿ ವಿದ್ಯಾರ್ಥಿಗಳ ಸಾಧನೆಗೆ...
error: Content is protected !!